Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಜಾತಿ ಜನಗಣತಿ ವರದಿ ಬಿಡುಗಡೆಗೆ ಅಹಿಂದ ಸಮುದಾಯಗಳ ಆಗ್ರಹ

06:08 PM Oct 03, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಅ. 03 : ಶೋಷಿತರ ಗುಂಪಿನೊಳಗಿನ ಶೋಷಿತರನ್ನು ಸಮಾಜದ ಮುಖ್ಯವಾಹನಿಗೆ ತರುವ ಸಲುವಾಗಿ, ವಿಳಂಬ ಮಾಡದೆ, ರಾಜ್ಯದಲ್ಲಿ "ಒಳ ಮೀಸಲಾತಿ" ಅನುಷ್ಟಾನಗೊಳಿಸಲು ಹಾಗೂ ಹೆಚ್.ಕಾಂತರಾಜ್ ನೇತೃತ್ವದ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಜನಗಣತಿ) ವರದಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಅಹಿಂದ ಸಮುದಾಯಗಳವತಿಯಿಂದ ಸರ್ಕಾರಕ್ಕೆ ಆಗ್ರಹಿಸಲಾಯಿತು.

Advertisement

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಹಿಂದ ಚಳುವಳಿ,ಸಂಘಟಣೆಯ ಜಿಲ್ಲಾ ಸಂಚಾಲಕರಾದ ಕೆಂಚಪ್ಪ ಭಾರತ ಸಂವಿಧಾನದ ಅನುಚ್ಚೇದ 19ರ ಅವಕಾಶಗಳಡಿ ನಮ್ಮ ಸಂಘಟಣೆಯನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿರುವ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳನ್ನು ಈ ಸಂಘಟಣೆಯು ಪ್ರತಿನಿಧಿಸುತ್ತದೆ ದೇಶಕ್ಕೆ ಸ್ವಾತಂತ್ರ್ಯ ಪಲಿಸಿ ಮತ್ತು ಭಾರತ ಸಂವಿಧಾನ ಜಾರಿಗೊಂಡು 75 ವರ್ಷಗಳು ಕಳೆದಿವೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಈಗಲೂ ಅಹಿಂದ ಸಮುದಾಯಗಳು-ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಿಲ್ಲ. ಸಂಘಟಿತರಾಗಿಲ್ಲ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಅಹಿಂದ ಸಮುದಾಯಗಳಲ್ಲಿ ಹೆಚ್ಚಿವೆ; ಈ ಅಹಿಂದ ಸಮುದಾಯಗಳನ್ನು ಸಂಘಟಿಸಬೇಕು. ಈ ಅಹಿಂದ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರನ್ನು ಗುರುತಿಸಿ. ಅವರಿಗೆ ಆರ್ಥಿಕ ಶಕ್ತಿ ತುಂಬಬೇಕು; ಅಂತಿಮವಾಗಿ ಈ ಸಮುದಾಯಗಳಿಗೆ ರಾಜಕೀಯ ಪ್ರಜ್ಞೆ ಮತ್ತು ರಾಜಕೀಯ ಶಕ್ತಿ ತುಂಬಿ, ಈ ದೇಶದ ಸಂಪತ್ತು ಮತ್ತು ಆರ್ಥಿಕ ಶಕ್ತಿಗಳನ್ನು ಸಮನಾಗಿ ಹಂಚಿಕೆ ಮಾಡಿಸಬೇಕು: ಆ ಮೂಲಕ ದೇಶದಲ್ಲಿ ಸಮ ಸಮಾಜ ನಿರ್ಮಾಣ ಮಾಡಬೇಕು ಮತ್ತು "ಸಮಾನತೆಯ ಭಾರತ ರಾಷ್ಟ್ರ" ನಿರ್ಮಾಣ ಮಾಡಬೇಕೆಂಬ ಮೂಲ ಉದ್ದೇಶಗಳನ್ನು ಹೊಂದಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿ 1990ರ ದಶಕದಿಂದ ಮಾದಿಗ ಜಾತಿಯವರು, ಸಂಘಟನೆಗಳು, ಸಮುದಾಯಗಳು ಸಂಘಟಿತರಾಗಿ ಒಳ ಮೀಸಲಾತಿಗಾಗಿ ನಡೆಸಿದ ಹಲವು ಹೋರಾಟಗಳ ಫಲವಾಗಿ 2004ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೇಸ್ ಸರ್ಕಾರ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವನ್ನು ನೇಮಕ ಮಾಡಿತು. ಈ ಆಯೋಗವು ಸುಮಾರು 7 ವರ್ಷಗಳ ಅವದಿ, ಅಧ್ಯಯನ ನಡೆಸಿ ದಿನಾಂಕ 14-7-2012ರಂದು ಅಂದಿನ ಮುಖ್ಯಮಂತ್ರಿ ಸದಾನಂದಗೌಡ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿ ಸರ್ಕಾರಕ್ಕೆ ಮಂಡನೆಯಾದ ತರುವಾಯದ ದಿನದಿಂದ ಈವರೆಗೆ, ಪ್ರಮುಖವಾಗಿ, ಮಾದಿಗ ಜಾತಿಯವರು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಟಾನ ಗೊಳಿಸಬೇಕೆಂದು ನಿರಂತರ ಹೋರಾಟಗಳನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ ಎಂದರು.

ಶಿವಮೊಗ್ಗದ ಜಿಲ್ಲಾ ಮುಖ್ಯ ಸಂಚಾಲಕರಾದ ಸನಾವುಲ್ಲಾ ಮಾತನಾಡಿ, ಬೊಮ್ಮಾಯಿ ನೇತೃತ್ವದ ಸರ್ಕಾರ, ಸರ್ಕಾರಿ ಆದೇಶವೊಂದನ್ನು ಹೊರಡಿಸಿ, ಮಾದಿಗೆ ಜಾತಿಯವರಿಗೆ ಶೇ.6; ಹೊಲೆಯ ಜಾತಿಯವರಿಗೆ ಶೇ5.5 ಬೋವಿ ಮತ್ತು ಲಂಬಾಣಿ ಜಾತಿಯವರಿಗೆ ಶೇ.4.5, ಮತ್ತು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇನ್ನೂಳಿದ ಜಾತಿಗಳಿಗೆ ಶೇ. 1ರಷ್ಟು ಹೀಗೆ ಒಟ್ಟು ಶೇ. 17 ಪ್ರಮಾಣದ ಮೀಸಲಾತಿಯನ್ನು ನಿಗದಿಪಡಿಸಿರುವುದಾಗಿ ಆದೇಶಿಸಿತು. ಕರ್ನಾಟಕ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ರಾಜ್ಯದಲ್ಲಿ ಒಳ ಮೀಸಲಾತಿಗೆ ಅವಕಾಶಗಳನ್ನು ಕೋರಿತು. ಕರ್ನಾಟಕ ರಾಜ್ಯದಲ್ಲಿ 2023ರಲ್ಲಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಹಾಲಿ ಸರ್ಕಾರ ರಾಜ್ಯದಲ್ಲಿ ಒಳ ಮೀಸಲಾತಿ ಅನುಷ್ಟಾನ ಮಾಡಲು ಭಾರತ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿಗಳನ್ನು ತರಲು, ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು, ಕೇಂದ್ರ ಸರ್ಕಾರಕ್ಕೆ ತನ್ನ ವಿನಂತಿಯನ್ನು ಕಳುಹಿಸಿತು.

ಕರ್ನಾಟಕ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ, ಒಳ ಮೀಸಲಾತಿಯ ಸರ್ಕಾರಿ ಆದೇಶ ಇನ್ನೂ ಪೆಪರ್‍ನಲ್ಲಿದೆ. ಆದರೆ, ಕಾರ್ಯರೂಪದಲ್ಲಿ ಜಾರಿಯಾಗಿಲ್ಲ. ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯದಲ್ಲಿ 2023ರಲ್ಲಿ ಜರುಗಿದೆ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಒಳ ಮೀಸಲಾತಿ ಅನುಷ್ಟಾನಗೊಳಿಸುವ ಘೋಷಣೆ ಮಾಡಿತ್ತು. ಆ ಘೋಷಣೆ ಇನ್ನೂ ಅನುಷ್ಟಾನವಾಗಿಲ್ಲ. ಹಾಲಿ ಸಮಾಜದೊಳಗಿನ ಅಸಮಾನತೆಗಳ ಸತ್ಯಾಸತ್ತೆತೆಗಳನ್ನು ತಿಳಿಯಬೇಕಿದೆ. ಈಗಲೂ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು, ಮೀಸಲಾತಿ,ಒಳ ಮೀಸಲಾತಿ ಒಳಗೊಂಡಂತೆ ಮತ್ತಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸಬೇಕಿದೆ. ಸಮ ಸಮಾಜ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಶ್ರೀ ಹೆಚ್.ಕಾಂತರಾಜ್ ನೇತೃತ್ವದ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015(ಜಾತಿ ಜನಗಣತಿ) ವರದಿಯನ್ನು ಶ್ರೀ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ಸರ್ಕಾರಕ್ಕೆ ಸಲ್ಲಿಸಿದ್ದು, ಆ ವರದಿ ಬಿಡುಗಡೆಯಾಗಬೇಕಿದೆ ಎಂದು ಒತ್ತಾಯಿಸಿದರು.

ಗೋಷ್ಟಿಯಲ್ಲಿ ಸತ್ಯಪ್ಪ ಮಲ್ಲಾಪುರ, ಸಹ ಸಂಚಾಲಕರಾದ ತಿಪ್ಪೇಸ್ವಾಮಿ, ಯಾದವ ಮುಖಂಡರಾದ ಆನಂದ ಕುಮಾರ್, ಕೈಸ್ತ ಸಮುದಾಯದ ಮುಖಂಡರಾದ ಅವಿನಾಶ್, ರಾಜ್ಯ ಕಾರ್ಯದರ್ಶಿ ಸುರೇಂದ್ರ, ರಾಜ್ಯ ಖಂಜಾಚಿ ಸುಬ್ಬಣ್ನ ನಾಗರಾಜ, ವಿನೋಧ್ ಭದ್ರಾವತಿ, ಕುರುಬ ಸಮುದಾಯದ ಮುಖಂಡರಾದ ಕರಿಯಪ್ಪ, ಜಗದೀಶ್, ಶಂಕರ್ ರಾವ್, ರಾಜಪ್ಪ, ಶ್ರೀಮತಿ ಜ್ಯೋತಿ ಲಕ್ಷ್ಮೀ, ಶ್ರೀಮತಿ ವರಲಕ್ಷ್ಮೀ, ಶ್ರೀಮತಿ ವಿನೋಧಮ್ಮ, ಶರೀಫವುಲ್ಲಾ ಖಾನ್, ಜಮೀರ್, ಮಲ್ಲಿಕಾರ್ಜನ್ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
backward communitiesbengalurucaste census reportchitradurgademandsuddionesuddione newsಅಹಿಂದಆಗ್ರಹಚಿತ್ರದುರ್ಗಜಾತಿ ಜನಗಣತಿ ವರದಿಬಿಡುಗಡೆಬೆಂಗಳೂರುಸಮುದಾಯಗಳುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article