Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ : ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಭರಮಸಾಗರ ಪಿಡಿಒ

07:53 PM Dec 16, 2023 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.16 : ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಭರಮಸಾಗರ ಗ್ರಾಮ ಪಂಚಾಯಿತಿ ಪಿಡಿಒ ಶಿವಪ್ಪ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Advertisement

ತಾಲ್ಲೂಕಿನ ಭರಮಸಾಗರ ವಾಸಿ ಬಿ.ಎನ್. ಕುಮಾರಸ್ವಾಮಿ ಇವರ ತಾಯಿಯವರು ಗ್ರಾಮದಲ್ಲಿ 1965ರಲ್ಲಿ ಒಂದು ಮನೆಯನ್ನು ಖರೀದಿಸಿದ್ದು, ಅವರು 1993ರಲ್ಲಿ ಮರಣ ಹೊಂದಿರುತ್ತಾರೆ. ಮನೆಯನ್ನು ತನ್ನ ಮತ್ತು ತನ್ನ ಅಣ್ಣಂದಿರುಗಳ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿಕೊಳ್ಳುವ ಸಲುವಾಗಿ ಗ್ರಾಮ ಪಂಚಾಯತಿ ಪಿಡಿಒ ಶಿವಪ್ಪ ಅವರು ಹೊಳಲ್ಕೆರೆ , ಸ್ಟ್ಯಾಂಪ್‌ವೆಂಡರ್ ಕಲ್ಲೇಶ್ ಅವರ ಮುಖಾಂತರ ಅವರ ಖಾತೆ ಬದಲಾವಣೆ ಮಾಡಿಕೊಡಲು ರೂ.50,000/-ಗಳ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿರುತ್ತಾರೆ.

ಪಿಡಿಒ ವಿರುದ್ಧ ಕುಮಾರಸ್ವಾಮಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು (ಶನಿವಾರ) ಬಿ.ಎನ್. ಕುಮಾರಸ್ವಾಮಿ ಅವರಿಂದ ರೂ. 40,000/-ಗಳ ಲಂಚದ ಹಣವನ್ನು ಪಡೆಯುವಾಗ ಅಧಿಕಾರಿಗಳು ಪಿಡಿಒ ಶಿವಪ್ಪ ಮತ್ತು ಸ್ಟಾಂಪ್ ವೆಂಡರ್ ಕಲ್ಲೇಶ್ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಲೋಕಾಯುಕ್ತ ಪೊಲೀಸರು ಆರೋಪಗಳನ್ನು ಬಂಧಿಸಿದ್ದಾರೆ.

Advertisement

ಮುಂದಿನ ತನಿಖೆಯನ್ನು ಆರ್. ವಸಂತ ಕುಮಾರ್, ಪೊಲೀಸ್ ನಿರೀಕ್ಷಕರು ಇವರು ಕೈಗೊಂಡಿದ್ದು ಅಧೀಕ್ಷಕರಾದ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ಪೊಲೀಸ್ ಉಪಾಧೀಕ್ಷಕರಾದ ಎನ್. ಮೃತ್ಯುಂಜಯ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಚಿತ್ರದುರ್ಗ ಲೋಕಾಯುಕ್ತ ಕಛೇರಿಯ, ಪೊಲೀಸ್ ನಿರೀಕ್ಷಕರುಗಳಾದ ಶ್ರೀಮತಿ ವೈ.ಎಸ್. ಶಿಲ್ಪಾ, ಬಿ. ಮಂಜುನಾಥ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜಿ.ಎಂ.ತಿಪ್ಪೇಸ್ವಾಮಿ, ಸಿ.ಹೆಚ್.ಸಿ. ಹೆಚ್. ಶ್ರೀನಿವಾಸ, ಸಿ.ಹೆಚ್.ಸಿ., ಶ್ರೀಮತಿ ಎಸ್.ಆರ್.ಪುಷ್ಪ, ಮ.ಹೆಚ್.ಸಿ., ಎಲ್.ಜಿ.ಸತೀಶ, ಸಿಪಿಸಿ, ಜಿ.ಎನ್. ಸಂತೋಷ್ ಕುಮಾರ್, ಸಿಪಿಸಿ., ಎಸ್. ರಾಜೇಶ್, ಸಿಪಿಸಿ, ಮಂಜುನಾಥ, ಸಿಪಿಸಿ, ಮಹಲಿಂಗಪ್ಪ, ಸಿಪಿಸಿ, ಕೆ.ಟಿ. ಮಾರುತಿ, ಸಿಪಿಸಿ, ಆರ್.ವೆಂಕಟೇಶ್ ಕುಮಾರ್, ಎಪಿಸಿ, ಟಿ.ವಿ.ಸಂತೋಷ್, ಎಪಿಸಿ, ಡಿ.ಮಾರುತಿ, ಎಪಿಸಿ ಮತ್ತು ಎನ್.ಎಲ್.ಶ್ರೀಪತಿ, ಎಪಿಸಿ ಹಾಗೂ ಕಲೋ, ಶಿವಮೊಗ್ಗ ಠಾಣೆಯ ಸಿಬ್ಬಂದಿಗಳಾದ ಜಿ. ಸುರೇಂದ್ರ, ಸಿ.ಹೆಚ್.ಸಿ., ಪ್ರಶಾಂತ್ ಕುಮಾರ್, ಸಿಪಿಸಿ, ಶ್ರೀ ರಘುನಾಯ್ಕ, ಸಿಪಿಸಿ ಮತ್ತು ತರುಣ್‌ಕುಮಾರ್, ಎಪಿಸಿ ಇವರುಗಳು ಹಾಜರಿದ್ದರು.

Advertisement
Tags :
Bharamasagar PDOchitradurgaDemand for bribeLokayukta trapಚಿತ್ರದುರ್ಗಭರಮಸಾಗರ ಪಿಡಿಒಲಂಚಕ್ಕೆ ಬೇಡಿಕೆಲೋಕಾಯುಕ್ತ ಬಲೆ
Advertisement
Next Article