For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಚುನಾವಣೆ : ಸಚಿವ ಸುಧಾಕರ್ ಬಣ ಜಯಭೇರಿ : ಇಲ್ಲಿದೆ ಸಂಪೂರ್ಣ ಮಾಹಿತಿ...!

07:13 PM Sep 12, 2024 IST | suddionenews
ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಚುನಾವಣೆ   ಸಚಿವ ಸುಧಾಕರ್ ಬಣ ಜಯಭೇರಿ   ಇಲ್ಲಿದೆ ಸಂಪೂರ್ಣ ಮಾಹಿತಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಸೆ.12 : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಚಿತ್ರದುರ್ಗ ಇದರ ಆಡಳಿತ ಮಂಡಳಿ ಸಾಮಾನ್ಯ ಚುನಾವಣೆಯಲ್ಲಿ ಸಚಿವ ಸುಧಾಕರ್ ತಂಡ ಗೆಲುವನ್ನು ಸಾಧಿಸಿದೆ. ಚುನಾವಣೆ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಗೆ ಇಂದು ನಡೆದಿರುವ ಚುನಾವಣೆಯ 12 ಸ್ಥಾನಗಳಲ್ಲಿ 7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಇಂದು ನಡೆದ ಚುನಾವಣೆಯಲ್ಲಿ ಉಳಿದ 5 ಸ್ಥಾನಗಳಿಗೆ ಬೆಳಿಗ್ಗೆ 9 ರಿಂದ ಸಂಜೆ 4 ವರೆಗೆ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ.

Advertisement

Advertisement

ಈ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರ ತಂಡ ಗೆಲುವು ಸಾಧಿಸುವುದರ ಮೂಲಕ ಮತ್ತೊಮ್ಮೆ ಡಿಸಿಸಿ ಬ್ಯಾಂಕ್‍ನ ಅಧಿಕಾರವನ್ನು ಹಿಡಿದಿದೆ. ಇದರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚಳ್ಳಕೆರೆ ತಾಲ್ಲೂಕು 'ಎ' ಕ್ಷೇತ್ರದಿಂದ ಡಿ.ಸುಧಾಕರ್ ಬಿನ್ ಎನ್.ದಶರಥಯ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊಳಲ್ಕೆರೆ ತಾಲ್ಲೂಕು 'ಎ' ಕ್ಷೇತ್ರದಿಂದ ಎಸ್.ಆರ್.ಗಿರೀಶ್ ಬಿನ್ ಲೇಟ್ ಎಸ್.ರುದ್ರಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಿರಿಯೂರು ತಾಲ್ಲೂಕು 'ಎ' ಕ್ಷೇತ್ರದಿಂದ  ಓ.ಮಂಜುನಾಥ್ ಬಿನ್ ಓಬನಾಯಕ, ಜಿಲ್ಲಾಧ್ಯಾಂತ ಎಲ್ಲಾ ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ 'ಬಿ' ಕ್ಷೇತ್ರದಿಂದ ಹೆಚ್.ಬಿ.ಮಂಜುನಾಥ್ ಬಿನ್ ಟಿ.ಎಚ್.ಬಸವರಾಜಪ್ಪ, ಜಿಲ್ಲಾಧ್ಯಾಂತ ನೇಕಾರಿಕೆ ಸಹಕಾರ ಸಂಘಗಳ 'ಇ' ಕ್ಷೇತ್ರದಿಂದ ಕೆ.ಜಗಣ್ಣ ಬಿನ್ ಕೆಂಚಪ್ಪ, ಜಿಲ್ಲಾಧ್ಯಾಂತ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ 'ಸಿ' ಕ್ಷೇತ್ರ ದಿಂದ ರಘುರಾಮ ರೆಡ್ಡಿ ಬಿನ್ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ, ಚಿತ್ರದುರ್ಗ, ಹೊಸದುರ್ಗ & ಹೊಳಲ್ಕೆರೆ ತಾಲ್ಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ'ಡಿ'ಕ್ಷೇತ್ರದಿಂದ ಪಿ.ತಿಪ್ಪೇಸಾಮಿ ಬಿನ್ ಪರಮೇಶ್ವರಪ್ಪ ಇವರು ನಾಮಪತ್ರ ವಾಪಾಸ್ಸ್ ಪಡೆಯುವ ಸಮಯದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚಿತ್ರದುರ್ಗ ತಾಲ್ಲೂಕು 'ಎ' ಕ್ಷೇತ್ರದಿಂದ ಹೆಚ್.ಎಂ.ದ್ಯಾಮಣ್ಣ ಬಿನ್ ಹೆಚ್.ಮಹೇಶ್ವರಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊಸದುರ್ಗ ತಾಲ್ಲೂಕು 'ಎ' ಕ್ಷೇತ್ರದಿಂದ ಕೆ.ಆನಂತ್ ಬಿನ್ ಕೆಂಚಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೊಳಕಾಲ್ಲೂರು ತಾಲ್ಲೂಕು 'ಎ' ಕ್ಷೇತ್ರ ದಿಂದ ಹೆಚ್.ಟಿ.ನಾಗರೆಡ್ಡಿ ಬಿನ್ ಹೊಸಕೋಟೆ ತಿಮ್ಮಪ್ಪ, ಚಳ್ಳಕೆರೆ, ಹಿರಿಯೂರು & ಮೊಳಕಾಲೂರು ತಾಲ್ಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಡಿ.ಕ್ಷೇತ್ರದಿಂದ ಪಿ.ವಿನೋದಸ್ವಾಮಿ ಕೋಂ ಜಿ.ತಿಪ್ಪೇಸ್ವಾಮಿ, ಜಿಲ್ಲೆಯಲ್ಲಿನ ಇನ್ನಿತರೆ ಸಹಕಾರ ಸಂಘಗಳ 'ಎಫ್' ಕ್ಷೇತ್ರ ದಿಂದ ಎಂ.ನಿಶಾನಿ ಜಯಣ್ಣ ಬಿನ್ ಜಿ.ಎನ್.ಮಲ್ಲಪ್ಪ ಆಯ್ಕೆಯಾಗಿದ್ದಾರೆ.

ಈ ಅಭ್ಯರ್ಥಿಗಳು ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಹಾಗೂ ಚುನಾವಣೆಯ ಮೂಲಕ ಕ್ರಮಬದ್ಧವಾಗಿ ಆಯ್ಕೆಯಾಗಿರುತ್ತಾರೆ ಎಂದು  ರಿಟರ್ನಿಂಗ್ ಆಫೀಸರ್, ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ,. ಚಿತ್ರದುರ್ಗ ಹಾಗೂ ಉಪವಿಭಾಗಾಧಿಕಾರಿ, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ ಇವರ ತಿಳಿಸಿದ್ದಾರೆ.

Tags :
Advertisement