Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ವಿಂಡ್ ಫ್ಯಾನ್‍ಗಳಿಂದ ಬೆಳೆ ಹಾನಿ : ತಹಶಿಲ್ದಾರ್ ಅವರಿಗೆ ದೂರು

06:43 PM Aug 02, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 02 : ಮಾಡನಾಯಕನಹಳ್ಳಿ ಗ್ರಾಮದ ರಿ.ಸ.ನಂ. 63 ರ ಸರ್ಕಾರಿ ಜಾಗದಲ್ಲಿ ಅಟ್ರಿಯ ವಿಂಡ್ ಪವರ್ ಲಿಮಿಟೆಡ್ ಬಿಜಾಪುರ-2 ಇವರು ಅಳವಡಿಸಿರುವ ವಿಂಡ್ ಫ್ಯಾನ್‍ಗಳ ಸುತ್ತಮುತ್ತ ಜಮೀನಿನಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿರುವುದನ್ನು ವಿರೋಧಿಸಿ ತಹಶೀಲ್ದಾರ್ ಅವರಿಗೆ ರೈತರು ಶುಕ್ರವಾರ ಮನವಿ ಸಲ್ಲಿಸಿದರು.

Advertisement

ಮೆಕ್ಕೆಜೋಳ ಬೆಳೆ ಹಾನಿಯಾಗಿರುವ ಬಗ್ಗೆ ಅಟ್ರಿಯಾ ವಿಂಡ್ ಪವರ್ ಲಿಮಿಟೆಡ್ ವ್ಯವಸ್ಥಾಪಕರಿಗೆ ಅನೇಕ ಸಾರಿ ಮನವರಿಕೆ ಮಾಡಿದ್ದರೂ ರೈತರ ಕಷ್ಟಗಳನ್ನು ಆಲಿಸುತ್ತಿಲ್ಲ. ಬೆಳಹಾನಿಗೂ ವಿಂಡ್ ಫ್ಯಾನ್‍ಗಳಿಗೂ ಸಂಬಂಧವಿಲ್ಲ. ಕಂದಾಯ ಇಲಾಖೆಯನ್ನು ಕೇಳಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆಂದು ಮಾಡನಾಯಕನಹಳ್ಳಿ ಗ್ರಾಮದ ರೈತರು ದೂರಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹನುಮಂತಪ್ಪ, ಯತಿರಾಜ್, ಚಂದ್ರಪ್ಪ, ಕೊಲ್ಲಯ್ಯ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Tags :
bengaluruchitradurgaComplaint to TehsildarCrop damagesuddionesuddione newswind fansಚಿತ್ರದುರ್ಗತಹಶಿಲ್ದಾರ್ದೂರುಬೆಂಗಳೂರುಬೆಳೆ ಹಾನಿವಿಂಡ್ ಫ್ಯಾನ್‍ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article