ಚಿತ್ರದುರ್ಗ : ಮುರುಘಾಶರಣರ ಬಿಡುಗಡೆಗೆ ಕೋರ್ಟ್ ಆದೇಶ..!
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 07 : ಪೋಕ್ಸೋ ಪ್ರಕರಣದಲ್ಲಿ ಇಷ್ಟು ದಿನ ಜೈಲಿನಲ್ಲಿದ್ದ ಮುರುಘಾ ಶರಣರಿಗೆ ಈಗ ಬಿಡುಗಡೆ ಕಾಲ ಬಂದಿದೆ. ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯವೇ ಆದೇಶ ಹೊರಡಿಸಿದೆ. ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಸಾಕ್ಷ್ಯಗಳ ವಿಚಾರಣೆ ಬಹುತೇಕ ಮುಗಿದ ಹಿನ್ನೆಲೆಯಲ್ಲಿ ಮುರುಘಾಶ್ರೀಗಳಿಗೆ ಜೈಲಿನಿಂದ ಬಿಡುಗಡೆಯಾಗುತ್ತಿದೆ.
ಸಂತ್ರಸ್ತೆಯರು ಸೇರಿದಂತೆ ಒಟ್ಟು 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನಿನ ಆದೇಶದ ಪ್ರಕಾರ ಬಿಡುಗಡೆಗೊಂಡಿದ್ದಾರೆ. ಈ ಹಿಂದೆಯೇ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ ಸಾಕ್ಷಿಗಳ ವಿಚಾರಣೆ ಬಾಕಿ ಇದ್ದ ಹಿನ್ನೆಲೆ, ಮತ್ತೆ ಬಂಧನದಲ್ಲಿ ಇಡುವುದಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದೀಗ ಬಿಡುಗಡೆಯಾಗಲಿದ್ದಾರೆ. ಬಿಡುಗಡೆಯ ಆದೇಶದ ಪ್ರತಿ ಜೈ ಅಧಿಕಾರಿಗಳ ಕೈ ಸೇರಿದ ಬಳಿಕ, ಮುರುಘಾಶರಣರನ್ನು ಅವರನ್ನು ಬಿಡುಗಡೆ ಮಾಡಲಿದ್ದಾರೆ.
ಇನ್ನು ಮುರುಘಾಶ್ರೀಗಳು ಜೈಲಿನಿಂದ ಹೊರ ಬಂದ ಬಳಿಕ ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ತೆರಳಲಿದ್ದಾರೆ. ಮುರುಘಾಶ್ರೀ ಪರವಾಗಿ ವಕೀಲ ಕೆ.ವಿಶ್ವನಾಥಯ್ಯ ಅವರು ವಾದ ಮಂಡಿಸಿದ್ದರು. ಇದೀಗ ಷರತ್ತು ಬದ್ಧ ಜಾಮೀನು ಸಿಕ್ಕಿರುವ ಬಗ್ಗೆಯೂ ವಕೀಲರು ಮಾಹಿತಿ ನೀಡಿದ್ದಾರೆ. ಇಂದು 4 ಗಂಟೆಯ ವೇಳೆಗೆ ಆದೇಶ ಪ್ರತಿ ಚಿತ್ರದುರ್ಗ ಜೈಲಿನ ಅಧಿಕಾರಿಗಳಿಗೆ ತಲುಪಲಿದೆ. ಆ ಬಳಿಕ ಮುರುಘಾಶ್ರೀಗಳನ್ನು ಬಿಡುಗಡೆ ಮಾಡಲಿದ್ದಾರೆ. ಆದರೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಮುರುಘಾಶ್ರೀಗಳು ಇರುವಂತಿಲ್ಲ ಎಂಬ ಆದೇಶ ಇದೆ. ಹೀಗಾಗಿ ಶ್ರೀಗಳು ಬಿಡುಗಡೆಯಾದ ತಕ್ಷಣ ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ತೆರಳಲಿದ್ದಾರೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.