For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಅಭ್ಯರ್ಥಿ ಗೋವಿಂದ ಕಾರಜೋಳ ಅವರೇ ಇಂದು ಮತ ಚಲಾಯಿಸಿಲ್ಲ : ಕಾರಣವೇನು ಗೊತ್ತಾ..?

02:44 PM Apr 26, 2024 IST | suddionenews
ಚಿತ್ರದುರ್ಗ ಅಭ್ಯರ್ಥಿ ಗೋವಿಂದ ಕಾರಜೋಳ ಅವರೇ ಇಂದು ಮತ ಚಲಾಯಿಸಿಲ್ಲ   ಕಾರಣವೇನು ಗೊತ್ತಾ
Advertisement

ಚಿತ್ರದುರ್ಗ: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಮೇ 7 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮತದಾರರೆಲ್ಲಾ ಬಹಳ ಉತ್ಸುಕತೆಯಿಂದ ಮತದಾನ ಮಾಡುತ್ತಿದ್ದಾರೆ. ಆದರೆ ಕೆಲ ಅಭ್ಯರ್ಥಿಗಳು ತಮ್ಮ ಮತವನ್ನು ತಾವೇ ಹಾಕಿಕೊಳ್ಳಲಾಗಲಿಲ್ಲ. ಇನ್ನು ಕೆಲ ಅಭ್ಯರ್ಥಿಗಳು ಮತವನ್ನೇ ಚಲಾಯಿಸಲು ಆಗಲಿಲ್ಲ. ತಮ್ಮ ಮತ ಇರುವೆಡೆ ಬಿಟ್ಟು ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದೇ ಇದಕ್ಕೆ ಕಾರಣ. ಹಾಗಾದ್ರೆ ಯಾರೆಲ್ಲ ಮತ ಹಾಕದೆ ಮಿಸ್ ಮಾಡಿಕೊಂಡರು ಎಂಬ ಡಿಟೈಲ್ ಇಲ್ಲಿದೆ.

Advertisement

ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಲ್ಲಿ ನಿಂತಿದ್ದಾರೆ. ಆದರೆ ಅವರ ಮತ ಇರುವುದು ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ. ಹೀಗಾಗಿ ಬೇರೆಯವರಿಗೆ ಮತ ಚಲಾಯಿಸಿದರು. ಇನ್ನು ವಿ ಸೋಮಣ್ಣ ಅವರು ತುಮಕೂರಿನಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರ ಮತ ಇರುವುದು ಗೋವಿಂದರಾಜನಗರದಲ್ಲಿ. ಡಾ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧರ ಮಾಡಿದ್ದು, ಪದ್ಮನಾಭನಗರದಲ್ಲಿ ಮತದಾನ ಮಾಡಿದರು‌. ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರದ್ದು ಕೂಡ ಬೆಂಗಳೂರು ನಗರದಲ್ಲಿದೆ. ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರದ್ದು ಕೂಡ ಬೆಂಗಳೂರು ನಗರದಲ್ಲಿಯೇ ವೋಟ್ ಇದೆ.

ಇನ್ನು ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಗೋವಿಂದ ಕಾರಜೋಳ ಅವರು ಮತವನ್ನೆ ಚಲಾಯಿಸಿಲ್ಲ. ಅಭ್ಯರ್ಥಿಯಾದರೂ ತಮಗೆ ತಾವೇ ಮತ ಹಾಕಿಕೊಳ್ಳಲು ಆಗದೆ ಇರುವವರು ಒಂದು ಕಡೆಯಾದರೆ ಇಂದು ಗೋವಿಂದ ಕಾರಜೋಳ ಅವರು ಮತ ಹಾಕುವಂತೆಯೇ ಇಲ್ಲ. ಯಕಾಂದ್ರೆ ಗೋವಿಂದ ಕಾರಜೋಳ ಅವರ ಮತ ಇರುವ ಕ್ಷೇತ್ರದಲ್ಲಿ ಮೇ 7ಕ್ಕೆ ಚುನಾವಣೆ ನಡೆಯಲಿದೆ‌.

Advertisement

Tags :
Advertisement