For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಹೃದಯಾಘಾತದಿಂದ ಪತಿ ಪತ್ನಿ ಇಬ್ಬರೂ ಸಾವು...!

03:44 PM Sep 30, 2024 IST | suddionenews
ಚಿತ್ರದುರ್ಗ   ಹೃದಯಾಘಾತದಿಂದ ಪತಿ ಪತ್ನಿ ಇಬ್ಬರೂ ಸಾವು
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಸೆ.30: ಹೃದಯಾಘಾತದಿಂದ ಪತಿ ಪತ್ನಿ ಇಬ್ಬರೂ ಸಾವನ್ನಪ್ಪಿರುವ ಘಟನೆ ನಗರದ ಕೆಳಗೋಟೆಯ ಆಕಾಶವಾಣಿ ಹಿಂಭಾಗದಲ್ಲಿರುವ ಸಂಗಮೇಶ್ವರ ಲೇಔಟ್ ನಲ್ಲಿ ನಡೆದಿದೆ. ಈ ಮೂಲಕ ಸಾವಿನಲ್ಲೂ ಕೂಡ ದಂಪತಿಗಳು ಒಂದಾಗಿದ್ದಾರೆ.

Advertisement
Advertisement

ನಿವೃತ್ತ ಲೈಬ್ರರಿಯನ್ ಆಗಿದ್ದ ಓಂಕಾರಮೂರ್ತಿ (67 ವರ್ಷ) ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಪತಿಯ ಹೃದಯಾಘಾತದ ವಿಷಯವನ್ನು ಮನೆಯಲ್ಲಿದ್ದ ಪತ್ನಿ ದ್ರಾಕ್ಷಾಯಣಿ (59 ವರ್ಷ) ಅವರಿಗೆ ತಿಳಿಸಲಾಗಿದೆ. ಈ ಆಘಾತಕಾರಿ ಸುದ್ದಿ ಕೇಳಿ ಆಕೆಯೂ ಕೂಡ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓಂಕಾರಮೂರ್ತಿ ಅವರಿಗೆ ನೀಡಲಾಗುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೂಡ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

ಎಸ್ ಜೆ ಎಂ ವಿದ್ಯಾಪೀಠದಲ್ಲಿ ಮುಖ್ಯ ಗ್ರಂಥಪಾಲಕರಾಗಿ 30 ವರ್ಷ ಕೆಲಸ ಮಾಡಿದ್ದರು. ಬಹಳ ಸೌಮ್ಯ ಸ್ವಭಾವದಿಂದಲೇ ಇಬ್ಬರೂ ಜೀವನ ಮಾಡ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಸಾಫ್ಟ್‌ವೇರ್ ಇಂಜಿನಿಯರ್ ಗಳಾಗಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಆಯಸ್ಸು ಇಷ್ಟು ಅಂತ ಇರುತ್ತದೆ. ಈ ರೀತಿ ಘಟನೆ ನಮಗೆ ತುಂಬಾ ನೋವಾಗಿದೆ ಎಂದು ಮೃತ ದ್ರಾಕ್ಷಾಯಿಣಮ್ಮನ ಸಹೋದರ ಲಿಂಗಮೂರ್ತಿ ಭಾವುಕರಾಗಿ ಹೇಳಿದ್ದಾರೆ.

Advertisement
Tags :
Advertisement