Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಮೂಲದ ಡಾ. ಕವಿತಾ ಬಿ.ಟಿ ಚಾಮರಾಜನಗರ ಜಿಲ್ಲೆಯ ನೂತನ ಎಸ್.ಪಿ. ಆಗಿ ನೇಮಕ

05:39 PM Jul 03, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ ಜು. 03 : ರಾಜ್ಯ ಸರ್ಕಾರ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇವರಲ್ಲಿ ಚಿತ್ರದುರ್ಗ ತಾಲ್ಲೂಕು ಬೊಮ್ಮೆನಹಳ್ಲಿ ಮೂಲದ  ಡಾ ಕವಿತಾ ಬಿ.ಟಿ. ಅವರನ್ನು ಚಾಮರಾಜನಗರ ಜಿಲ್ಲೆಯ ನೂತನ ಎಸ್. ಪಿ.ಆಗಿ ನೇಮಿಸಿ ಸರ್ಕಾರ ಆದೇಶಿಸಿದೆ.

Advertisement

ಇದಕ್ಕೂ ಮೊದಲು ಅವರು ಮೈಸೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಚಾಮರಾಜ ನಗರಕ್ಕೆ ನೂತನ ರಕ್ಷಣಾಧಿಕಾರಿಗಳಾಗಿ ನೇಮಕವಾಗಿರುವ ಡಾ.ಬಿ.ಟಿ.ಕವಿತಾ ಅವರಿಗೆ ಶ್ರೀ ಶಿವಶರಣ  ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು, ಮಾಜಿ ಸಚಿವರಾದ ಹೆಚ್.ಅಂಜನೇಯ, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಆದಿ ಜಾಂಬವ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್ ಹಾಗೂ ಆದಿ ಜಾಂಬವ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಟಿ.ಮಂಜುನಾಥ್ ಅಭಿನಂದಿಸಿ, ಶುಭ ಕೋರಿದ್ದಾರೆ.

Advertisement

ತಮ್ಮ ಆಧಿಕಾರವಧಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡಲಿ ಕಾನೂನು ಸುವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಕಾಪಾಡಿ, ನೊಂದ ಜನರಿಗೆ ನ್ಯಾಯವನ್ನು ಒದಗಿಸಲಿ ಎಂದು ಹಾರೈಸಿದ್ದಾರೆ.

Advertisement
Tags :
bengaluruChamarajanagarChamarajanagar districtchitradurgaDr. Kavitha BTnew SPsuddionesuddione newsಚಾಮರಾಜನಗರಚಿತ್ರದುರ್ಗಡಾ. ಕವಿತಾ ಬಿ.ಟಿನೂತನ ಎಸ್ ಪಿನೇಮಕಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article