Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ನವೆಂಬರ್ 27 ಮತ್ತು 28 ರಂದು ಬಾದರದಿನ್ನಿ ರಂಗೋತ್ಸವ 2024

02:54 PM Nov 23, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಗರದ ತರಾಸು ರಂಗ ಮಂದಿರದಲ್ಲಿ ನ.27ರಂದು ಸಂಜೆ 5.30ಕ್ಕೆ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಆಶ್ರಯದಲ್ಲಿ “ ಬಾದರದಿನ್ನಿ ರಂಗೋತ್ಸವ 2024 ’’ ಆಯೋಜಿಸಲಾಗಿದೆ.

Advertisement

ನವೆಂಬರ್ 27ರಂದು ರಂಗೋತ್ಸವವನ್ನು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ರಂಗೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಅಧ್ಯಕ್ಷ ವಹಿಸಲಿದ್ದಾರೆ. ಮೈಸೂರಿನ ರಂಗಕರ್ಮಿ ನಾ.ಶ್ರೀನಿವಾಸ ಪಾಪು, ಇಳಕಲ್‍ನ ರಂಗಕರ್ಮಿ ಮಹಂತೇಶ್ ಗಜೇಂದ್ರಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಅಧ್ಯಕ್ಷೆ ಅನಸೂಯಾ ಬಾದರದಿನ್ನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಕಾಶ್ ಬಾದರದಿನ್ನಿ ನಿರ್ದೇಶನದ ನಾ.ಶ್ರೀನಿವಾಸ ಪಾಪು ರಚನೆಯ ‘ಕನಸಿನವರು’ ನಾಟಕವನ್ನು ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಪ್ರದರ್ಶಿಸಲಿದೆ.

ನ.28ರ ಕಾರ್ಯಕ್ರಮದ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿ ಡಾ.ಜಿ.ಎನ್.ಮಲ್ಲಿಕಾರ್ಜುನ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಜಂಬುನಾಥ್, ರಂಗ ನಿದೇರ್ಶಕ ಕೆ.ಪಿ.ಎಂ.ಗಣೇಶಯ್ಯ, ರಂಗಕರ್ಮಿ ಸಿ.ಪಿ.ಜ್ಞಾನದೇವ ಭಾಗವಹಿಸಲಿದ್ದಾರೆ. ಎಚ್.ಎನ್.ಭೀಮೇಶ್ ನಿರ್ದೇಶನದ ವಿ.ಎಸ್.ಅಶ್ವಥ್ ರಚನೆಯ ನಗೆ ನಾಟಕ ‘ಶ್ರೀ ಕೃಷ್ಣ ಸಂಧಾನ’ ನಾಟಕವನ್ನು ಧಾತ್ರಿ ರಂಗ ಸಂಸ್ಥೆ ಪ್ರಸ್ತುತ ಪಡಿಸಲಿದೆ ಎಂದು ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Advertisement
Tags :
Badaradinni Rangotsava 2024bengaluruchitradurgasuddionesuddione newsಚಿತ್ರದುರ್ಗಬಾದರದಿನ್ನಿ ರಂಗೋತ್ಸವ 2024ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article