Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 39 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ

07:44 PM Aug 31, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 31 :ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ವಿಭಾಗ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಗಟ್ಟ ಇವರ ಸಂಯುಕ್ತ ಆಶ್ರಯದಲ್ಲಿ 39 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ 2024ರ ಕಾರ್ಯಕ್ರಮವು ಗೋನೂರು ಸಮೀಪದ ಹೋಚಿ ಬೋರಯ್ಯ ಬಡಾವಣೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನಡೆಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಪ್ರದೀಪ್ ಅವರು ಮಾತನಾಡಿ, ಈ ವರ್ಷದ ಘೋಷಣೆ ಐ ಕೆನ್ ಸಿ ಕ್ಲಿಯಲ್ಲಿ ನೌ (I Can See Clearly Now) ಆಗಿದ್ದು ಆಗಸ್ಟ್ 25 ರಂದು ಆರಂಭವಾಗಿ ಸೆಪ್ಟೆಂಬರ್ 8 ರವರೆಗೆ ನಡೆಯುತ್ತಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ಮಾನವನ ಸಾವಿನ ನಂತರ ಕಣ್ಣುಗಳು ಸುಟ್ಟು ಬೂದಿಯಾಗುವ ಬದಲು ನೇತ್ರದಾನ ಮೂಲಕ ಇಬ್ಬರು ಅಂಧರಿಗೆ ಬೆಳಕು ನೀಡುವ ಮೂಲಕ ಜೀವ ಸಾರ್ಥಕತೆಯನ್ನು ಪಡೆಯಬೇಕು.ಉಸಿರು ಶಾಶ್ವತವಲ್ಲ ಹೆಸರು ಮಾತ್ರ ಶಾಶ್ವತ. ನಮ್ಮ ಹೆಸರು ಶಾಶ್ವತವಾಗಬೇಕಾದರೆ ನಮ್ಮ ಸಾವಿನ ನಂತರ ಅಂಗಾಂಗದಾನ ಮಾಡಬೇಕು. ನೇತ್ರದಾನ ಮಹಾದಾನವಾಗಿದೆ ಎಂದು ತಿಳಿಸಿದರು.

Advertisement

ನಂತರ ಡಾ. ಶಿಲ್ಪಾ ಅವರು ಮಾತನಾಡಿ 39ನೇ ರಾಷ್ಟ್ರೀಯ ಅಂಧತ್ವ ನೇತ್ರ ದಿನ ಕಾರ್ಯಕ್ರಮದ ಪಾಕ್ಷಿಕ ಆಗಸ್ಟ್ 25 ರಂದು ಆರಂಭವಾಗಿ ಸೆಪ್ಟೆಂಬರ್ 8 ರವರೆಗೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ನೇತ್ರ ದಾನದ ಮಹತ್ವ, ಅರಿವು, ಜಾಗೃತಿಯನ್ನು ಸಮಾಜದಲ್ಲಿ ಮೂಡಿಸಬೇಕಾಗಿದೆ ಎಂದರು.

ಇದೇ ವೇಳೆ 371 ನಿರಾಶ್ರಿತರ ಕಣ್ಣಿನ ತಪಾಸಣೆ ನಡೆಸಿ ಅವರಲ್ಲಿ 22 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೇತ್ರಾಧಿಕಾರಿ ಕೆ.ಸಿ. ರಾಮು, ಬೆಳಗಟ್ಟ ಅರೋಗ್ಯ ನೀರಿಕ್ಷಣಾಧಿಕಾರಿ ಮಹೇಶ ಡಿ, ನಿರಾಶ್ರಿತರ ಪರಿಹಾರ ಕೇಂದ್ರದ ಸಮಾಲೋಚಕರಾದ ಮಹಾದೇವಯ್ಯ, ವಿಜಯ್ ಕುಮಾರ್, ಮತ್ತು ಸಿಬ್ಬಂದಿ ವರ್ಗದವರು, ಯೋಗ ಶಿಕ್ಷಕರಾದ ರವಿ ಅಂಬೇಕರ್, ನರ್ಸಿಂಗ್ ಅಧಿಕಾರಿ ಲಕ್ಷೀ, ಹಾಗೂ ಇತರರು ಭಾಗವಹಿಸಿದ್ದರು.

Advertisement
Tags :
39 ನೇ ರಾಷ್ಟ್ರೀಯ ನೇತ್ರದಾನ39th National Eye DonationbengaluruchitradurgaFortnight CelebrationRefugee Reliefsuddionesuddione newsಚಿತ್ರದುರ್ಗನಿರಾಶ್ರಿತರ ಪರಿಹಾರಪಾಕ್ಷಿಕ ಆಚರಣೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article