Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರಕ್ಕೆ ಅವಕಾಶ

09:24 PM Dec 18, 2024 IST | suddionenews
Advertisement

ಚಿತ್ರದುರ್ಗ. ಡಿ.18: ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದ ಅಭಿವೃದ್ಧಿಗಾಗಿ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ 315 ವಿವಿಧ ರೀತಿಯ ಪ್ರಾಣಿ ಪಕ್ಷಿಗಳನ್ನು ಪ್ರದರ್ಶಿಸಲಾಗುತ್ತಿದೆ. ಸ್ವ-ಇಚ್ಛೆದಾರರು, ಪ್ರಾಣಿ ಪ್ರಿಯರು ಮೃಗಾಲಯದಲ್ಲಿನ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಂಡಲ್ಲಿ ಮೃಗಾಲಯದ ಪ್ರಾಣಿ, ಪಕ್ಷಿಗಳ ಆಹಾರ, ವೈದ್ಯಕೀಯ ವೆಚ್ಚ, ಅಭಿವೃದ್ಧಿ ಕಾಮಗಾರಿ ಹಾಗೂ ಇತ್ಯಾದಿ ವೆಚ್ಚಗಳಿಗೆ ಮತ್ತು ಮೃಗಾಲಯದ ಅಭಿವೃದ್ಧಿಗೆ ಮತ್ತಷ್ಟು ಸಹಾಯಕವಾಗುತ್ತದೆ. ಅಲ್ಲದೇ ಪ್ರಾಣಿ ದತ್ತು ಪಡೆಯಲು ನೀಡಿದ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ 1961ರ ಕಲಂ 80ಜಿ(5)(6)ರನ್ವಯ ಶೇ.50ರಷ್ಟು ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ.

ದತ್ತು ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಆಡುಮಲ್ಲೇಶ್ವರ ಕಿರು ಮೃಗಾಲಯದ ವಲಯ ಅರಣ್ಯಾಧಿಕಾರಿ ದೂರವಾಣಿ ಸಂಖ್ಯೆ 7795709638 ಹಾಗೂ ಗಸ್ತು ಅರಣ್ಯ ಪಾಲಕ 8722618795 ಗೆ ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

Advertisement
Tags :
bengaluruchitradurgasuddionesuddione newsಆಡುಮಲ್ಲೇಶ್ವರಕಿರು ಮೃಗಾಲಯಚಿತ್ರದುರ್ಗದತ್ತು ಸ್ವೀಕಾರಕ್ಕೆ ಅವಕಾಶಪ್ರಾಣಿ ಪಕ್ಷಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article