For the best experience, open
https://m.suddione.com
on your mobile browser.
Advertisement

ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಅರ್ಜಿ ಆಹ್ವಾನ

06:43 PM Sep 23, 2024 IST | suddionenews
ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಅರ್ಜಿ ಆಹ್ವಾನ
Advertisement

Advertisement
Advertisement

ಚಿತ್ರದುರ್ಗ. ಸೆ.23: ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆ ಆಧಾರದಲ್ಲಿ ಒದಗಿಸುವಂತೆ ಸ್ಥಾಪಿಸಲಾಗಿರುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು 2024-25ನೇ ಸಾಲಿನಲ್ಲಿ ರಾಜ್ಯ ಕೃಷಿ ವಲಯ ಕೃಷಿ ಯಾಂತ್ರೀಕರಣ ಯೋಜನೆಯಡಿ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ.

ಅದರಂತೆ ಜಿಲ್ಲೆಗೆ ಸಾಮಾನ್ಯ ವರ್ಗದಡಿ ಎಫ್.ಫಿ.ಓ, ಎನ್,ಜಿ.ಓ, ಇತರೆ ಸಂಘ ಸಂಸ್ಥೆಗಳು ಚಾಲ್ತಿಯಲ್ಲಿರುವ ಸಿ.ಹೆಚ್.ಎಸ್.ಸಿ ಗಳಿಗೆ 1 ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 1 ಕಂಬೈನ್ಡ್ ಹಾರ್ವೆಸ್ಟರ್ ಹಬ್‌ನ್ನು ಸ್ಥಾಪನ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

Advertisement

ಸಾಮಾನ್ಯ ವರ್ಗದ ಎಫ್.ಪಿ.ಓ, ಎನ್.ಜಿ.ಓ, ಇತರೆ ಸಂಘ ಸಂಸ್ಥೆಗಳು ಸಿ.ಹೆಚ್.ಸಿ ಹಾಗೂ ಪರಿಶಿಷ್ಟ ಪಂಗಡದಡಿ ವೈಯಕ್ತಿಕ ಫಲಾನುಭವಿಗಳಿಗೆ ಗರಿಷ್ಟ ಶೇ. 70 ರಂತೆ ಮಾರ್ಗಸೂಚಿಯ ಮಿತಿಗೆ ಒಳಪಟ್ಟು ಸಹಾಯಧನವನ್ನು ನೀಡಲಾಗುವುದು. ಸಹಾಯಧನವನ್ನು ಕ್ರೆಡಿಟ್ ಲಿಂಕ್ಡ್ ಬ್ಯಾಂಕ್ ಎನ್‌ಡೆಡ್ ಸಬ್ಸಿಡಿ ಮುಖಾಂತರ ನೀಡಲಾಗುವುದು. ಆಯ್ಕೆಯಾದ ಸಂಸ್ಥೆ, ವೈಯಕ್ತಿಕ ಫಲಾನುಭವಿಗಳಿಗೆ ಕೃಷಿ ಮೂಲಭೂತ ಸೌಕರ್ಯನಿಧಿ ಯೋಜನೆಯಡಿ ಬಡ್ಡಿ ರಿಯಾಯಿತಿಯ ನೆರವನ್ನು ಪಡೆಯಲು ಸಹ ಅವಕಾಶವಿರುತ್ತದೆ.

Advertisement

ಆಸಕ್ತ ಸಂಘ ಸಂಸ್ಥೆಗಳು ನೊಂದಣಿ ಪ್ರಮಾಣ ಪತ್ರ, ಜಿಎಸ್‌ಟಿ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಸಿಹೆಚ್.ಎಸ್.ಸಿ ನಡೆಸಿದ ಅನುಭವದ ವಿವರಗಳನ್ನು ಹಾಗೂ ವೈಯಕ್ತಿಕ ಫಲಾನುಭವಿಗಳು ಅರ್ಜಿಯೊಂದಿಗೆ ಪಹಣಿ, ಎಫ್.ಐ.ಡಿ, ಜಾತಿ ಪ್ರಮಾಣ ಪತ್ರ, ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ರೂ.100 ಗಳ ಛಾಪಾ ಕಾಗದದ ಮೇಲೆ ಹಬ್‌ನ್ನು ಪರಬಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರದೊಂದಿಗೆ ಇದೇ ಸೆ.30ರೊಳಗೆ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.

Tags :
Advertisement