Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ APMC : ರೈತರಿಗೆ ಉಪಯುಕ್ತ ಮಾಹಿತಿ : ರೆಮ್ಸ್ ತಂತ್ರಾಂಶದಲ್ಲಿ ಗೇಟ್ ಎಂಟ್ರಿ ಕಡ್ಡಾಯ

06:02 PM Oct 18, 2024 IST | suddionenews
Advertisement

ಚಿತ್ರದುರ್ಗ. ಅ.18: ರೈತರು ತಾವು ಬೆಳೆದ ಕೃಷಿ ಹುಟ್ಟುವಳಿಗಳನ್ನು ಕೃಷಿ ಮಾರುಕಟ್ಟೆ ಸಮಿತಿ ಪ್ರಾಂಗಣಕ್ಕೆ ತಂದಂತಹ ಸಂದರ್ಭದಲ್ಲಿ ತಾವುಗಳು ತಪ್ಪದೇ ರೆಮ್ಸ್ ತಂತ್ರಾಂಶದಲ್ಲಿ ಗೇಟ್ ಎಂಟ್ರಿಯನ್ನು ಮಾಡಿಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.

Advertisement

ಗೇಟ್ ಎಂಟ್ರಿ ಮಾಡಿಸುವಾಗ ಕಡ್ಡಾಯವಾಗಿ ಅಧಿಕೃತ ರೈತರ ಹೆಸರು, ಹುಟ್ಟುವಳಿಯ ಅಂದಾಜು ಪ್ರಮಾಣ, ರೈತರ ಮೊಬೈಲ್ ಸಂಖ್ಯೆ, ವಿಳಾಸವನ್ನು ಹಾಗೂ ಯಾವ ಅಂಗಡಿಗೆ ಹುಟ್ಟುವಳಿಯನ್ನು ಮಾರಾಟಕ್ಕೆ ಬಿಡಲಾಗಿದೆ ಎಂದು ಕಡ್ಡಾಯವಾಗಿ ತಿಳಿಸಬೇಕು. ಟೆಂಡರ್ ಘೋಷಣೆಯಾದ ನಂತರ ಹುಟ್ಟುವಳಿಯ ನಿಗಧಿತ ತೂಕದ ಪಟ್ಟಿ ಪಡೆಯಲು ಹಾಗೂ ಬಿಳಿ ಚೀಟಿಯನ್ನು ತಿರಸ್ಕರಿಸಿ, ಅಧಿಕೃತ ಲೆಕ್ಕ ತೀರುವಳಿಯ ಪಟ್ಟಿ ಪಡೆಯತಕ್ಕದ್ದು.

ಒಂದು ವೇಳೆ ರೈತರು ಅಧಿಕೃತ ವಿವರಗಳನ್ನು ನಮೂದಿಸದೇ ಇದ್ದಲ್ಲಿ, ಯಾವುದಾದರೂ ದೂರುಗಳು ಬಂದಾಗ ಬಗೆಹರಿಸಲು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ಕಡ್ಡಾಯವಾಗಿ ರೈತರು ತಮ್ಮ ಅಧೀಕೃತ ವಿವರಗಳನ್ನು ನಮೂದಿಸಲು ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Advertisement
Tags :
Chitradurga APMCGATE entry is mandatoryREMS softwareUseful information for farmersಗೇಟ್ ಎಂಟ್ರಿ ಕಡ್ಡಾಯಚಿತ್ರದುರ್ಗ APMCರೆಮ್ಸ್ ತಂತ್ರಾಂಶರೈತರಿಗೆ ಉಪಯುಕ್ತ ಮಾಹಿತಿ
Advertisement
Next Article