Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ : ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ

07:31 PM Aug 16, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.16  : ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆ ಮಾರಮ್ಮನಿಗೆ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಬಣ್ಣ ಬಣ್ಣದ ಹೂವು ಹಾಗೂ ಹಾರ. ಹಸಿರುಪತ್ರೆಯಿಂದ ನಯನ ಮನೋಹರವಾಗಿ ಕಣಿವೆಮಾರಮ್ಮನನ್ನು ಸಿಂಗರಿಸಲಾಗಿತ್ತು. ಬೆಳಗಿನಿಂದ ಸಂಜೆಯತನಕ ನೂರಾರು ಭಕ್ತರು ಧಾವಿಸಿ ಕಣಿವೆಮಾರಮ್ಮನಿಗೆ ಭಕ್ತಿ ಸಮರ್ಪಿಸಿದರು.

Advertisement

ಕಣಿವೆಮಾರಮ್ಮ ದೇವಿ

ಚಿತ್ರದುರ್ಗ : ಕೆಳಗೋಟೆಯಲ್ಲಿರುವ ಕೊಲ್ಲಾಪುರದಮ್ಮನ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಸಿಂಗರಿಸಿ ಪೂಜಿಸಲಾಯಿತು.
ಬಗೆ ಬಗೆಯ ಹೂವು ಹಾರ ಹಾಗೂ ಆಭರಣಗಳಿಂದ ಕೊಲ್ಲಾಪುರದಮ್ಮನವನ್ನು ಅಲಂಕರಿಸಲಾಗಿತ್ತು. ವಿಶೇಷವಾಗಿ ವರಮಹಾಲಕ್ಷ್ಮಿ ಹಬ್ಬ ಮಹಿಳೆಯರದ್ದೆ ಆಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ನಾರಿಯರು ಎಲ್ಲಾ ದೇವಸ್ಥಾನಗಳಿಗೂ ತೆರಳಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.

ಕೆಳಗೋಟೆ ಕೊಲ್ಲಾಪುರದಮ್ಮ

ಚಿತ್ರದುರ್ಗ : ಐಶ್ವರ್ಯ ಫೋರ್ಟ್ ಹಿಂಭಾಗ ಎಸ್.ಆರ್.ಲೇಔಟ್‍ನಲ್ಲಿರುವ ಚೌಡೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕಣ್ಣು ಕೋರೈಸುವಂತೆ ಅಲಂಕರಿಸಲಾಗಿತ್ತು.
ಕಮಲದ ಹೂವು, ಗುಲಾಬಿ ಸೇರಿದಂತೆ ನಾನಾ ಬಗೆಯ ಪುಷ್ಪಗಳಿಂದ ಚೌಡೇಶ್ವರಿಯನ್ನು ಸಿಂಗರಿಸಿ ಪೂಜಿಸಲಾಯಿತು. ಇಲ್ಲಿಯೂ ಕೂಡ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಚೌಡೇಶ್ವರಿ ಅಮ್ಮನವರು

ಚಿತ್ರದುರ್ಗ ನಗರದ ಪಿಳ್ಳೆಕೆರೆನಹಳ್ಳಿಯ ಗ್ರಾಮದ ಶ್ರೀ ಶ್ರೀ ಶ್ರೀ ಗೌರಸಮುದ್ರಾ ಮಾರಮ್ಮ ಶಕ್ತಿ ದೇವತೆಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು ಮತ್ತು ಭಕ್ತದಿಗಳಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.

Advertisement
Tags :
bengaluruchitradurgaSpecial pujasuddionesuddione newstemplesVaramahalakshmi festivalಚಿತ್ರದುರ್ಗಚಿತ್ರದುರ್ಗ ನಗರದೇವಾಲಯಬೆಂಗಳೂರುವರಮಹಾಲಕ್ಷ್ಮೀ ಹಬ್ಬವಿಶೇಷ ಪೂಜೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article