For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಅಮಿತ್ ಷಾ ಮತ್ತು ಸಿ.ಟಿ. ರವಿ ವಿರುದ್ಧ AAP ಆಕ್ರೋಶ

01:24 PM Dec 23, 2024 IST | suddionenews
ಚಿತ್ರದುರ್ಗ   ಅಮಿತ್ ಷಾ ಮತ್ತು ಸಿ ಟಿ  ರವಿ ವಿರುದ್ಧ aap ಆಕ್ರೋಶ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಡಿ. 23 : ಡಾ. ಬಿ.ಆರ್ ಅಂಬೇಡ್ಕರ್‌ರವರ ಬಗ್ಗೆ ಅವಹೇಳನಕಾರಿಯಾದ ಮಾತುಗಳನ್ನು ಆಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಷಾರವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು, ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿಯವರನ್ನು ಬಿಜೆಪಿ ಪಕ್ಷದಿಂದ ಹಾಗೂ ಪರಿಷತ್ ಸ್ಥಾನದಿಂದ ಉಚ್ಚಾಟಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಆಗ್ರಹಿಸಲಾಯಿತು.

Advertisement
Advertisement

ನಗರದ ನೀಲಕಂಠೇಶ್ವರ ದೇವಾಲಯದಿಂದ ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಆಗಮಿಸಿದ ಆಮ್ ಆದ್ಮಿ ಪಾರ್ಟಿಯ ಪದಾಧಿಕಾರಿಗಳು ದಾರಿಯುದ್ದಕ್ಕೂ ಅಮಿತಾ ಷಾ ಹಾಗೂ ರವಿಯ ವಿರುದ್ದ ಘೋಷಣೆಗಳನ್ನು ಕೂಗಲಾಯಿತು. ಇದ್ದಲ್ಲದೆ ಆವರನ್ನು ಪಾರ್ಟಿಯಿಂದ ಹೂರ ಹಾಕುವಂತೆಯೂ ಸಹಾ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಬಿ.ಇ.ಜಗದೀಶ್ ನಮಗೆ ಅಂಬೇಡ್ಕರ್ ನೀಡಿದ ಸಂವಿಧಾನವೇ ದೇವರು, ಈ ದೇವರು ನೀಡಿದ ಸಂವಿಧಾನದಿಂದ ನಮ್ಮ ಬದುಕಿಗೆ ಸಹಾಯ ಸಹಕಾರಿಯಾಗಿದೆ, ಇದರಿಂದ ನಾವುಗಳು ಮನುಷ್ಯರಾಗಲು ಸಾಧ್ಯವಾಗಿದೆ, ಅಲ್ಲದೆ ಆಧಿಕಾರವನ್ನು ಅನುಭವಿಸಲು ಸಹಾ ಸಹಾಯವಾಗಿದೆ. ಬೇರೆ ಯಾವ ದೇವರು ಸಹಾ ನಮಗೆ ಸಹಾಯ ಮಾಡಿಲ್ಲ, ಅಲ್ಲದೆ ನಾವುಗಳು ದೇವರು ಹಾಗೂ ಸ್ವರ್ಗವನ್ನು ನೋಡಿಲ್ಲ, ನಮಗೆ ಅಂಬೇಡ್ಕರ್ ನೀಡಿದ ಸಂವಿಧಾನವೇ ದೇವರಾಗಿದೆ ಈ ಹಿನ್ನಲೆಯಲ್ಲಿ ನಾವುಗಳು ಅವರ ಜಪವನ್ನು ಮಾಡುತ್ತೇವೆ ಎಂದರು.

ನೀವುಗಳು ದೇವರನ್ನು ನಂಬುತ್ತೀರಾ ಸದಾ ಕಾಲ ದೇವರ ಜಪವನ್ನು ಮಾಡುತ್ತೀರ ನೀವುಗಳು ಸ್ವರ್ಗವನ್ನು ನೋಡಿದ್ದೀರಾ, ದೇವರನ್ನು ಭೇಟಿ ಮಾಡಿದ್ದೀರಾ ಎಂದು ಅವರನ್ನು ಪ್ರಶ್ನಿಸಿ, ಅಂಬೇಡ್ಕರ್ ನಮಗೆ ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ ಇದೇ ನಮಗೆ ದೇವರು, ಇದನ್ನೇ ನಾವು ನಂಬುತ್ತೇವೆ, ಇದರಿಂದ ಇವರ ಜಪವನ್ನು ಮಾಡುತ್ತೇವೆ ಆದರೆ ನೀವುಗಳು ಇವರ ವಿರೋಧಿಯಾಗಿದ್ದೀರಾ ಈ ಹಿನ್ನಲೆಯಲ್ಲಿ ಅವರನ್ನು ವಿರೋಧ ಮಾಡಲಾಗುತ್ತಿದೆ, ನಮ್ಮಗಳ ಮೇಲೆ ಬಲವಂತವಾಗಿ ದೇವರ ಸಂಸ್ಕøತಿಯನ್ನು ಹೇರುತ್ತಿದ್ದೀರಾ ಇದು ಸರಿಯಲ್ಲ ಎಂದರು.

ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಮಾತನಾಡಿ ಬಿಜೆಪಿಯಲ್ಲಿ ಇರುವ ರವಿಯವರು ಮಹಿಳೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವರ ಮನೆಯ ಹೆಣ್ಣು ಮಕ್ಕಳ ಬಗ್ಗೆ ಈ ರೀತಿಯಾಗಿ ಮಾತನಾಡಿದರೇ ಸುಮ್ಮನೇ ಇರುತ್ತಿದ್ದರೇ, ಬೇರೆಯವರ ಹೆಣ್ಣು ಮಕ್ಕಳು ಹೆಣ್ಣು ಮಕ್ಕಳಲ್ಲಿವೇ ಚುನಾಯುತ ಪ್ರತಿನಿಧಿಗಳು ತಮ್ಮ ನಡೆ-ನುಡಿಯಲ್ಲಿ ಸರಿಯಾಗಿ ಇರಬೇಕಿದೆ ನೀವುಗಳು ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು ಜನತೆ ನಿಮ್ಮನ್ನು ನೋಡುತ್ತಿರುತ್ತಾರೆ ಎಂಬ ಗಮನ ಇರಬೇಕಿದೆ, ಮಹಿಳೆಯರನ್ನು ಆವಮಾನ ಮಾಡಿದ ರವಿಯವರನ್ನು ಕೂಡಲೇ ಬಿಜೆಪಿ ಪಕ್ಷದವತಿಯಿಂದ ಹಾಗೂ ವಿಧಾನ ಪರಿಷತ್ ಸದಸ್ಯತ್ವ ಸ್ಥಾನದಿಂದ ಉಚ್ಚಾಟನೆಯನ್ನು ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರಾಮಣ್ಣ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜನ್, ವಿನೋಧಮ್ಮ,ಶಿವಮ್ಮ,ರವಿ.ಸುಧಾಕರ್,ಪ್ರಹ್ಲಾದ್,ತನ್ವೀರ್,ಆಕ್ಬರ್‍ಖಾನ್,ಲೋಕೇಶ್,ಸಂದೀಪ್‍ಸೇರಿದಂತೆ ಇತರರು ಭಾಗವಹಿಸಿದ್ದರು.

Tags :
Advertisement