Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಆದರ್ಶ ಪತ್ತಿನ ಸಹಕಾರಿ ಸಂಘಕ್ಕೆ ವಾರ್ಷಿಕ 9 ಲಕ್ಷ ನಿವ್ವಳ ಲಾಭ : ಡಿ.ಆರ್.ತಿಪ್ಪೇಸ್ವಾಮಿ

05:48 PM Aug 02, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 02 : ಆದರ್ಶ ಸೌಹಾರ್ದ ಪತ್ತಿನ ಸಹಕಾರಿ ಸಂಘ 2023-24 ನೇ ಸಾಲಿಗೆ 9 ಲಕ್ಷದ 22 ಸಾವಿರದ 511 ರೂ.ಗಳ ಲಾಭದಲ್ಲಿದೆ ಎಂದು ಅಧ್ಯಕ್ಷ ಡಿ.ಆರ್.ತಿಪ್ಪೇಸ್ವಾಮಿ ತಿಳಿಸಿದರು.

ಐಶ್ವರ್ಯ ಫೋರ್ಟ್‌ ನಲ್ಲಿ ನಡೆದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ಸಾಲ ಪಡೆದವರು ಸಕಾಲಕ್ಕೆ ಸಾಲ ಮರು ಪಾವತಿಸಬೇಕು. ಪ್ರತಿಯೊಬ್ಬ ಜಾಮೀನುದಾರರ ಮೇಲೆ ಸಾಲಗಾರರಷ್ಟೆ ಜವಾಬ್ದಾರಿಯಿದೆ. ಜಾಮೀನು ಆಗುವ ಪೂರ್ವದಲ್ಲಿಯೇ ಸಾಲಗಾರನ ವೈಯಕ್ತಿಕ ಸ್ಥಿತಿ, ಸಾಲದ ಉದ್ದೇಶ ಮತ್ತು ಸಾಲ ತೀರಿಸುವ ಸಾಮಥ್ರ್ಯವಿದೆಯೇ ಎನ್ನುವುದನ್ನು ಅರಿತುಕೊಂಡಿರಬೇಕು.

ಸಾಲಗಾರ ಸುಸ್ತಿ ಬಾಕಿದಾರನಾಗಿದ್ದರೆ ಅದನ್ನು ತೀರಿಸುವ ಹೊಣೆ ಜಾಮೀನುದಾರನ ಮೇಲಿರುತ್ತದೆ. ಸಹಕಾರಿಗೆ ಧಕ್ಕೆ ಬಾರದಂತೆ ಸಾಲವನ್ನು ಮರುಪಾವತಿ ಮಾಡಿಸಬೇಕು. ಸದಸ್ಯರುಗಳಿಗೆ ಶೇ.20 ರಷ್ಟು ಡಿವಿಡೆಂಟ್ ನೀಡಲಾಗುವುದೆಂದು ಹೇಳಿದರು.

ಸಿ.ಎಂ.ಡಿ.ತೆರಿಗೆ ವೆಚ್ಚ, ಪೀಠೋಪಕರಣಗಳ ಸವಕಳಿ, ಕಂಪ್ಯೂಟರ್ ಮತ್ತು ಸಾಫ್ಟ್‍ವೇರ್ ನಿರ್ವಹಣೆ, ಲೆಕ್ಕ ಪರಿಶೋಧನಾ ಶುಲ, ಲಾಕರ್ ಬಾಡಿಗೆ, ನಿವ್ವಳ ಲಾಭ
ಸಾಲಗಳ ಮೇಲಿನ ಬಡ್ಡಿ, ಠೇವಣಿಗಳ ಮೇಲೆ ಬಂದ ಬಡ್ಡಿ, ಸುಸ್ತಿ ಬಡ್ಡಿ ಇನ್ನು ಮುಂತಾದ ವಿಚಾರಗಳ ಕುರಿತು ಮಹಾಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ಆರಂಭದಲ್ಲಿ ಮೃತ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು.

ಆದರ್ಶ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಎಸ್.ವೇದಮೂರ್ತಿ, ನಿರ್ದೇಶಕರುಗಳಾದ ಜೆ.ಮಧುಸೂದನ, ಚಂದ್ರಶೇಖರ್, ಎ.ಎಸ್.ಮಲ್ಲಿಕಾರ್ಜುನಸ್ವಾಮಿ
ಜಿ.ಎ.ಪ್ರಸನ್ನಕುಮಾರ್, ಎಂ.ಕೆ.ಮಲ್ಲಿಕಾರ್ಜುನ್, ಎಸ್.ಮೂರುಕಣ್ಣಪ್ಪ, ಎಂ.ವೆಂಕಟೇಶ್, ಕೆ.ರಾಜೇಶ್, ಶ್ರೀಮತಿ ಎಸ್.ಜೆ.ಶ್ವೇತ, ಶ್ರೀಮತಿ ಎಂ.ಜಿ.ಸರ್ವಮಂಗಳ ವೇದಿಕೆಯಲ್ಲಿದ್ದರು. ಸರ್ವ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದ್ದರು.

Advertisement
Tags :
Adarsh ​​Pattina Cooperative SocietybengaluruchitradurgaDR Thippeswamylakhnet profitsuddionesuddione newsಆದರ್ಶ ಪತ್ತಿನ ಸಹಕಾರಿ ಸಂಘಚಿತ್ರದುರ್ಗಡಿ.ಆರ್.ತಿಪ್ಪೇಸ್ವಾಮಿನಿವ್ವಳ ಲಾಭಬೆಂಗಳೂರುವಾರ್ಷಿಕಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article