Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಮನೆಯಿಂದ ಮತಚಲಾಯಿಸಿದ 3536 ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು

06:56 PM Apr 16, 2024 IST | suddionenews
Advertisement

ಚಿತ್ರದುರ್ಗ. ಏ.16: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 13 ರಿಂದ 16 ವರೆಗೆ ಜರುಗಿದ ಮನೆಯಿಂದ ಮತದಾನ ಕಾರ್ಯ ಪೂರ್ಣಗೊಂಡಿದೆ. 85 ವರ್ಷ ಮೇಲ್ಪಟ್ಟ 2601 ನಾಗರಿಕರು ಮತ್ತು 1475 ವಿಶೇಷ ಚೇತನರು ಸೇರಿ ಒಟ್ಟು 3536 ಜನರು ಮನೆಯಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

Advertisement

ಭಾರತ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನ ಮತದಾರರು ಇಚ್ಚಿಸಿದ್ದಲ್ಲಿ ತಮ್ಮ ಮನೆಯಿಂದಲೇ ಅಂಚೆ ಮತದ ಮೂಲಕ ಮತದಾನ ಮಾಡಲು ಕಲ್ಪಿಸಿತ್ತು.

ವಿಧಾನಸಭಾ ಕ್ಷೇತ್ರವಾರು ವಿವರ:

Advertisement

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 137 ಹಿರಿಯ ನಾಗರಿಕರು ಮತ್ತು 55 ಜನ ವಿಶೇಷ ಚೇತನರು ಮತ ಚಲಾಯಿಸಿದರು. ಇದೇ ಮಾದರಿಯಲ್ಲಿ ಅನುಕ್ರಮವಾಗಿ, ಹಿರಿಯೂರು ಕ್ಷೇತ್ರ ವ್ಯಾಪ್ತಿಯಲ್ಲಿ 191 ಮತ್ತು 122, ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ 84 ಮತ್ತು 81, ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 200 ಹಾಗೂ 254, ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 184 ಮತ್ತು‌ 55, ಹೊಸದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ 167 ಮತ್ತು‌ 117, ಪಾವಗಡ ಕ್ಷೇತ್ರದಲ್ಲಿ 472 ಮತ್ತು‌ 202, ಶಿರಾ ಕ್ಷೇತ್ರದಲ್ಲಿ 1065 ಮತ್ತು 589 ಜನರು ಮತ ಚಲಾಯಿಸಿದ್ದಾರೆ.

Advertisement
Tags :
3536 senior citizensbengaluruchitradurgaspecial soulssuddionesuddione newsvoted from homeಚಿತ್ರದುರ್ಗಬೆಂಗಳೂರುವಿಶೇಷ ಚೇತನರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯ ನಾಗರಿಕರು
Advertisement
Next Article