ಚಿತ್ರದುರ್ಗ | ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿ ನೌಕರರ ಪತ್ತಿನ ಸಹಕಾರ ಸಂಘಕ್ಕೆ 1.38 ಕೋಟಿ ಲಾಭ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 16 : ಸಹಕಾರ ಸಂಘದಿಂದ ನೀಡುವ ದೀರ್ಘಾವಧಿ ಸಾಲವನ್ನು ಆಡಳಿತ ಮಂಡಳಿಯು ಹತ್ತು ಲಕ್ಷ ರೂ.ಗಳಿಗೆ ಏರಿಸಿದ್ದು, ಸದಸ್ಯರುಗಳು ಸೌಲಭ್ಯವನ್ನು ಪಡೆದುಕೊಂಡು ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಸಹಕಾರ ಸಂಘದ ಅಧ್ಯಕ್ಷ ಕೆ.ಪಿ.ಬಸವರಾಜ್ ಕೋರಿದರು.
ಕೆ.ಇ.ಬಿ.ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ವಿಭಾಗೀಯ ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿ ನೌಕರರ ಪತ್ತಿನ ಸಹಕಾರ ಸಂಘ ಚಿತ್ರದುರ್ಗದ 64 ನೇ ವಾರ್ಷಿಕ ಮಹಾಸಭೆ ಉದ್ಗಾಟಿಸಿ ಮಾತನಾಡಿದರು.
ಚಿತ್ರದುರ್ಗ ವಲಯ ವಿದ್ಯುತ್ ಮುಖ್ಯ ಇಂಜಿನಿಯರ್ ರೋಮರಾಜ್ ಮಾತನಾಡಿ ಚಿತ್ರದುರ್ಗ ಜಿಲ್ಲೆಯವನಾಗಿ 1993 ರಿಂದ ಸಹಕಾರ ಸಂಘದ ಕಾರ್ಯವೈಖರಿಯನ್ನು ನೋಡಿದ್ದೇನೆ. ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತದಿಂದ ಸಹಕಾರ ಸಂಘ ಅಭಿವೃದ್ಧಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಹಕಾರ ಸಂಘದ ಕಾರ್ಯದರ್ಶಿ ವೀರೇಶ್ 2023-24 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ ಸಹಕಾರ ಸಂಘವು ಸದರಿ ಸಾಲಿನಲ್ಲಿ ಒಂದು ಕೋಟಿ 38 ಲಕ್ಷ ರೂ.ಗಳ ಲಾಭ ಗಳಿಸಿದೆ ಎಂದರು.
ಅಧಿಕಾರಿಗಳಾದ ಮೇಘರಾಜ್, ಮಲ್ಲಿಕಾರ್ಜುನ್, ತಿಮ್ಮಣ್ಣ, ಕಿರಣ್‍ರೆಡ್ಡಿ, ಷಣ್ಮುಖಪ್ಪ, ಮಹೇಶ್, ಶಿವರಾಂ ಹಾಗೂ ಸಂಘದ ಪದಾಧಿಕಾರಿಗಳಾದ ರವಿ, ಆರ್.ರಮೇಶ್,
ಸುರೇಶ್‍ಬಾಬು, ಆರ್.ರವಿಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ಮತ್ತು ಸಹಕಾರ ಸಂಘದ ನಿರ್ದೇಶಕರುಗಳು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.