ತಾಯಿ ಹಾಲು ಕುಡಿಯದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ : ಡಾ. ನಾಗರಾಜ್
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.10 : ತಾಯಿಯ ಹಾಲು ಅಮೃತಕ್ಕೆ ಸಮಾನ ಈ ದಿನಗಳಲ್ಲಿ ಭೂಮಿಯ ಮೇಲೆ ಎಲ್ಲವೂ ಕಲುಷಿತವಾಗಿದೆ ಅದರಿಂದ ನಾನಾ ರೋಗಗಳು ಹರಡುತ್ತಿವೆ. ಏಕೆಂದರೆ ಮಗುವಿಗೆ ಬೇಕಾದ ದೈಹಿಕ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಪಡೆಯುವಲ್ಲಿ ತಾಯಿಯ ಹಾಲು ಮಹತ್ವದ ಪಾತ್ರವನ್ನು ವಹಿಸುತ್ತದೆ. ತಾಯಿ ಹಾಲು ಕುಡಿಯದ ಮಕ್ಕಳು ಬಹಳ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ಪ್ರಾಂಶುಪಾಲ ಡಾ. ಟಿ.ಎಸ್ ನಾಗರಾಜ್ ಹೇಳಿದರು.
ನಗರದ ತಮಟಗಲ್ಲು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.
ಔಷಧ ಉಪಚಾರ ವಿಭಾಗದ ಮುಖ್ಯಸ್ಥರಾದ ಡಾ ಯೋಗಾನಂದ ಮಾತನಾಡಿ ಯಾಂತ್ರಿಕ ಬದುಕು ಹಾಗೂ ಯುವ ಪೀಳಿಗೆ ಎದೆ ಹಾಲು ಉಣಿಸುವಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಅದರಿಂದ ಮಗುವಿನ ಆರೋಗ್ಯಕ್ಕೆ ತುಂಬಾ ಗಂಭೀರವಾದ ಪರಿಣಾಮ ಬೀರುತ್ತದೆ. ತಾಯಿ ಹಾಲು ಸಿಕ್ಕ ಮಗುವೆ ಭಾಗ್ಯ ಎಂದು ತಿಳಿಸಿದರು.
ಬಸವೇಶ್ವರ ಮೆಡಿಕಲ್ ಕಾಲೇಜಿನ ಓಬಿಜಿ ವಿಭಾಗದ ಡಾ. ಲತಾ ಅವರು ವಿದ್ಯಾರ್ಥಿಗಳಿಗೆ ತಾಯಿ ಎದೆ ಹಾಲಿನ ಮಹತ್ವದ ಬಗ್ಗೆ ವಿಚಾರ ಸಂಕೀರ್ಣ ನಡೆಸಿಕೊಟ್ಟರು.
ತಾಯಿಯ ಎದೆ ಹಾಲಿನ ಪ್ರಕಾರಗಳು ಅದರ ಬೇರೆ ಹಾಲಿನ ಜೊತೆ ವ್ಯತ್ಯಾಸ ತಿಳಿಸಿದರು. ಹಾಲನ್ನು ಮಗುವಿಗೆ ಕುಡಿಸುವ ಸರಿಯಾದ ವಿಧಾನ, ತಪ್ಪಿದಲ್ಲಿ ಅದರಿಂದ ಆಗುವ ತೊಂದರೆಗಳು. ತಾಯಿ ಹಾಲುಣಿಸುವ ಕೋಣೆಯಲ್ಲಿ ಯಾರು ಇರಕೂಡದು ಮತ್ತು ತಾಯಿಯೂ ಸಹ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಹಾಲು ಕುಡಿಸಿದ ನಂತರ ಮಗುವನ್ನು ತೇಗು ಬರುವತನಕ ಮಗುವನ್ನು ಬುಜದ ಮೇಲೆ ಎತ್ತಿಕೊಂಡು ನಂತರ ಮಲಗಿಸಬೇಕು. ಇಲ್ಲದಿದ್ದರೆ ಕೆಲವೊಂದು ಸಲ ಕುಡಿದ ಹಾಲು ವಾಂತಿಯಾಗುತ್ತದೆ. ಅಥವಾ ಶ್ವಾಸಕೋಶಕ್ಕೆ ಹೋಗಿ ಮಗುವಿಗೆ ತುಂಬಾ ತೊಂದರೆ ಆಗುವ ವಿಚಾರವನ್ನು ತಿಳಿಸಿದರು.
ಕೆಲಸಕ್ಕೆ ಹೋಗುವ ಮಹಿಳೆಯರು ಹಾಲುಣಿಸುವುದು ತುಂಬಾ ಕಷ್ಟಕರವಾಗುತ್ತದೆ ಅದರಿಂದ ಉಂಟಾಗುವ ಮಾನಸಿಕ ಒತ್ತಡ ಅವರ ದೇಹದ ಆರೋಗ್ಯದ ಮೇಲೆ ಆಗುವ ಅಪಾಯಗಳು ಹೆಚ್ಚು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳು ಉಂಟು ಎಂದು ತಿಳಿಸಿದರು. ತಾಯಿ ಎದೆಹಲು ಉಣಿಸುವುದರಿಂದ ತಾಯಿಯ ಆರೋಗ್ಯ ಸುಧಾರಿಸುತ್ತದೆ ಪ್ರೋಲ್ಯಾಕ್ಟಿನ್ ಮತ್ತು ಆಕ್ಸಿಟೋಸಿನ್ ಹರ್ಮೋನುಗಳ ಲಾಭವನ್ನು ಪಡೆಯುತ್ತಾಳೆ. ಹಾರ್ಮೋನುಗಳು ಹಾಲು ಉಳಿಸದ ತಾಯಿಯಲ್ಲಿ ಬಿಡುಗಡೆ ಆಗುವುದಿಲ್ಲ. ಈ ವರ್ಷ ತಾಯಿ ಹಾಲಿನ ಮಹತ್ವದ ಕುರಿತಾದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸುಷ್ಮಾ ಹಾಗೂ ಅನುಷಾ ನಡೆಸಿಕೊಟ್ಟರು ಸ್ವಾಗತವನ್ನು ಶಮಂತಕಮಣಿ ನೆರವೇರಿಸಿದಳು. ವಂದನಾರ್ಪಣೆಯನ್ನು ಪೂಜಾ ಬಿ ಸಿ ಮಾಡಿದಳು.
ಕಾರ್ಯಕ್ರಮದಲ್ಲಿ ಡಾ ವಿಜಯಕುಮಾರ್, ಎಂ ಎಂ ಜೆ, ಡಾ ಬಸವರಾಜ್, ಎಚ್ಎಸ್ ಡಾ ಸ್ನೇಹಲತಾ, ಡಾ ಸೌಮ್ಯ, ತಮಟಗಲ್ಲು ಗ್ರಾಮದ ಪ್ರಶಾಂತ್ ಎಚ್ಐಒ, ಶಬಾನಬಾನು ಸಿಎಚ್ಒ ಮತ್ತು ಶ್ರೀಮತಿ ರುದ್ರಮ್ಮ ಅಧ್ಯಕ್ಷರು ಗ್ರಾಮ ಪಂಚಾಯಿತಿ ತಮಟಗಲ್ಲು, ಸಣ್ಣ ಹನುಮಂತಪ್ಪ ಸದಸ್ಯರು ಗ್ರಾಮ ಪಂಚಾಯಿತಿ, ಬಿಟಿ ಸಾಕಮ್ಮ, ದೊಡ್ಡ ಕರಬಸಪ್ಪ, ಕೆಂಚಣ್ಣ, ಮುಖಂಡರು ತಮಟಗಲ್ಲು ಗ್ರಾಮ ಶಬನ ಬಾನು ಕಮ್ಯುನಿಟಿ ಹೆಲ್ತ್ ಆಫೀಸರ್ . ಆಶಾ ಕಾರ್ಯಕರ್ತರಾದ ಶಿವಮಾಲಾ ಮತ್ತು ಗೀತಾ ಹಾಜರಿದ್ದರು.