Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಫೆಬ್ರವರಿ 8 ರಂದು ಮುಖ್ಯಮಂತ್ರಿಗಳ ಬೃಹತ್ ಜನತಾ ದರ್ಶನ ನಡೆಯುವ ಸಾಧ್ಯತೆ : ಬಾಕಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ

06:27 PM Jan 22, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ. ಜ.22: ಜಿಲ್ಲೆಯ 9 ಕಡೆಗಳಲ್ಲಿ ಇದುವರೆಗೂ ಜನತಾ ದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಟ್ಟು 2631 ಅರ್ಜಿ ಸ್ವೀಕಾರವಾಗಿವೆ. 2134 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಕಂದಾಯ ಇಲಾಖೆ 277 ಹಾಗೂ ಇತರೆ ಇಲಾಖೆಗಳ 220 ಅರ್ಜಿಗಳು ಬಾಕಿ ಉಳಿದಿದ್ದು, ಅಧಿಕಾರಿಗಳು ಈ ಕುರಿತು ಕ್ರಮಕೈಗೊಂಡು ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಸೋಮವಾರ ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.

ಜನತಾ ದರ್ಶನದಲ್ಲಿ ಸ್ವೀಕರಿಸಿದ ಅರ್ಜಿಗಳ ವಿಲೇವಾರಿ ಒಂದು ತಿಂಗಳು ಮಾತ್ರ ಕಾಲಾವಕಾಶವಿದೆ. ಈ ಕಾಲಮಿತಿಯಲ್ಲಿಯೇ ಅರ್ಜಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಸ್ವೀಕರಿಸಿದ ಅರ್ಜಿಗಳು ಐ.ಪಿ.ಜಿ.ಆರ್.ಎಸ್ ತಂತ್ರಾಂಶದಲ್ಲಿ ಗಣಕೀಕೃತಗೊಂಡಿವೆ. ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಬೇಕು. ಇದರ ಹೊರತಾಗಿ ಜನರು ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಹೋಗಿ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತಾಗಬಾರದು. ಈ ರೀತಿಯಾಗಿ ಸ್ಥಳೀಯವಾಗಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಹೊತ್ತು, ಜನರು ನನ್ನ ಬಳಿ ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ನವೆಂಬರ್ 27 ರಂದು ಜರುಗಿದ ಬೃಹತ್ ಜನತಾ ದರ್ಶನದಲ್ಲಿ ಎಚ್ಚರಿಕೆ ನೀಡಿದ್ದಾರೆ.

Advertisement

ಫೆಬ್ರವರಿ 8 ರಂದು ಮುಖ್ಯಮಂತ್ರಿಗಳ ಬೃಹತ್ ಜನತಾ ದರ್ಶನ ನಡೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಇದುವರೆಗೂ ಜಿಲ್ಲೆಯಲ್ಲಿ ಜರುಗಿದ ಜನತಾ ದರ್ಶನ ಅರ್ಜಿಗಳ ವಿಲೇವಾರಿ ಕುರಿತು ಮುಖ್ಯಮಂತ್ರಿಗಳು ಮಾಹಿತಿ ಪಡೆಯಲಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ತ್ವರಿತವಾಗಿ ಅರ್ಜಿಗಳನ್ನು ವಿಲೇ ಮಾಡಬೇಕು ಎಂದರು.

ಜನತಾ ದರ್ಶನದ ಹೊರತಾಗಿ ಮುಖ್ಯಮಂತ್ರಿಗಳ ಕಚೇರಿ ಸಾರ್ವಜನಿಕರು ಸಲ್ಲಿಸುವ ಕುಂದುಕೊರತೆ, ಅಹವಾಲು, ಸಾರ್ವಜನಿಕರ ದೂರುಗಳನ್ನು ಸಹ ಐ.ಪಿ.ಜಿ.ಆರ್.ಎಸ್ ತಂತ್ರಾಂಶ ಮೂಲಕ ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಕೊಡಲಾಗುತ್ತಿದೆ. ಈ ರೀತಿಯಾಗಿ ಜಿಲ್ಲೆಗೆ ಸಂಬಂಧಿಸಿದ 38 ಕುಂದುಕೊರತೆ ಹಾಗೂ ಅವಹಾಲುಗಳು, 72 ಸಾರ್ವಜನಿಕರ ಮನವಿಗಳ ವಿಲೇವಾರಿಯನ್ನು ಸಹ ತುರ್ತಾಗಿ ಮಾಡಬೇಕು. ಜಿಲ್ಲೆಯ ಹಲವು ಅಧಿಕಾರಿಗಳು ಐ.ಪಿ.ಜಿ.ಆರ್.ಎಸ್ ತಂತ್ರಾಂಶಕ್ಕೆ ಲಾಗಿನ್ ಕೂಡ ಆಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಶಾಸಕರುಗಳ ನೇತೃತ್ವದಲ್ಲಿ ಬಗರ್‍ಹುಕುಂ ಸಮಿತಿ ಸಭೆ ನಡೆಸಿ, ಅರ್ಜಿಗಳನ್ನು ಪರಿಹರಿಸುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪ್ರಭಾರೆ ಉಪವಿಭಾಗಾಧಿಕಾರಿ ವಿವೇಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ.ಬಣಕಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಓ.ಪರಮೇಶ್ವರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ರೇಣುಪ್ರಸಾದ್ ಸೇರಿದಂತೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement
Tags :
chief ministerDistrict Collector Divya Prabhu GRJmass Janata Darshanpending applicationsಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆಬಾಕಿ ಅರ್ಜಿಬೃಹತ್ ಜನತಾ ದರ್ಶನಮುಖ್ಯಮಂತ್ರಿಶೀಘ್ರ ವಿಲೇವಾರಿ
Advertisement
Next Article