For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಮೆಡಿಕಲ್ ಕಾಲೇಜು ಬಗ್ಗೆ ಮುಖ್ಯಮಂತ್ರಿಗಳ  ಮಾಹಿತಿ ಸತ್ಯಕ್ಕೆ ದೂರವಾದ ಮಾತು : ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ

05:45 PM Feb 19, 2024 IST | suddionenews
ಚಿತ್ರದುರ್ಗ ಮೆಡಿಕಲ್ ಕಾಲೇಜು ಬಗ್ಗೆ ಮುಖ್ಯಮಂತ್ರಿಗಳ  ಮಾಹಿತಿ ಸತ್ಯಕ್ಕೆ ದೂರವಾದ ಮಾತು   ಮಾಜಿ ಶಾಸಕ ಜಿ ಹೆಚ್  ತಿಪ್ಪಾರೆಡ್ಡಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಫೆ. 19 : ಮೆಡಿಕಲ್ ಕಾಲೇಜು ಬಗ್ಗೆ ಮುಖ್ಯಮಂತ್ರಿಗಳು ನೀಡಿರುವ ಮಾಹಿತಿ ಸತ್ಯಕ್ಕೆ ದೂರವಾದ ಮಾತಾಗಿದೆ. ಇದೇ ರೀತಿ ರಾಜ್ಯ ಸರ್ಕಾರ ಅಪ್ಪರ್ ಭದ್ರಾ ಯೋಜನೆಗೆ ರಾಜ್ಯ ಸರ್ಕಾರ ಹಣವನ್ನು ನೀಡದಿರುವ ಬಗ್ಗೆ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ವಿಷಾಧವನ್ನು ವ್ಯಕ್ತಪಡಿಸಿದ್ದಾರೆ.

Advertisement
Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಫೆ. 16ರಂದು ಮಂಡಿಸಿದ 24-25ನೇ ಸಾಲಿನ ಅಯವ್ಯಯದಲ್ಲಿ ಅನೇಕ ಇಲಾಖೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಆಯವ್ಯಯದಲ್ಲಿ ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ 150 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ, ಇದರ
ಅಭಿವೃದ್ಧಿಗಾಗಿ ಗಮನ ನೀಡಲಾಗುವುದೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಮೆಡಿಕಲ್ ಕಾಲೇಜಿಗೆ 500 ಕೋಟಿ ಇಟ್ಟಿರುವುದಕ್ಕೆ ಸಂತೋಷವಾಯಿತೆಂದು ತಿಳಿಸಿದ್ದಾರೆ. ಆದರೆ ಇದು ಹಿಂದಿನ ವರ್ಷವೇ ಆಯವ್ಯಯದಲ್ಲಿ ಹಣ ಮಂಜೂರಾಗಿತ್ತು.

ಜನವರಿ ಅಥವಾ ಫೆಬ್ರವರಿಯಲ್ಲಿ ಟೆಂಡರ್ ಫೈನಲ್ ಆಗಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಟೆಂಡರ್ ಕರೆದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜು ಬೊಮ್ಮಾಯಿಯವರು, ಗ್ರೀನ್ ಸಿಗ್ನಲ್ ನೀಡಿ ಕಟ್ಟಡದ ಕಾಮಗಾರಿಯನ್ನು ಪ್ರಾರಂಭ ಮಾಡಲು ಸೂಚಿಸಿದ್ದರು.  ಅದರಂತೆ ಕಟ್ಟಡದ ಕಾಮಗಾರಿಯೂ ಪ್ರಾರಂಭ ಮಾಡಲಾಗಿತ್ತು. ಕಳೆದ ವರ್ಷದ ಲೆಕ್ಕದಲ್ಲಿ 150 ವಿದ್ಯಾರ್ಥಿಗಳು ಕಾಲೇಜಿಗೆ ಸೇರಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಮೊದಲನೇ ವರ್ಷದ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದರು.

ಈ ವರ್ಷ ಮುಖ್ಯಮಂತ್ರಿಗಳು ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ 500 ಕೋಟಿ ರೂ,ಗಳನ್ನು ನೀಡಿದ್ದಾರೆ. ಎಂಬುದನ್ನು ಕೆಲ ಕಾಂಗ್ರೆಸ್ ನಾಯಕರು ಮಾಧ್ಯಮಗಳ ಮೂಲಕ ಹೇಳಿರುವುದು ತಪ್ಪು, ಕಳೆದ ಬಿಜೆಪಿ ಸರ್ಕಾರದಲ್ಲಿಯೇ ಎಲ್ಲಾ ರೀತಿಯ ವ್ಯವಸ್ಥೆಯಾಗಿತ್ತು. ಕೇಂದ್ರ ಸರ್ಕಾರದ ಎಂಸಿಐಯ ಅನುಮತಿಯೂ ದೂರಕಿದ್ದು, ಹಾಸ್ಟಲ್ ಸಮಸ್ಯೆಯನ್ನು ಸಹಾ ನಿವಾರಣೆ ಮಾಡಲಾಗಿತ್ತು. ಭೋಧಕರ ಕೊಠಡಿ, ಹಾಸ್ಟಲ್ ಸೇರಿದಂತೆ ಇತರೆ ಕಟ್ಟಡಗಳನ್ನು ತೋರಿಸಿದ ನಂತರವೇ ಕೇಂದ್ರ ಕಾಲೇಜು ಪ್ರಾರಂಭಕ್ಕೆ ಅನುಮತಿಯನ್ನು ನೀಡಿದೆ ಎಂದ ಅವರು, ಕೇಂದ್ರ ಸರ್ಕಾರ ಅಪ್ಪರ್ ಭದ್ರಾಕ್ಕಾಗಿ 5300 ಕೋಟಿಯನ್ನು ನೀಡುವುದಾಗಿ ತಿಳಿಸಿತ್ತು. ಇದರ ಬಗ್ಗೆ ನಮ್ಮ ಗಮನ ಇದೆ.

ರಾಜ್ಯ ಸರ್ಕಾರ ಇದಕ್ಕೆ ನಿರ್ಧಿಷ್ಠವಾದ ಅಕೌಂಟ್‍ನ್ನು ಪ್ರಾರಂಭ ಮಾಡುವುದರ ಮೂಲಕ ಹಣವನ್ನು ಪಡೆಯಬಹುದಾಗಿದೆ ಆದರೆ ರಾಜ್ಯ ಸರ್ಕಾರ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿದೆ ಜನರನ್ನು ಗೊಂದಲದಲ್ಲಿ ಈಡು ಮಾಡುತ್ತಿದೆ. ಹಣ ಇರುತ್ತದೆ ಹೋಗುವುದಿಲ್ಲ ಇದರ ಬಗ್ಗೆ ಹೋರಾಟ ಮಾಡುತ್ತಿರುವುದು ಸಂತೋಷದಾಯಕವಾಗಿದೆ. ಇದರಲ್ಲಿ ತಪ್ಪೇನ್ನಿಲ್ಲ ಇದರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರುವುದು ಅಗತ್ಯವಾಗಿದೆ. ಅಪ್ಪರ್ ಭದ್ರಾ ಬಂದರೆ ಒಂದು ಪಕ್ಷಕ್ಕೆ ಅಲ್ಲ ಚಿತ್ರದುರ್ಗ ಜಿಲ್ಲೆ ಪೂರ್ಣವಾಗಿ ನೀರಾವರಿಯಾಗಲಿದೆ. ನಾವು ಅದರ ಪರವಾಗಿ ಇದ್ದೇವೆ ಎಂದರು.

ಈ ಸಾಲಿನ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಅಪ್ಪರ್ ಭದ್ರಾ ಯೋಜನೆಗೆ ಕನಿಷ್ಠ ಪ್ರಮಾಣದ ಹಣವನ್ನು ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೂ ಒಂದು ರೂಪಾಯಿಯನ್ನು ಸಹಾ ನೀಡಿಲ್ಲ, ಇದರಿಂದ ಭ್ರಮ ನಿರಸನವಾಗಿದೆ. ಕೇಂದ್ರ ಸರ್ಕಾರ 5300 ಕೋಟಿ ರೂ.ಗಳನ್ನು ನೀಡಲು ಬದ್ದವಾಗಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡಬೇಕಿದೆ. 100ವರ್ಷದಲ್ಲಿ 75 ವರ್ಷ ಬರಗಾಲವನ್ನು ಅನುಭವಿಸಿದ್ದೇವೆ. ಅಪ್ಪರ್ ಭದ್ರಾ ಅತಿ ಮುಖ್ಯವಾದ ಯೋಜನೆಯಾಗಿದೆ. ಹೋರಾಟಕ್ಕೆ ಸಹ ಸಮ್ಮಿತಿಯಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

Advertisement
Tags :
Advertisement