Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ಅಂಗನವಾಡಿಯಲ್ಲಿ ಕಳ್ಳತನ

09:28 PM Jul 24, 2024 IST | suddionenews
Advertisement

ಸುದ್ದಿಒನ್, ಚಳ್ಳಕೆರೆ, ಜುಲೈ. 24 :   ಅಂಗನವಾಡಿ ಕೇಂದ್ರದ ಬೀಗ ಮುರಿದು ಕಳವು ಮಾಡಿದ ಪ್ರಕರಣ ಇಂದು ಬೆಳಕಿಗೆ ಬಂದಿದೆ.

Advertisement

ನಗರದ ಟಿ.ಎ. ಟಿ. ಟಾಕೀಸ್ ಹಿಂಭಾಗದ ಅಂಗನವಾಡಿ ಕೇಂದ್ರದ ಬೀಗ ಮುರಿದು ಒಳ ನುಗ್ಗಿದ  ಕಳ್ಳರು ಅಂಗನವಾಡಿ ಅಡಿಗೆ ಕೋಣೆಯಲ್ಲಿದ್ದ  ಕುಕ್ಕರ್, ಪಾತ್ರೆ,  ಬಕೆಟ್ ಸೇರಿದಂತೆ ಅಡುಗೆ ಮಾಡುವ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ.
ಒಂದೇ ಸ್ಥಳದಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳಿದ್ದು ಮತ್ತೊಂದು ಅಂಗನವಾಡಿ ಕೇಂದ್ರ ಬೀಗ ಒಡೆಯಲು ಮುಂದಾಗಿದ್ದು ಕಳವು ಪ್ರಕರಣ ವಿಫಲರಾಗಿದ್ದಾರೆ.

ಎಂದಿನಂತೆ ಅಂಗನವಾಡಿ ಕೇಂದ್ರ ಶಿಕ್ಷಕಿ ಕರ್ತವ್ಯಕ್ಕೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದ್ದು ತಕ್ಷಣ ಇಲಾಖೆ ಅಧಿಕಾರಿ ಹಾಗೂ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿ  ಪೊಲೀಸ್ ಕಾನ್ ಸ್ಟೇಬಲ್ ಲಿಂಗರಾಜು ಹಾಗೂ ಶಂಕರ್  ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Advertisement

Advertisement
Tags :
bengaluruchallakerechitradurgasuddionesuddione newsTheft at Anganwadiಅಂಗನವಾಡಿಯಲ್ಲಿ ಕಳ್ಳತನಚಳ್ಳಕೆರೆಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article