ಚಳ್ಳಕೆರೆ | ಪಿಡಿಓ ಅಮಾನತು
05:52 PM Nov 29, 2024 IST | suddionenews
ಚಿತ್ರದುರ್ಗ. ನ.29: ಅನಧಿಕೃತ ಗೈರು ಹಾಜರಿ ಹಾಗೂ ಕರ್ತವ್ಯದ ವೇಳೆ ಮದ್ಯಪಾನ ಸೇವಿಸಿದ ಹಿನ್ನಲೆಯಲ್ಲಿ ಚಳ್ಳಕೆರೆ ತಾಲ್ಲೂಕು ಗೌಡಗೆರೆ ಗ್ರಾ.ಪಂ. ಪಿಡಿಓ ವೆಂಕಟೇಶ್ ಅವರನ್ನು ಅಮಾನತುಗೊಳಿಸಿ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
Advertisement
ಚಳ್ಳಕೆರೆ ತಾ.ಪಂ.ಇಓ ಪಿಡಿಓ ವೆಂಕಟೇಶ್ ಅವರ ಮೇಲೆ ಕೇಳಿ ಬಂದ ದೂರುಗಳನ್ನು ಪರಿಶೀಲಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಅವರಿಗೆ ವರದಿ ನೀಡಿದ್ದರು. ಈ ಹಿನ್ನಲೆಯಲ್ಲಿ ಕೆ.ಸಿ.ಎಸ್(ಸಿ.ಸಿ.ಎ) ನಿಯಾಮಾವಳಿ-1957ರ ನಿಯಮ 10(1)ರ ಅನ್ವಯ ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಪಿಡಿಓ ವೆಂಕಟೇಶ ಅವರನ್ನು ಅಮಾನುತು ಮಾಡಿದ್ದಾರೆ. ಗೌಡಗೆರೆ ಗ್ರಾ.ಪಂ.ಗೆ ನನ್ನಿವಾಳ ಗ್ರಾ.ಪಂ.ಕಾರ್ಯದರ್ಶಿ ಆರ್.ಪಿ.ವೇದಮೂರ್ತಿಯವರನ್ನು ಹೆಚ್ಚುವರಿ ಪಿಡಿಓ ಆಗಿ ನೇಮಕ ಮಾಡಲಾಗಿದೆ.
Advertisement