For the best experience, open
https://m.suddione.com
on your mobile browser.
Advertisement

ಚಳ್ಳಕೆರೆ | ರಸ್ತೆ ಸಮಸ್ಯೆ ಬಗೆಹರಿಸಿ : ಕೋಡಿಹಳ್ಳಿ ರೈತರ ಮನವಿ

05:32 PM Jun 01, 2024 IST | suddionenews
ಚಳ್ಳಕೆರೆ   ರಸ್ತೆ ಸಮಸ್ಯೆ ಬಗೆಹರಿಸಿ   ಕೋಡಿಹಳ್ಳಿ ರೈತರ ಮನವಿ
Advertisement

ಚಿತ್ರದುರ್ಗ, ಜೂ.‌01 : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಮನ್ನೆ ಕೋಟೆ ಮಜುರೆ ಕೋಡಿಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ  ತುಂಬಾ ಜ್ವಲಂತ ಸಮಸ್ಯೆಗಳಿವೆ. ಸಾರ್ವಜನಿಕರ ಪ್ರಮುಖ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಪೂರೈಕೆ, ಚರಂಡಿ ಸ್ವಚ್ಛತೆ, ರಸ್ತೆಗಳ ಸ್ವಚತೆ, ಶುದ್ಧ ನೀರಿನ ಘಟಕ, ರುದ್ರಭೂಮಿ, ಸೇರಿದಂತೆ ಹಲವು ಸಮಸ್ಯೆಗಳು ಗ್ರಾಮವನ್ನು ಕಾಡುತ್ತಿವೆ ಹಾಗೂ ಇನ್ನೂ ಜೀವಂತವಾಗಿವೆ.

Advertisement

ಇದರಲ್ಲಿ ಮುಂಗಾರು ಬಂತೆಂದರೆ ರೈತರಿಗೆ ತಮ್ಮ ಜಮೀನುಗಳಿಗೆ ಹೇಗೆ ಹೋಗಬೇಕು, ನಾವು ಹೇಗೆ ಬಿತ್ತನೆ ಮಾಡಬೇಕು ಎಂಬುದೇ ಪ್ರತಿ ವರ್ಷವೂ ಬಹು ದೊಡ್ಡ ಜ್ವಲಂತ ಸಮಸ್ಯೆಯಾಗಿ ಹಾಗೆ ಉಳಿದಿದೆ.

Advertisement

ಈ ಸಮಸ್ಯೆಯು ಭಾರತೀಯ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಅಡಿಯಲ್ಲಿ ನಿರ್ಮಿಸಿದ ಎನ್.ಏಚ್.150A ಹೈವೇ ರಸ್ತೆ ಪೂರ್ಣಗೊಂಡ ನಂತರ ಈ ಜಮೀನುಗಳ ದಾರಿಗಳ ಸಮಸ್ಯೆ ಇನ್ನೂ ತುಂಬಾ ತಲೆನೋವಾಗಿ ಪರಿಣಮಿಸಿದೆ, ಏಷ್ಟೋ  ಜಮೀನುಗಳ ವಾರಸುದಾರರು ಬಹು ವರ್ಷಗಳ ಪೂರ್ವ ಅನಾದಿ ಕಾಲದಿಂದಲೂ ಬಳಸುದಿದ್ದ ರಸ್ತೆಗಳನ್ನು ಏಕಾಏಕಿ ಬಂದ್ ಮಾಡಿದ್ದಾರೆ, ನಾವು ಯಾಕೆಂದು ಪ್ರಶ್ನಿಸಿದರೆ ನಿಮ್ಮ ಹತ್ತಿರ ದಾಖಲೆಗಳು ಏನಾದ್ರೂ ಇದ್ದರೆ ತೋರಿಸಿ ಎಂದು ಕೇಳುತ್ತಿದ್ದಾರೆ.

Advertisement

ಅಲ್ಲದೆ ಏಷ್ಟೋ ಬಾರಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಏನೂ ಪ್ರಯೋಜನವಾಗಿಲ್ಲ ಹಾಗಾಗಿ ಕರ್ನಾಟಕ ಸರ್ಕಾರದ " ನಮ್ಮ ಹೊಲ,ನಮ್ಮ ದಾರಿ " ಎಂಬ ಯೋಜನೆಯ ಕಾನೂನಿನ ಕರ್ನಾಟಕ ಗ್ರಾಮ ಸ್ವರಾಜ್ಯ ಕಾಯ್ದೆ ಕಲಂ 60(ಬಿ)  ಅಡಿಯಲ್ಲಿ ಮುಖ್ಯಮಂತ್ರಿ ಗ್ರಾಮ ಸಡಕ್ ( CMGSY) ಯೋಜನೆಯಡಿ ರಾಜ್ಯದ 189 ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿಗಳಿಗೆ ಸರ್ಕಾರದ ಆದೇಶ ಸಂಖ್ಯೆ : ಗ್ರಾಅಪ:174:ಆರ್ ಆರ್ ಸಿ :2017 ಬೆಂಗಳೂರು, ಈ  ಯೋಜನೆಯ ಅನ್ವಯ  ನಮ್ಮ ಕೋಡಿಹಳ್ಳಿ ಗ್ರಾಮದ ರೈತರಿಗೆ ಎಲ್ಲೆಲ್ಲಿ ರಸ್ತೆಗಳ ಸಮಸ್ಯೆಗಳು ಇವೆ ಎಂಬುದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸುವ ಮೂಲಕ ಯಾರು ರಸ್ತೆಗಳನ್ನು ಬಂದ್ ಮಾಡಿದ್ದಾರೋ ಅವರಿಗೆ ಕರ್ನಾಟಕ ಸರ್ಕಾರ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಅನ್ವಯ 1956 ರ ಕಾನೂನಿನ ಅಧಿನಿಯಮದ ಪ್ರಕಾರ ಅವರಿಗೆ ರಸ್ತೆಗಳನ್ನು ತೆರವುಗೊಳಿಸುವಂತೆ ಸುತ್ತೋಲೆ ಹೊರಡಿಸಿ ಆದೇಶ ನೀಡಿ ರೈತರಿಗೆ ಉಳುಮೆ ಮಾಡಲು ಅನುವು ಮಾಡಿಕೊಡಬೇಕಾಗಿ ಚಿತ್ರದುರ್ಗ ಜಿಲ್ಲೆಯ ಕಾರ್ಯಾಲಯದ ಉಪ ವಿಭಾಗಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘ ಚಿತ್ರದುರ್ಗ, ಎಲ್ಲ ಪದಾಧಿಕಾರಿಗಳು ಹಾಗೂ ರಾಜ್ಯಾಧ್ಯಕ್ಷರಾದ ಪ್ರೊ.ಸಿ.ಕೆ ಮಹೇಶ್ವರಪ್ಪ ರವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದರು.

Advertisement
Advertisement

ಈ ಸಂದರ್ಭದಲ್ಲಿ ಕೋಡಿಹಳ್ಳಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರಾದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಶ್ರೀಯುತ ಎಂ.ಏಚ್ ತಿಪ್ಪೇಸ್ವಾಮಿ, ಲಿಂಗರಾಜು.ಡಿ
ಬಸವರಾಜು ರೆಡ್ಡಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಆದ ಶ್ರೀಯುತ ತಿಪ್ಪೇಸ್ವಾಮಿ.ಪಿ,
ಮಲ್ಲಯ್ಯ, ಪುಟ್ಟಣ್ಣ, ರುದ್ರಣ್ಣ, ರಾಜಶೇಖರ್, ತಿಪ್ಪೇಸ್ವಾಮಿ,  ಕೋಟಿ, ತಿಪ್ಪೇಶ್, ರಾಜಣ್ಣ, ಮಾಜಿ ಗ್ರಾ.ಪಂ.ಸದಸ್ಯ,  ಬಿ.ಟಿ ಶಿವರಾಜ್ ಭಾರಿ, ಪಲ್ಲಕ್ಕಿ ವೀರಣ್ಣ, ಈರಾ ರೆಡ್ಡಿ, ನಾಗರಾಜ್,
ಇತರರು ಉಪಸ್ಥಿತರಿದ್ದರು.

Advertisement
Tags :
Advertisement