Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ಮಳೆಗೆ ಪ್ರಾರ್ಥನೆ, ಕತ್ತೆಗಳ ವಿಶೇಷ ಮೆರವಣಿಗೆ

09:44 PM Jul 27, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

Advertisement

ಸುದ್ದಿಒನ್, ಚಳ್ಳಕೆರೆ, ಜುಲೈ 27: ಮಳೆಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗೌಡರಹಟ್ಟಿ ಗ್ರಾಮಸ್ಥರು ಶನಿವಾರ ಕತ್ತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗ್ರಾಮದ ಪ್ರಮುಖ ಬೀದಿಯಲ್ಲಿ ತಮಟೆ ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಗೌಡರ ಹಟ್ಟಿ ಗ್ರಾಮದ ಮುಖಂಡ ಎಸ್.ರಂಗಪ್ಪ, ಮುಂಗಾರು ಹಂಗಾಮಿನಲ್ಲಿ ಮೊದಲ ಹಂತದಲ್ಲಿ ಬಿತ್ತಿರುವ ಶೇಂಗಾ, ತೊಗರಿ, ಸಜ್ಜೆ, ಔಡಲ, ಸಿರಿಧಾನ್ಯ ಮುಂತಾದ ಬೆಳೆ ಮಳೆ ಇಲ್ಲದ ಕಾರಣ ಬಾಡುತ್ತಿವೆ.
ಎರಡನೆ ಹಂತದ ಬಿತ್ತನೆಗೆ ಶೇಂಗಾ ಬೀಜ-ಗೊಬ್ಬರ ಸಿದ್ಧತೆ ಮಾಡಿಕೊಂಡು ಮುಗಿಲ ಕಡೆ ಮಳೆ ಎದುರು ನೋಡುವಂತಾಗಿದೆ. ಇನ್ನು3-4 ದಿನದಲ್ಲಿ ಮಳೆ ಬರದೆ ಹೋದರೆ ಜೀವನ ನಡೆಸಲು ತುಂಬಾ ಕಷ್ಟವಾಗುವುದಲ್ಲದೆ ನಗರಪ್ರದೇಶಕ್ಕೆ ಗುಳೆ ಹೋಗುವ ಪರಿಸ್ಥಿತಿ ಒದಗಿಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಗ್ರಾಮದ ರೈತ ಕೆ.ಪಿ.ಹನುಮಂತರಾಯ, ಮಾತನಾಡಿ ರಾಜ್ಯದ ವಿವಿಧೆಡೆ ನದಿ, ಕಣಿವೆ, ಕೆರೆ-ಕಟ್ಟೆ ತುಂಬಿ ಜನರು ನೆರೆ ಹಾವಳಿ ಎದುರಿಸುತ್ತಿದ್ದರೂ ಚಿತ್ರದುರ್ಗ ಜಿಲ್ಲೆಗೆ ಏನಾಗಿದೆ ಸ್ವಾಮಿ ಮಳೆಯೇ ಇಲ್ಲ. ಬಯಲುಸೀಮೆ ಸಮಗ್ರ ನೀರಾವರಿ ಪ್ರದೇಶವನ್ನಾಗಿಸುವ ಮಹತ್ವಕಾಂಕ್ಷಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಾಗಿದೆ ಎಂದು ಕೇಂದ್ರ ಸರ್ಕಾದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡರಾದ ಕೃಷ್ಣಪ್ಪ ಗೋಪಾಲಪ್ಪ ಜಯಣ್ಣ, ಮಂಜುನಾಥ, ಮಲಕಿಸಾಬ್, ಗಾದ್ರಿಪಾಲಯ್ಯ ಯರಓಬಳಯ್ಯ, ಎಸ್.ತಿಪ್ಪೇಶ್ ಮಹಾಂತೇಶ್, ಗಂಗಾಧರ, ರಾಘವೇಂದ್ರ ಗ್ರಾಮಸ್ಥರು ಇದ್ದರು.

Advertisement
Tags :
bengaluruchallakerechitradurgadonkeysprayerprocessionRainSpecialsuddionesuddione newsಕತ್ತೆಗಳುಚಳ್ಳಕೆರೆಚಿತ್ರದುರ್ಗಪ್ರಾರ್ಥನೆಬೆಂಗಳೂರುಮಳೆಮೆರವಣಿಗೆವಿಶೇಷಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article