ಕೈ ವಶವಾದ ಚಳ್ಳಕೆರೆ ನಗರಸಭೆ : ಅಧ್ಯಕ್ಷರಾಗಿ ಜೈ ತುಂಬಿ ಉಪಾಧ್ಯಕ್ಷರಾಗಿ ಓ ಸುಜಾತ ಆಯ್ಕೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 29 : ತಾಲೂಕಿನ ನಗರ ಸಭೆಗೆ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದು ನಿರೀಕ್ಷೆಯಂತೆಯೇ ಆಡಳಿತರೂಢ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ.
ರಾಜ್ಯ ಸರ್ಕಾರ ಹೊರಡಿಸಿದ್ದ ಮೀಸಲಾತಿ ಗೊಂದಲದಿಂದಾಗಿ ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ ಉಪಾಧ್ಯಕ್ಷರು ಅಧ್ಯಕ್ಷರಾಗಿ ಅಧಿಕಾರ ನಡೆಸುತ್ತಾರೆ ಎಂಬ ಸಾರ್ವಜನಿಕರ ಹಾಗೂ ನಗರದ ರಾಜಕೀಯ ಪಂಡಿತರ ಲೆಕ್ಕಾಚಾರಗಳು ತಲೆಕೆಳಗಾಗಿದ್ದು ನಗರದ 31ನೇ ವಾರ್ಡ್ ಸೂಜಿ ಮಲ್ಲೇಶ್ವರ ನಗರದ ನಗರಸಭೆ ಸದಸ್ಯೆ ಜೈ ತುಂಬಿ ಮಾಲಿಕ್ ಸಾಬ್ ಅಧ್ಯಕ್ಷರಾಗಿ ಆಯ್ಕೆಯಾದರು ಉಪಾಧ್ಯಕ್ಷರಾಗಿ ಎಂಟನೇ ವಾರ್ಡಿನ ರಹೀಮ್ ನಗರದ ನಗರಸಭೆ ಸದಸ್ಯ ಓ ಸುಜಾತ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ನಗರದ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಹೊಂದಿದ್ದರು ಸಹ ರಾಜ್ಯ ಸರ್ಕಾರ ಬಿಸಿಎಂ ( ಬಿ) ಸ್ಥಾನವನ್ನು ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಲ್ಪಿಸಿತ್ತು ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬಿಸಿಎಂ(ಬಿ)ಗೆ ಸೇರಿದ ಸಾವಿತ್ರಮ್ಮ ನಗರಸಭೆ ಅಧ್ಯಕ್ಷ ಪಟ್ಟ ಅಲಂಕರಿಸುವರು ಎಂಬ ನಿರೀಕ್ಷೆ ರಾಜಕೀಯ ವಲಯದಲ್ಲಿ ಬಹುವಾಗಿ ಚರ್ಚೆಯಲ್ಲಿತ್ತು ಸಾವಿತ್ರಮ್ಮನವರ ಆದಾಯ ಮಿತಿ ಹೆಚ್ಚಾಗಿದ್ದು ಅಲ್ಲದೆ ಸಾಮಾನ್ಯ ಮಹಿಳಾ ಕೂಟದ ಅಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರಿಂದ ಬಿಸಿಎಂ ಬಿ ಪ್ರಮಾಣಪತ್ರ ನೀಡಬಾರದು ಎಂಬ ಪ್ರತಿಪಕ್ಷಗಳು ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ನಗರಸಭೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದಲ್ಲಿ ಯಾರ ಪಾಲಾಗುತ್ತದೆ ಎಂಬ ಕುತೂಹಲಕ್ಕೆ ಸರ್ಕಾರದ ನಿಯಮಾವಳಿ ಪ್ರಕಾರ ಬಿಸಿಎಂ ( ಎ)ಗೆ ಅಧ್ಯಕ್ಷ ಸ್ಥಾನ ನೀಡಬಹುದು ಎಂಬ ನಿಯಮಾವಳಿ ಪ್ರಕಾರ ಜೈತುಂಬಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜೈ ತುಂಬಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಪರವಾಗಿ ಒಂದನೇ ವಾರ್ಡ್ ನ ಸಾಕಮ್ಮ ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೈತುಂಬಿ ಅವರಿಗೆ 18 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸಾಕಮ್ಮನವರಿಗೆ 11 ಮತಗಳ ಬೆಂಬಲ ದೊರೆಯಿತು. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಜೈ ತುಂಬಿ ನಿರಾಯಸಾಯವಾಗಿ ಜಯಗಳಿಸಿ ಗೆಲುವಿನ ನನಗೆ ಬೀರಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ:
ನಗರಸಭೆ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನ ಎಸ್ ಟಿ ಮಹಿಳೆಗೆ ಮೀಸಲಾಗಿತ್ತು ಕಾಂಗ್ರೆಸ್ ಪಕ್ಷದಿಂದ ಎಂಟನೇ ವಾರ್ಡ್ನ ಸದಸ್ಯೆ ಓ ಸುಜಾತ ನಾಮಪತ್ರ ಸಲ್ಲಿಸಿದ್ದರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಓ ಸುಜಾತಾ ರವರು ಅವಿರೋಧವಾಗಿ ಆಯ್ಕೆಯಾದರು ಇದರೊಂದಿಗೆ ಕಾಂಗ್ರೆಸ್ ಪಕ್ಷ ನಗರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳನ್ನು ಪಡೆದು ಮತ್ತೊಮ್ಮೆ ನಗರಸಭೆ ಆಡಳಿತವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಚುನಾವಣಾ ಅಧಿಕಾರಿಯಾಗಿ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಉಪ ವಿಭಾಗಾಧಿಕಾರಿ ಎಂ ಕಾರ್ತಿಕ್ ಕರ್ತವ್ಯ ನಿರ್ವಹಿಸಿದರು. ತಹಶೀಲ್ದಾರ್ ರೆಹಾನ್ ಪಾಷಾ ಚುನಾವಣೆಯ ಉಸ್ತುವಾರಿಯನ್ನು ನಿರ್ವಹಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಡಿಸಿ ಸಂಭ್ರಮ ಆಚರಿಸಿದರು.
ಚಳ್ಳಕೆರೆ ನಗರಸಭೆಗೆ ಬಿಸಿಎಂ (ಬಿ)ಗೆ ಅಧ್ಯಕ್ಷ ಸ್ಥಾನವನ್ನು ಮೀಸಲಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಆದಾಯ ಮಿತಿ ಹಾಗೂ ರಾಜಕೀಯ ಕಾರಣಗಳಿಗಾಗಿ ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಬಿ ಸಿ ಎಂ (ಎ)ಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಅದರಂತೆ ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಟಿ ರಘುಮೂರ್ತಿ ಹೇಳಿದರು.
ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ವ ಸದಸ್ಯರ ಬೆಂಬಲ ಪಡೆದು ಸಾರ್ವಜನಿಕರ ಸಮಸ್ಯೆಗಳನ್ನು ತೊರೆತಗತಿಯಲ್ಲಿ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಜೈ ತುಂಬಿ ಹೇಳಿದರು.
ಶಾಸಕರ ಅಭಿವೃದ್ಧಿ ಕಾರ್ಯಗಳು ನಗರ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಕಾರಣವಾಗಿದೆ ನಗರಸಭೆಯ ಆಡಳಿತ ಯಂತ್ರಕ್ಕೆ ವೇಗ ನೀಡಿ ಪ್ರತಿ ವಾರ್ಡ್ ನ ಸಮಸ್ಯೆಗಳನ್ನು ಅರಿತು ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ನೂತನವಾಗಿ ಆಯ್ಕೆಯಾದ ನಗರಸಭೆ ಉಪಾಧ್ಯಕ್ಷೆ ಓ ಸುಜಾತ
ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ನಾಗರಾಜ್, ನಗರಸಭೆ ಸದಸ್ಯರಾದ ವೈ.ಪ್ರಕಾಶ್, ಆರ್.ರುದ್ರನಾಯಕ, ಟಿ.ಮಲ್ಲಿಕಾರ್ಜುನ, ಸಿ.ಕವಿತಾ ಬೋರಯ್ಯ , ಸುಮಾ ಭರಮಯ್ಯ, ಸಿ.ಬಿ.ಜಯಲಕ್ಷ್ಮಿ, ಸುಮಕ್ಕ ಆಂಜನಪ್ಪ, ರಾಘವೇಂದ್ರ, ಕವಿತಾ ಟಿ.ಎಂ. ವೀರೇಶ್, ವಿರುಪಾಕ್ಷ, ಆರ್.ಮಂಜುಳಾ ಪ್ರಸನ್ನಕುಮಾರ್, ಟಿ. ಚಳ್ಳಕೆರಪ್ಪ , ಬಿ.ಟಿ.ರಮೇಶ್ ಗೌಡ, ಕೆ.ವೀರಭದ್ರಯ್ಯ, ಹೊಯ್ಸಳ ಗೋವಿಂದರಾಜು, ಪ್ರಶಾಂತ್, ನಾಮ ನಿರ್ದೇಶನ ಸದಸ್ಯರಾದ ಬಡಗಿ ಪಾಪಣ್ಣ, ವೀರಭದ್ರ, ನೇತಾಜಿ ಪ್ರಸನ್ನಕುಮಾರ್, ಅನ್ವರ್ ಮಾಸ್ಟರ್, ನಟರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಶಶಿಧರ,ಹಿರಿಯ ಮುಖಂಡರಾದ ಪ್ರಭುದೇವ್, ಪಿ.ತಿಪ್ಪೇಸ್ವಾಮಿ, ಅತೀಕ್ ಕುರ್ ರೆಹಮಾನ್, ಮುಜೀಬ್, ಸಲೀಂ, ಅನಾಸ್, ಸಿ.ಟಿ.ಶ್ರೀನಿವಾಸ್, ಕುಮಾರಸ್ವಾಮಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.