ಚಳ್ಳಕೆರೆ | ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ...!
01:00 PM Sep 09, 2024 IST | suddionenews
ವರದಿ ಮತ್ತು ಫೋಟೋ ಕೃಪೆ, ಸುರೇಶ್ ಬೆಳಗೆರೆ, ಚಳ್ಳಕೆರೆ, ಮೊ : 97398 75729
Advertisement
ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 09 : ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ .ಆದರೆ ಗಂಡ ಹೆಂಡರಿಬ್ಬರೂ ಗಲಾಟೆ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಗಂಡ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ತಾಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮರಾಠಿ ಸಮುದಾಯಕ್ಕೆ ಸೇರಿದ ಹರಿಶ್ಚಂದ್ರ (60) ಮತ್ತು ಯಶೋದಮ್ಮ ದಂಪತಿಗಳು ಪರಸ್ಪರ ಜಗಳ ಮಾಡಿಕೊಂಡು ಒಬ್ಬರಿಗೊಬ್ಬರು ಕೋಲಿನಿಂದ ಬಡೆದಾಡಿಕೊಂಡಿದ್ದಾರೆ. ಈ ವೇಳೆ ಹರಿಶ್ಚಂದ್ರನಿಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ. ಯಶೋದಮ್ಮನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ತುಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿ. ಬಿ. ರಾಜಣ್ಣ ಹಾಗೂ ತಳಕು ಪಿಎಸ್ ಐ ಲೋಕೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.