ಚಳ್ಳಕೆರೆ | ಬೆಳಗೆರೆ ಬಿ. ಸೀತಾರಾಮ ಶಾಸ್ತ್ರಿ ಪ್ರೌಢಶಾಲೆಗೆ SSLC ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ
ಸುದ್ದಿಒನ್, ಚಳ್ಳಕೆರೆ, ಮೇ.10 : 2024 ನೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟವಾಗಿದ್ದು, ತಾಲ್ಲೂಕಿನ ಬೆಳಗೆರೆ ಬಿ. ಸೀತಾರಾಮ ಶಾಸ್ತ್ರಿ ಪ್ರೌಢ ಶಾಲೆಗೆ ಶೇಕಡ 78.4.0 ರಷ್ಟು ಫಲಿತಾಂಶ ಲಭಿಸಿದೆ.
ಈ ಶಾಲೆಯಲ್ಲಿ ಒಟ್ಟು 88 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 69 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ.
ಅತ್ಯುತ್ತಮ - 4
ಪ್ರಥಮ ದರ್ಜೆ- 29
ದ್ವಿತೀಯ ದರ್ಜೆ -22
ತೃತೀಯ ದರ್ಜೆ-14 ಫಲಿತಾಂಶ ಪಡೆದಿದ್ದಾರೆ.
ಜಗದೀಶ ಎಂಬ ವಿದ್ಯಾರ್ಥಿ 625 ಕ್ಕೆ 605 ಅಂಕ ಪಡೆದು ರಾಜ್ಯಕ್ಕೆ 21ನೇ ಸ್ಥಾನ ಪಡೆದಿದ್ದು ಶಾಲೆಗ ಪ್ರಥಮ ಎನ್ನಿಸಿದ್ದಾನೆ.
ಉಳಿದಂತೆ ಅಮಿತ್ ಕುಮಾರ್ (580)ಆರ್, ಲಾವಣ್ಯ(549 ), ನಂದನ್ ಕುಮಾರ್ ಆರ್(540), ಅನಿಲ್. ಎನ್(524)ರಂಗಲಕ್ಷ್ಮಿ .ಎನ್(509)ರಕ್ಷಿತ ಎನ್.(508)ಅಂಬರೀಷ(507)ನಿಜಗುಣ(503) ಅಂಕಗಳನ್ನ ಪಡೆದು ಪೋಷಕರಿಗೂ ಹಾಗೂ ಪ್ರೌಢಶಾಲೆಗೂ ಕೀರ್ತಿ ತಂದಿದ್ದಾರೆ.
ಉತ್ತಮ ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯಸ್ಥರು ಸದಸ್ಯರು ಹಾಗೂ ಮುಖ್ಯ ಶಿಕ್ಷಕ ವಿ ಎಚ್ .ವೀರಣ್ಣ ಶಿಕ್ಷಕರು ಶಾಲಾ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.