Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ವೇದ ಪಿಯು ಕಾಲೇಜಿಗೆ ಶೇ. ನೂರರಷ್ಟು ಫಲಿತಾಂಶ

06:36 PM Apr 10, 2024 IST | suddionenews
Advertisement

ಸುದ್ದಿಒನ್, ಚಳ್ಳಕೆರೆ, ಏಪ್ರಿಲ್, 10 :  ತಾಲೂಕಿನ ಸಾಣಿಕೆರೆಯ ವೇದ ಪಿಯು ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶದೊಂದಿಗೆ ಇಡೀ ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ದಾಪುಗಾಲು ಇಡುತ್ತಾ ಗುಣಮಟ್ಟದ ಶಿಕ್ಷಣಕ್ಕೆ ಒಮ್ಮೆ ತಿರುಗಿ ನೋಡುವಂತೆ ಸಾಧನೆ ಮಾಡಿದೆ.

Advertisement

2023-24 ನೇ ಸಾಲಿನ ಪರೀಕ್ಷೆಗೆ ಒಟ್ಟು 97 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 97 ವಿದ್ಯಾರ್ಥಿಗಳು ಸಹ ಉತ್ತೀರ್ಣರಾಗಿರುವ ಮೂಲಕ ಶೇ .100%ಫಲಿತಾಂಶ ಕಾಲೇಜಿಗೆ ದೊರೆತರೆ, ಇದರಲ್ಲಿ 10 ವಿದ್ಯಾರ್ಥಿಗಳು ಕೆಲವು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸುವುದರೊಂದಿಗೆ ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ. ಹಾಗೂ ಒಟ್ಟು 52 ವಿದ್ಯಾರ್ಥಿಗಳು Distinction ನಲ್ಲಿ ಉತ್ತೀರ್ಣರಾದರೆ, ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ.

ಉತ್ತಮ ಸಾಧನೆಯನ್ನು ತೋರಿದ ವಿದ್ಯಾರ್ಥಿಗಳಿಗೆ ಹಾಗೂ ಶ್ರಮಿಸಿದಂತಹ ಉಪನ್ಯಾಸಕರು, ಪ್ರಾಂಶುಪಾಲರಿಗೆ ಸಂಸ್ಥೆಯ ಅಧ್ಯಕ್ಷರಾದ ಡಿ ಟಿ ರವೀಂದ್ರರವರು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ

Advertisement

Advertisement
Tags :
bengaluruchallakerechitradurgahundred percentresultsuddionesuddione newsVeda PU Collegeಚಳ್ಳಕೆರೆಚಿತ್ರದುರ್ಗದ್ವಿತೀಯ ಪಿ.ಯು.ಸಿ ಫಲಿತಾಂಶನೂರರಷ್ಟು ಫಲಿತಾಂಶಬೆಂಗಳೂರುವೇದ ಪಿಯು ಕಾಲೇಜುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article