Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ರೈತ ಆತ್ಮಹತ್ಯೆ

08:42 PM May 12, 2024 IST | suddionenews
Advertisement

ಸುದ್ದಿಒನ್, ಚಳ್ಳಕೆರೆ, ಮೇ. 12 : ತಾಲೂಕಿನ ಬಾಲೇನಹಳ್ಳಿ ಗ್ರಾಮದ ಮೋಹನ್ ಕುಮಾರ್(36) ಎಂಬ ರೈತ ಬೆಳಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಭಾನುವಾರ ಬೆಳಗಿನ ಜಾವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

Advertisement

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 90,000 ಸಾಲ ಪಡೆದಿದ್ದು ಜಮೀನಿನಲ್ಲಿ ತೊಗರಿ ಮತ್ತು ಕಡಲೆ ಬೆಳೆ ಹಾಕಿದ್ದರು ಆದರೆ ಮಳೆ ಬಾರದ ಹಿನ್ನೆಲೆಯಲ್ಲಿ ಬೆಳೆ ಕೈಕೊಟ್ಟಿತ್ತು ಕೈ ಸಾಲವನ್ನು ಸಹ ಮಾಡಿದ್ದರಿಂದ ಗ್ರಾಮದಲ್ಲಿ ಹೋಟೆಲ್ ನಡೆಸಿದರೂ ಸಹ ಲಾಭದಾಯಕವಾಗಿರಲಿಲ್ಲ.  ಸಾಲ ತೀರಿಸಲಾಗದೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Advertisement
Tags :
bengaluruchallakerechitradurgafarmersuddionesuddione newssuicideಆತ್ಮಹತ್ಯೆಚಳ್ಳಕೆರೆಚಿತ್ರದುರ್ಗಬೆಂಗಳೂರುರೈತಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article