Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ಭಾರಿ ಮಳೆಗೆ ಮನೆಗಗಳಿಗೆ ನುಗ್ಗಿದ ನೀರು ಜನಜೀವನ ಅಸ್ತವ್ಯಸ್ತ.

04:55 PM Aug 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

 

Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 21 : ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಗುಡುಗು - ಮಿಂಚು ಸಹಿತ ಧಾರಕಾರವಾಗಿ ಮಳೆ ಸುರಿಯುತ್ತಿದೆ. ಭರ್ಜರಿ ಮಳೆಯಿಂದವ ಹತ್ತಾರು ಅವಾಂತರ ಸೃಷ್ಠಿಸಿದೆ.

ಚಳ್ಳಕೆರೆ ನಗರದಲ್ಲಿ ರಹಿಂ ನಗರದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಗಳು ಜಲಾವೃತವಾಗಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ.

ಬಾರಿ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು, ಮನೆಯಲ್ಲಿದ್ದ ವಸ್ತುಗಳು ನೀರು ಪಾಲಾಗಿವೆ.
ರಹೀಂ ನಗರದಲ್ಲಿ 50 ಕ್ಕೂ ಹೆಚ್ಚು ಮನೆಗಳು ಮಳೆಯ ನೀರಿನಿಂದ ಜಲಾವೃತವಾಗಿದೆ.
ರಾಜಕಾಲುವ ತುಂಬಿ ಹರಿದು ಅಕ್ಕ ಪಕ್ಕದ ಮನೆಗಳಿಗೆ ನೀರು ನುಗಿದೆ. ಜೆಸಿಬಿ ಯಂತ್ರಗಳ ಮೂಲಕ ಚರಂಡಿಗೆ ಮಳೆ ನೀರು ಹರಿಸಲಾಗುತ್ತದೆ.

ನಗರದ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿದೆ.
ಒಟ್ಟಾರೆ ಮಳೆಯಿಂದ ಕೆಲವು ಕಡೆ ಸಮಸ್ಯೆಗಳು ಉದ್ಭವಿಸಿವೆ. ನಗರದಲ್ಲಿ ಸುರಿದ ಭಾರಿ ಮಳೆಯಿಂದ ರಹೀಮ್ ನಗರ ಅಕ್ಷರಶಃ ನೀರಿನಲ್ಲಿ ಮುಳುಗಿದಂತ್ತಾಗಿದೆ.

.

Advertisement
Tags :
bengaluruchallakerechitradurgaDue to the heavy rainsuddionesuddione newsಚಳ್ಳಕೆರೆಚಿತ್ರದುರ್ಗಜನಜೀವನ ಅಸ್ತವ್ಯಸ್ತಬೆಂಗಳೂರುಭಾರಿ ಮಳೆಮನೆಗಗಳಿಗೆ ನುಗ್ಗಿದ ನೀರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article