Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | 80 ಎಕರೆ ಈರುಳ್ಳಿ ಬೆಳೆಗೆ ಕೊಳೆ ರೋಗ : ಕೃಷಿ ಅಧಿಕಾರಿಗಳ ಭೇಟಿ, ಪರಿಶೀಲನೆ

07:48 PM Aug 23, 2024 IST | suddionenews
Advertisement

ಸುದ್ದಿಒನ್,  ಚಿತ್ರದುರ್ಗ, ಆಗಸ್ಟ್ 23 : ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿದ ಮಳೆ ರೈತರಿಗೆ ಸಂತಸದ ಜೊತೆಗೆ ಸಂಕಷ್ಟವನ್ನೂ ತಂದಿದೆ. ಕೆಲವು ಬೆಳೆಗಳಿಗೆ ಮಳೆ ಅನುಕೂಲವಾಗಿದ್ದರೆ ಇನ್ನೂ ಕೆಲವು ಬೆಳಗಳಿಗೆ ರೋಗ, ಕೀಟದ ಬಾಧೆ ಕಾಡುತ್ತಿದೆ. ಕೆಲವು ಬೆಳೆಗಳು ಕೊಳೆತು ಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಚಳ್ಳಕೆರೆ ತಾಲೂಕಿನಾದ್ಯಂತ 11,299 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದ್ದು ಮಳೆಗೆ  80 ಎಕರೆ ಪ್ರದೇಶದಲ್ಲಿ  ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ.

ತಾಲ್ಲೂಕಿನ ರಾಮಜೋಗಿಹಳ್ಳಿ, ಬಾಲೆನಹಳ್ಳಿ, ಹೆಗ್ಗೆರೆ, ಹೊಟ್ಟಜ್ಜನ ಕಪಿಲೆ,  ಸಾಣಿಕೆರೆ,  ಹಿರೇಮಧುರೆ,  ಚಿಗುತನಹಳ್ಳಿ ಕಪ್ಪುಭೂಮಿ ಇರುವಂತಹ ಪ್ರದೇಶದಲ್ಲಿ ಮಳೆ ನೀರು ನಿಂತು ಈರುಳ್ಳಿ ಬೆಳಗ್ಗೆ ಕೊಳೆರೋಗ ಆವರಿಸಿದೆ.

Advertisement

ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ  ವಿರುಪಾಕ್ಷಪ್ಪನವರು ರೋಗಪೀಡಿತ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರಿಗೆ ಉಳಿದಂಥ ಬೆಳೆಗಳನ್ನು ಉಳಿಸಿಕೊಳ್ಳಲು ಹಲವು ಸಲಹೆಗಳನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಈರುಳ್ಳಿ ಬೆಳೆಯು ಒಂದು ಸೂಕ್ಷ್ಮ ಬೆಳೆಯಾಗಿದ್ದು ಇದಕ್ಕೆ ಹೆಚ್ಚು ಮಳೆ ಬಂದರೂ ಸಹ ಹಲವು ರೋಗದ ಬಾಧೆ ಕಾಡುತ್ತದೆ. ಈಗಾಗಲೇ ಮಳೆಯಿಂದ ಬೆಳೆ ಇರುವ ಜಮೀನುಗಳಿಗೆ ನೀರು ನುಗ್ಗಿದ್ದು ಕೊಳೆರೋಗ ಕಾಣಿಸಿಕೊಂಡಿದೆ. ಕೆಲವು ಜಮೀನುಗಳಲ್ಲಿ ಈರುಳ್ಳಿ ಬೆಳೆಗೆ ಸುಳಿರೋಗ, ನೇರಳೆ, ಮಚ್ಚೆ ರೋಗ ಇತರೆ ರೋಗಗಳು ಕಾಣಿಸಿಕೊಂಡಿದ್ದು ರೋಗದ ಹತೋಟಿಗೆ ರೈತರಿಗೆ ಹಲವು ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಓ. ಟಿ. ತಿಪ್ಪೇಸ್ವಾಮಿ, ಚಿದಾನಂದಪ್ಪ, ನಾಗಣ್ಣ, ತಿಮ್ಮೇಗೌಡ, ಹಾಗೂ ತೋಟಗಾರಿಕೆ ಅಧಿಕಾರಿ ಪ್ರವೀಣ್ ಇದ್ದರು.

Advertisement
Tags :
80 acres80 ಎಕರೆagricultural officialsbengaluruBlight diseasechallakerechitradurgaOnion Cropsuddionesuddione newsಈರುಳ್ಳಿ ಬೆಳೆಗೆ ಕೊಳೆ ರೋಗಕೃಷಿ ಅಧಿಕಾರಿಚಳ್ಳಕೆರೆಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article