Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ಆಟೋ - ಬಸ್ ಮುಖಾಮುಖಿ ಡಿಕ್ಕಿ : ಒರ್ವ ಮಹಿಳೆ ಸಾವು..!

05:27 PM Aug 28, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

Advertisement

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 28 :ಖಾಸಗಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತದಲ್ಲಿ ಓರ್ವ ಮಹಿಳೆ ಸಾವನಪ್ಪಿದ್ದು, ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಮಾಮಪುರ ಸಮೀಪ ನಡೆದಿದೆ.

ವಿಠಲ ನಗರದಿಂದ ಇಮಾಮಪುರ ಕಡೆಗೆ ಹೊರಟಿದ್ದ ಆಟೋಗೆ ಖಾಸಗಿ ಬಸ್ಸು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಈ ವಿಠಲ ನಗರದ ವರ್ಷದ ಗಂಗಮ್ಮ ನವರಿಗೆ ತಲೆ ಹಾಗೂ ಇತರೆ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಟೋ ಚಾಲಕ ವಿಠಲನಗರದ ಈಶ್ವರಪ್ಪನಿಗೆ ತಲೆ ಹಾಗೂ ಇತರ ಭಾಗಗಳಿಗೆ ತೀವ್ರವಾದ ಗಾಯಗಳಾಗಿದ್ದು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿ ವೈ ಎಸ್. ಪಿ. ಟಿ. ಬಿ.ರಾಜಣ್ಣ ಹಾಗೂ ಪಿ. ಎಸ್. ಧರಪ್ಪ ಬಾಳಪ್ಪ ದೊಡ್ಡ ಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement
Tags :
Auto-Busbengaluruchallakerechitradurgahead-on collisionOne woman diedsuddionesuddione newsಆಟೋ - ಬಸ್ಒರ್ವ ಮಹಿಳೆ ಸಾವುಚಳ್ಳಕೆರೆಚಿತ್ರದುರ್ಗಬೆಂಗಳೂರುಮುಖಾಮುಖಿ ಡಿಕ್ಕಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article