ಚಿತ್ರದುರ್ಗದಲ್ಲಿ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ ಆಚರಣೆ
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.16 : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಲೆ ಏರಿಕೆಯ ನಡುವೆಯೂ ಜನರು ಅದ್ದೂರಿಯಾಗಿ ವರ ಮಹಾಲಕ್ಷ್ಮಿ ಪೂಜೆಯಲ್ಲಿ ತೊಡಗಿಕೊಂಡಿರುವ ದೃಶ್ಯಗಳು ಕಂಡುಬಂದವು.
ವಿದ್ಯಾ ನಗರದ ಶ್ರೀಮತಿ ಸುನೀತಾ ಮಲ್ಲಿಕಾರ್ಜುನ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ
ನಗರದ ಜೆಸಿಆರ್ ಬಡಾವಣೆಯ ಶ್ರೀಮತಿ ನೇತ್ರಾ ಲೋಕೇಶ್ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ
ನಗರದ ಜೆಸಿಆರ್ ಬಡಾವಣೆಯ ಶ್ರೀಮತಿ ಹೇಮಾ ರಂಗನಾಥ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ
ಶ್ರಾವಣ ಮಾಸದಲ್ಲಿ ಬರುವ ಸಾಲು ಸಾಲು ಹಬ್ಬಗಳಲ್ಲಿ ಪ್ರಮುಖ ಹಬ್ಬ ಈ ವರಮಹಾಲಕ್ಷ್ಮಿ. ನಾಗರ ಪಂಚಮಿ ಹಬ್ಬದ ಬಳಿಕ ಬರುವ ಈ ವರಮಹಾಲಕ್ಷ್ಮಿ ಹಬ್ಬ, ವಿಶೇಷವಾಗಿ ಮಹಿಳೆಯರಿಗೆ ತುಂಬಾ ಅಚ್ಚುಮೆಚ್ಚು. ಹಬ್ಬಕ್ಕಾಗಿ ಕಳೆದ ಒಂದು ವಾರದಿಂದಲೇ ತಯಾರಿಯಲ್ಲಿ ತೊಡಗಿರುವ ಗೃಹಿಣಿಯರು ಮನೆಯಲ್ಲಿ ಮಹಾಲಕ್ಷ್ಮಿಯ ಮೂರ್ತಿ ಪ್ರತಿಷ್ಠಾಪಿಸಿ, ರೇಷ್ಮೆ ಸೀರೆ ತೊಡಿಸಿ, ಮಹಾಲಕ್ಷ್ಮಿಗೆ ಇಷ್ಟವಾದ ಕಮಲ, ತಾವರೆ, ಗುಲಾಬಿ, ಸೇವಂತಿ, ಮಲ್ಲಿಗೆ ಹೂವು ಇತ್ಯಾದಿ ಹೂಗಳಿಂದ ಮಹಾಲಕ್ಷ್ಮಿ ಯನ್ನು ಅಂದವಾಗಿ ಅಲಂಕರಿಸಿ ವಿಧವಿಧವಾದ ಖಾದ್ಯಗಳನ್ನು ತಯಾರಿಸಿ ದೇವಿಗೆ ಅರ್ಪಿಸಿ, ದಿನವಿಡಿ ವ್ರತಾಧಾರಿಗಳಾಗಿ, ಮುತ್ತೈದೆಯರೆಲ್ಲ ಸೇರಿಕೊಂಡು ಅತ್ಯಂತ ಶ್ರದ್ಧಾಭಕ್ತಿಯಿಂದ ವರವ ಕೊಡೇ ಮಹಾಲಕ್ಷ್ಮಿ ಎಂದು ದೇವಿಯಲ್ಲಿ ಪಾರ್ಥನೆಯನ್ನು ಸಲ್ಲಿಸಿದರು.