For the best experience, open
https://m.suddione.com
on your mobile browser.
Advertisement

ಮುರುಘಾಮಠದಲ್ಲಿ ಬಸವೇಶ್ವರರ ಜಯಂತ್ಯೋತ್ಸವ ಆಚರಣೆ | ಪ್ರತಿಯೊಬ್ಬರ ಮನೆಯಲ್ಲಿ ಬಸವಧರ್ಮ ಗ್ರಂಥ ಇರಬೇಕು : ಶ್ರೀ ಬಸವನವಲಿಂಗ ಸ್ವಾಮೀಜಿ

02:47 PM May 10, 2024 IST | suddionenews
ಮುರುಘಾಮಠದಲ್ಲಿ ಬಸವೇಶ್ವರರ ಜಯಂತ್ಯೋತ್ಸವ ಆಚರಣೆ   ಪ್ರತಿಯೊಬ್ಬರ ಮನೆಯಲ್ಲಿ ಬಸವಧರ್ಮ ಗ್ರಂಥ ಇರಬೇಕು   ಶ್ರೀ ಬಸವನವಲಿಂಗ ಸ್ವಾಮೀಜಿ
Advertisement

ಸುದ್ದಿಒನ್, ಚಿತ್ರದುರ್ಗ, ಮೇ. 10 : ಬಸವಾದಿ ಪ್ರಮಥರು ಜೀವನೋದ್ಧಾರಕ್ಕಾಗಿ ಕಾಯಕ, ಆತ್ಮೋದ್ಧಾರಕ್ಕಾಗಿ ಶಿವಯೋಗ, ಜೀವನ್ಮುಕ್ತಿಗಾಗಿ ದಾಸೋಹವನ್ನು ಮಾಡಿದರು ಎಂದು ಶಿವಮೊಗ್ಗ ಪ್ರಭುದೇವ ಜ್ಞಾನಕೇಂದ್ರದ ಶ್ರೀ ಬಸವನವಲಿಂಗ ಶರಣರು ನುಡಿದರು.

Advertisement
Advertisement

ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಬಸವಣ್ಣನವರ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಧರ್ಮ ಅಂತರಂಗ ಬಹಿರಂಗ ಒಂದೇ ಆಗಿರುವ ಧರ್ಮ. ಇದು ಅನುಭವ ಧರ್ಮ. ವೇದಿಕೆಯ ಮೇಲೆ ಮಾತಾಡುವ ಧರ್ಮವಲ್ಲ, ಅದು ಮಾತನಾಡಿಸುವ ಧರ್ಮ. ಮಾನವನನ್ನು ಮಹದೇವನನ್ನಾಗಿ ಮಾಡಿದ ಧರ್ಮ ಇದು. ನಾವು ಮಾಡಿಕೊಂಡಿರುವ ದೇವರುಗಳಿಗೆ ಸ್ವತಂತ್ರ ಇಲ್ಲ. ಬೀಗ ಹಾಕಿದ್ದೇವೆ. ಆದರೆ ಸ್ವತಂತ್ರ ಧರ್ಮ ಬಸವಧರ್ಮ ಲಿಂಗವಂತ ಧರ್ಮ. ಈ ಧರ್ಮದ ಮೂಲನೆಲೆ ಜಯಂತಿ ಮಾಡುವುದಲ್ಲ, ರೋಮಾಂಚನವಾದದ್ದು ಈ ಧರ್ಮ. ವಚನ ಸಾಹಿತ್ಯವನ್ನು ಓದಿದವರಿಗೆ ಸಾಕ್ಷಾತ್ಕಾರವಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ಬಸವಧರ್ಮ ಗ್ರಂಥ ಇರಬೇಕೆಂದು ಹೇಳಿದರು.

Advertisement

ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಬಸವಣ್ಣನವರ ತತ್ತ್ವಗಳನ್ನು ಶ್ರೀಮಠವು ಅನೂಚಾನವಾಗಿ ಮುಂದುವರೆಸಿಕೊಂಡು ಬಂದಿದೆ. ಆ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆ. ಬಸವಣ್ಣನವರ ತತ್ತ್ವಗಳು ಮತ್ತು ಅವರ ಭಾವಚಿತ್ರಗಳು ದಲಿತರ ಮನೆಗೆ ತಲುಪಬೇಕು. ಅವರೂ ಸಹ ಬಸವ ಜಯಂತಿ ಆಚರಿಸುವಂತಾಗಬೇಕು. ನಾವು ಮಾಡಿರುವ ನೂತನ ಮರಿ ಜಯಬಸವ ದೇವರಿಗೆ ಶ್ರೀಮಠದ ಮತ್ತು ತಮ್ಮೆಲ್ಲರ ಸಹಕಾರ ಇರಲಿ ಎಂದರು.

Advertisement
Advertisement

ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಮಾತನಾಡಿ, ದಯವೇ ಧರ್ಮದ ಮೂಲ ಎಂದು ಹೇಳಿದವರು ಬಸವಣ್ಣ. ಶ್ರೀಮಠದಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಮೂರು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ ಎಂದು ಹೇಳಿದರು.

ಡಾ. ಬಸವಕುಮಾರ ಸ್ವಾಮಿಗಳು,  ಶ್ರೀ ಬಸವನಾಗಿದೇವ ಸ್ವಾಮಿಗಳು, ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ಚಂದ್ರಶೇಖರ್ ಎಸ್.ಎನ್., ಸುರೇಶ್ ಬಾಬು, ಕೆಇಬಿ ಷಣ್ಮುಖಪ್ಪ ವೇದಿಕೆಯಲ್ಲಿದ್ದರು. ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆ ಮತ್ತು ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜು ವಿದ್ಯಾರ್ಥಿಗಳು ವಚನ ನೃತ್ಯ ಮಾಡಿದರು. ಜಯಂತಿ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Advertisement
Tags :
Advertisement