For the best experience, open
https://m.suddione.com
on your mobile browser.
Advertisement

ನೀವೆಲ್ಲ ಹಿಂದುಳಿಯಲಿಕ್ಕೆ ಕಾರಣ ಜಾತಿ ವ್ಯವಸ್ಥೆ : ಸಿಎಂ ಸಿದ್ದರಾಮಯ್ಯ ಬೇಸರ

04:24 PM Feb 09, 2024 IST | suddionenews
ನೀವೆಲ್ಲ ಹಿಂದುಳಿಯಲಿಕ್ಕೆ ಕಾರಣ ಜಾತಿ ವ್ಯವಸ್ಥೆ   ಸಿಎಂ ಸಿದ್ದರಾಮಯ್ಯ ಬೇಸರ
Advertisement

ಚಿತ್ರದುರ್ಗ, ಫೆಬ್ರವರಿ 09: ಸಿಎಂ ಸಿದ್ದರಾಮಯ್ಯ ಅವರು ಇಂದು ಶ್ರೀಮದ್ ಜಗದ್ಗುರು ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯ ಸಿಂಹಾಸನ ಭಗೀರಥ ಪೀಠ, ಮಹಾಸಂಸ್ಥಾನ ಮಠದ ವತಿಯಿಂದ ಆಯೋಜಿಸಿರುವ ಜಗದ್ಗುರು ಶ್ರೀ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ ಪಟ್ಟಾಭಿಪೇಕದ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಭಗೀರಥ ಜಯಂತೋತ್ಸವ ಹಾಗೂ ಉಪ್ಪಾರರ ಬೃಹತ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಸ್ವಾಮೀಜಿಯವರು ಮಠದ ಜವಾಬ್ದಾರಿ ಹೊತ್ತುಕೊಂಡು 24 ವರ್ಷ ತುಂಬಿ 25 ವರ್ಷಕ್ಕೆ ಕಾಲಿಟ್ಟಿದ್ದಾರೆ.. ಅವರು 100 ವಸಂತಗಳನ್ನು ಪೂರೈಸಲಿ ಎಂದು ಅಶಿಸುತ್ತೇನೆ ಎಂದರು.

Advertisement

ಇವತ್ತೇನು ಭಗೀರಥ ಜಯಂತಿ, ಭಗೀರಥ ನಿಗಮ ಮಂಡಳಿ ಆಗಿದೆ ಎಂದರೆ ಅದಕ್ಕೆ ಕಾರಣ ಸ್ವಾಮೀಜಿಗಳು. ಅವರ ಆಶಯದಂತೆ ಭಗೀರಥ ಜಯಂತಿಯನ್ನು ಸರ್ಕಾರ ಆಚರಣೆ ಮಾಡುತ್ತಿದೆ. ಹಾಗೆಯೇ ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಿದೆ. ಉಪ್ಪಾರ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯ.. ಇವರ ಮುಖ್ಯ ಕಸುಬು ಉಪ್ಪು ತಯಾರಿಸುವುದು.. ಇದು ಆಧುನಿಕ ಕಾಲದಲ್ಲ. ಮಹಾತ್ಮ ಗಾಂಧಿಜೀಯವರ ಉಪ್ಪಿನ ಸತ್ಯಾಗ್ರಹದಲ್ಲಿ ಉಪ್ಪಾರರ ಕೊಡುಗೆ ಅಪಾರವಾಗಿತ್ತು. ಇವರು ಉಪ್ಪು ಮಾರಿಕೊಂಡು ಜೀವನ ನಡೆಸುತ್ತಿದ್ದರು. ಜಮೀನು ಸಹ ಇರಲಿಲ್ಲ. ಎಲ್ಲಾ ಶೂದ್ರ ಸಮುದಾಯವರು ಶಿಕ್ಷಣದಿಂದ ವಂಚಿತರಾಗಿದ್ದಾರೆ.

Advertisement

ನೀವೆಲ್ಲ ಹಿಂದುಳಿಯಲಿಕ್ಕೆ ಕಾರಣ ಜಾತಿ ವ್ಯವಸ್ಥೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಲ್ಲರಿಗೂ ಸಮ ಪ್ರಮಾಣದಲ್ಲಿ ಸಿಗಬೇಕು ಎಂದು ಹೇಳಿದೆ. ಅವು ಎಲ್ಲರಿಗೆ ಸಿಕ್ಕಾಗ ಮಾತ್ರ ಸಮಸಮಾಜ ನಿರ್ಮಾಣ ಆಗುತ್ತದೆ. ಅನೇಕ ಸಮಾಜ ಸುಧಾರಕರು ಸಮಸಮಾಜ ನಿರ್ಮಾಣ ಮಾಡಲು ಬುದ್ದನಿಂದ ಈಡಿದು ನಡೆಯುತ್ತಲೇ ಬಂದಿದೆ. ಜಾತಿ ವ್ಯವಸ್ಥೆ ಆಳವಾಗಿ ಬೇರು ಬಿಟ್ಟಿದೆ. ಜಾತಿ ವ್ಯವಸ್ಥೆ ಚಾಲನೆ ರಹಿತ ವ್ಯವಸ್ಥೆಯಾಗಿದೆ.. ಬದಲಾವಣೆಯಾಗಿರುವುದಿಲ್ಲ. ಜಾತಿ ವ್ಯವಸ್ಥೆ ಹೇಗೆ ಆಗಿದೆ ಎಂದರೆ ನೀರಿನ ಮೇಲಿನ ಕೊಳೆ ಇದ್ದ ಹಾಗೆ. ಸುಧಾಕರ್ ರವರೇ ನಿನಗೆ ಗೊತ್ತೆ. ನೀನು ಜಾತಿ ವ್ಯವಸ್ಥೆಯಲ್ಲಿ ಮೇಲಿರುವವನು. ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಿಲ್ಲ.. ಮೌಡ್ಯತೆ ಹೋಗಿಲ್ಲ. ಬಸವತೀತರು ಕಂದಚಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ನೀವು ನಿಮ್ಮ ಕರ್ಮಕ್ಕೆ ಬದ್ದರಾಗಿದ್ದೀರಿ.. ಯಾರಿಗೆ ಅವಕಾಶ ಸಿಕ್ಕಿದೆ ಅವರು ಮುಂದೆ ಬಂದಿದ್ದಾರೆ.. ಯಾರಿಗೆ ಅವಕಾಶ ಸಿಕ್ಕಿಲ್ಲ..ಅವರು ಅಲ್ಲೆ ಇದ್ದಾರೆ.. ನನಗೆ ಅವಕಾಶ ಸಿಕ್ಕಿತ್ತು ನಾನು ಮುಖ್ಯಮಂತ್ರಿಯಾಗಿದ್ದೇನೆ.. ನನ್ನ ಅಣ್ಣಂದಿರು ವ್ಯವಸಾಯ ಮಾಡುತ್ತಿದ್ದಾರೆ. ನೀವು ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಅವಿದ್ಯಾವಂತರನ್ನಾಗಿ ಮಾಡಬೇಡಿ.

ಸ್ವಾಮೀಜಿ ದೇವಸ್ಥಾನಕ್ಕೆ ಹೋದರೆ ಆ ದೇವಸ್ಥಾನ ತೊಳೆದರಂತೆ.. ಸಂವಿಧಾನ ಬಂದು 75 ವರ್ಷ ಆದ್ರು.. ಈ ಕಾಲದಲ್ಲೂ ಇದೇಲ್ಲ. ನೀವು ಅಲ್ಲಿಗೆ ಹೋಗಲೇ ಬೇಡಿ. ನೀವೇ ಒಂದು ದೇವಸ್ಥಾನ ಕಟ್ಟಿಕೊಳ್ಳಿ. ನೀವೇ ಪೂಜಾರಿ. ನಾರಾಯಣ ಗುರು ಹೇಳತ್ತಾರೆ ಒಂದೇ ಮತ, ಒಂದೇ ಜಾತಿ ಒಂದೇ ದೇವಸ್ಥಾನ ಎಂದು ಹೇಳಿದ್ದಾರೆ. ಮನುಷ್ಯ ಮನುಷ್ಯನನ್ನು ಪ್ರೀತಿಸಿ.. ದ್ವೇಷಿಸಬೇಡಿ.. ಅಯ್ಯ ಎಂದರೆ ಸ್ವರ್ಗ. ಎಲವೋ ಎಂದರೆ ನರಕ. ಕುರುಬರಲ್ಲಿ ಮಠ ಇರಲಿಲ್ಲ. 1992 ರಲ್ಲಿ ಮಠ ನಾನೇ ಮಾಡಿದ್ದೆ. ಹಾಗೆ ನೀವೇ ಮಠ ಮಾಡಿ. ನಾನು ಲಾಯರ್ ಆಗದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಕೆಲವು ಪಟ್ಟಬದ್ದ ಹಿತಾಸಕ್ತ ಇರುತ್ತ‍ಾರೆ. ಅವರಿಂದ ಹುಷಾರಾಗಿರಿ ಎಂದಿದ್ದಾರೆ.

Tags :
Advertisement