Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಿ.ಎನ್.ಚಂದ್ರಪ್ಪ ಸೋಲು ಅನಿರೀಕ್ಷಿತ : ಮಾಜಿ ಸಚಿವ ಎಚ್.ಆಂಜನೇಯ

06:43 PM Jun 04, 2024 IST | suddionenews
Advertisement

ಸುದ್ದಿಒನ್,  ಚಿತ್ರದುರ್ಗ,  ಜೂ.4 :ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ.ಆದರೆ, ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಸೋಲು ಅನಿರೀಕ್ಷಿತ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.

Advertisement

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಆಂಜನೇಯ,  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅನ್ಯ ಪಕ್ಷದವರೂ  ಮೆಚ್ಚುವಂತಹ  ಗುಣ ಸ್ವಭಾವ ಹೊಂದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಳ್ಳುವ ನಿರೀಕ್ಷೆ ಇರಲಿಲ್ಲ.

ಎಲ್ಲ ಮತ ಕ್ಷೇತ್ರದಲ್ಲಿ ಸಂಪೂರ್ಣ ಗೆಲ್ಲುವ ವಾತಾವರಣವಿತ್ತು. ಜಿಲ್ಲಾ ಸಚಿವರು ಸೇರಿದಂತೆ ಎಲ್ಲ ಶಾಸಕರು, ಮುಖಂಡರು, ಕಾರ್ಯಕರ್ತರು  ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದರು. ಆದರೂ ಪರಾಭವಗೊಂಡಿದ್ದೇವೆ. ಅನಿರೀಕ್ಷಿತ  ಸೋಲಿನಿಂದ ಮುಖಂಡರಿಗೆ, ಕಾರ್ಯಕರ್ತರಿಗೆ  ನೋವಾಗಿರುವುದು ಸಹಜ. ಯಾರೂ ಎದೆಗುಂದುವ  ಅವಶ್ಯಕತೆ ಇಲ್ಲ. ಸುಮಾರು 6 ಲಕ್ಷಕ್ಕೂ ಅಧಿಕ ಮತಗಳನ್ನು ಬಿ.ಎನ್.ಚಂದ್ರಪ್ಪನವರಿಗೆ ಮತಚಲಾವಣೆ ಆಗಿವೆ. ಇಷ್ಟೊಂದು ಮತನೀಡಿದ ಮತದಾರರೆಲ್ಲರಿಗೂ ಎಚ್.ಆಂಜನೇಯ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Advertisement

Advertisement
Tags :
bengaluruBN ChandrappachitradurgadefeatFormer Minister H. Anjaneyasuddionesuddione newsunexpectedಅನಿರೀಕ್ಷಿತಚಿತ್ರದುರ್ಗಬಿ.ಎನ್.ಚಂದ್ರಪ್ಪಬೆಂಗಳೂರುಮಾಜಿ ಸಚಿವ ಎಚ್.ಆಂಜನೇಯಸುದ್ದಿಒನ್ಸುದ್ದಿಒನ್ ನ್ಯೂಸ್ಸೋಲು
Advertisement
Next Article