ಸಿರಿಗೆರೆ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮಾ. 30 : ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಗಳಾದ ಗೋವಿಂದ ಕಾರಜೋಳ ರವರು ಇಂದು ಚಿತ್ರದುರ್ಗ ಜಿಲ್ಲೆಯ ವಿವಿಧ ಮಠಗಳು ಹಾಗೂ ದೇವಾಲಯಗಳಿಗೆ ಭೇಟಿ ಮಾಡಿ ದರ್ಶನಾರ್ಶಿವಾದವನ್ನು ಪಡೆದರು.
ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳನ್ನು ಭೇಟಿ ಮಾಡಿ ದರ್ಶನವನ್ನು ಪಡೆದರು ಈ ಸಂದರ್ಭದಲ್ಲಿ ಶ್ರೀಗಳು ಗೋವಿಂದ ಕಾರಜೋಳರವರು ಯಡೆಯೂರಪ್ಪರವರ ಸಚಿವ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದಾಗ ಸಿರಿಗೆರೆಯ ಸುತ್ತ-ಮುತ್ತಲ್ಲಿನ ಕೆರೆಗಳಿಗೆ ನೀರನ್ನು ತುಂಬಿಸುವ ಕಾಮಗಾರಿಗೆ 1250 ಕೋಟಿ ರೂ.ಗಳನ್ನು ಒಂದೇ ಬಾರಿಗೆ ಮಂಜೂರು ಮಾಡಿರುವುದನ್ನು ನೆನಪಿಸಿಕೊಂಡರು.
ಇದೇ ಸಮಯದಲ್ಲಿ ಚಿತ್ರದುರ್ಗದ ಉಚ್ಚಂಗಿಯಲ್ಲಮ್ಮ ದೇವಾಲಯ, ನೀಲಕಂಠೇಶ್ವರ ದೇವಾಲಯ, ಜಿಲ್ಲೆಯ ಕಬೀರಾನಂದಾಶ್ರಮ, ಹೂಸದುರ್ಗದ ಕುಂಚಿಟಿಗ ಮಠ, ಭಗೀರಥ ಪೀಠ, ಕಾಗಿನೆಲೆ ಗುರುಪೀಠಕ್ಕೆ ಬೇಟಿ ನೀಡುವುದರ ಮೂಲಕ ಶ್ರೀಗಳ ಹಾಗೂ ದೇವರ ದರ್ಶನವನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಗಳಾದ ಗೋವಿಂದ ಕಾರಜೋಳ ರವರು ಪಡೆದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಮುಖಂಡರಾದ ಅನಿತ್ ಕುಮಾರ್, ಲಿಂಗಮೂರ್ತಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ದಗ್ಗೆ ಶಿವಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.