For the best experience, open
https://m.suddione.com
on your mobile browser.
Advertisement

ಜುಲೈ 02 ರಂದು ಫ.ಗು.ಹಳಕಟ್ಟಿಯವರ ಜನ್ಮದಿನಾಚರಣೆ : ಕವಿಗೋಷ್ಠಿಗೆ ಆಹ್ವಾನ

07:42 PM Jun 20, 2024 IST | suddionenews
ಜುಲೈ 02 ರಂದು ಫ ಗು ಹಳಕಟ್ಟಿಯವರ ಜನ್ಮದಿನಾಚರಣೆ   ಕವಿಗೋಷ್ಠಿಗೆ ಆಹ್ವಾನ
Advertisement

ಸುದ್ದಿಒನ್, ಚಿತ್ರದುರ್ಗ, ಜೂನ್.20 :ಜುಲೈ 02 ರಂದು ಫ.ಗು.ಹಳಕಟ್ಟಿಯವರ ಜನ್ಮದಿನಾಚರಣೆಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಏರ್ಪಡಿಸಿದೆ.

Advertisement

ಫ.ಗು.ಹಳಕಟ್ಟಿಯವರ ಬದುಕು, ಬರಹ ಮತ್ತು ವಚನ ಸಾಹಿತ್ಯ ವಿಷಯಕ್ಕೆ ಸಂಬಂಧಿಸಿದಂತೆ ಕವನಗಳನ್ನು ವಾಚಿಸಲು ಅವಕಾಶವಿದೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು. ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಲಿದೆ. ಆಸಕ್ತ ಕವಿಗಳು ಜೂನ್ 25 ರ ಒಳಗೆ ತಮ್ಮ ಕವನವನ್ನು 9449510078, 9538418943 ವಾಟ್ಸಪ್ ಕಳಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ಕೋರಿದೆ.

Advertisement

Advertisement
Advertisement
Tags :
Advertisement