ಲಂಚಕೋರರನ್ನು ಹಿಡಿದುಕೊಟ್ಟರೆ ಭರ್ಜರಿ ಬಹುಮಾನ : ಏನಿದು ವೈರಲ್ ಆದ ಪೋಸ್ಟರ್
ಚಿತ್ರದುರ್ಗ : ಇತ್ತಿಚಿನ ದಿನಗಳಲ್ಲಿ ಲಂಚವಿಲ್ಲದೆ ಏನೇನು ಆಗುವುದಿಲ್ಲ. ಗ್ರಾಮ ಪಂಚಾಯ್ತಿಯಿಂದ ಹಿಡಿದು ದೊಡ್ಡಮಟ್ಟದವರೆಗೂ ಏನೇ ಕೆಲಸವಾಗಬೇಕೆಂದರು ಲಂಚ ನೀಡಬೇಕು. ಎಷ್ಟೋ ಸಲ ಹಣ ಇರುವುದಿಲ್ಲ. ಆದರೆ ಹಣ ಕೊಡದೆ ಇದ್ದರೆ ಕೆಲಸ ಆಗುವುದಿಲ್ಲ. ಹಣ ಕೇಳುವವರನ್ನು ಮಟ್ಟ ಹಾಕಬೇಕಲ್ಲ ಅಂತ ಒಮ್ಮೆ ಅನ್ನಿಸಿದ್ದರು ಈಗ ಅದಕ್ಕೆ ಅವಕಾಶವಿದೆ. ಲಂಚಕೋರರನ್ನು ಲಾಕ್ ಮಾಡಿಸಬಹುದು. ಅಂತದ್ದೊಂದು ಪೋಸ್ಟರ್ ಓಡಾಡುತ್ತಿದೆ.
ಎಜಿ. ಈಶ್ವರಪ್ಪ, ಅತ್ತಿಘಟ್ಟ ಹೆಸರಿನಲ್ಲಿ ಈ ರೀತಿಯ ಪೋಸ್ಟರ್ ಹರಿದಾಡುತ್ತಿದೆ. ಹೊಸದುರ್ಗ ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಲಂಚಾವತಾರ ತಾಂಡವವಾಡುತ್ತಿದ್ದು, ಲಂಚ ಕೇಳುವ ಅಧಿಕಾರಿ ಇಲ್ಲವೇ ಸಿಬ್ಬಂದಿಗಳನ್ನು ಲೋಕಾಯುಕ್ತಕ್ಕೆ ಹಿಡಿದುಕೊಟ್ಟರೆ 20,000 ಬಹುಮಾನವನ್ನು ನೀಡಲಾಗುವುದು ಮತ್ತು ಲಂಚ ಕೇಳಿದ ಸಂದರ್ಭದಲ್ಲಿ ನಮಗೆ ಕರೆ ಮಾಡಿದ್ದಲ್ಲಿ ಲಂಚ ಕೇಳಿದವರನ್ನು ಯಾವ ರೀತಿ ಹಿಡಿಸಬೇಕು ಎಂಬ ಸಲಹೆ ಸೂಚನೆಗಳನ್ನು ಸಹ ತಿಳಿಸಿಕೊಡಲಾಗುವುದು. ಲೋಕಾಯುಕ್ತರನ್ನು ಸಂಪರ್ಕಿಸುವ ರೀತಿ ನೀತಿ ತಿಳಿಸುತ್ತೇವೆ ಇಲ್ಲವೇ ನಾವೇ ಸಂಪರ್ಕ ಮಾಡಿಕೊಡುತ್ತೇವೆ. ಯಾರಾದರೂ ನಿಮ್ಮ ಕೆಲಸ ಮಾಡಲು ವಿಳಂಬ ಮಾಡಿದಾಗ ಇಲ್ಲ ಲಂಚ ಕೇಳಿದಾಗ ನಮಗೆ ಸಂಪರ್ಕಿಸಿ ಎಜಿ. ಈಶ್ವರಪ್ಪ, ಅತ್ತಿಘಟ್ಟ, ಮೊಬೈಲ್ ನಂಬರ್ 7259739157 ಎಂದು ನಮೂದಿಸಿದ್ದಾರೆ.
ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.
ಈ ಕುರಿತು ಮಾತನಾಡಿದ ಈಶ್ವರಪ್ಪ ನನ್ನ ವಿಚಾರಧಾರೆಗಳು ಬೇರೆ ಬೇರೆ ಇದಾವೆ. ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಸಾರ್ವಜನಿಕರಿಗೆ, ರೈತರಿಗೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ಒಂದಿಷ್ಟು ಬದಲಾವಣೆ ತರಲು ಮುಂದೆ ಬಂದೆ. ಸಮಾಜ ನಮಗೆ ಎಲ್ಲಾ ಕೊಟ್ಟಿದೆ. ನಾವು ಸಮಾಜಕ್ಕೆ ಏನಾದರೂ ಕೊಡಬಹುದು ಎಂಬ ನಿಟ್ಟಿನಲ್ಲಿ ಒಂದೊಳ್ಳೆ ಉತ್ತಮ ಕೆಲಸ ಮಾಡಬೇಕು ಎಂದಾಗ ಈರೀತಿ ಬದಲಾವಣೆ ತರಲು ಮುಂದಾಗಿ, ಜನರು ಸರಿಪಡಿಸಲು ಮುಂದಾದರೆ ಜನರು ಮಾತ್ರ ಮುಂದೆ ಬರುತ್ತಿಲ್ಲ ಎಂದು ಎಜಿ. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.