ಭಕ್ತಿಯು ವ್ಯಕ್ತಿಯಲ್ಲಿ ಶಕ್ತಿ ಮತ್ತು ಶ್ರದ್ಧೆ ವೃದ್ಧಿಸುವ ಸಾಧನ : ಶ್ರೀಶಿವಲಿಂಗಾನಂದ ಸ್ವಾಮೀಜಿ
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.11 : ವ್ಯಕ್ತಿಯ ಬದುಕು ಸಾರ್ಥಕವಾಗಲು ಭಕ್ತಿಯು ಸತ್ಪಥವನ್ನು ತೋರಿಸುತ್ತದೆ. ಸಂಕಷ್ಟಗಳನ್ನು ಸಹಿಸಿಕೊಂಡು ಸಾಧನೆ ಮಾಡಲು ಪ್ರೇರಕಶಕ್ತಿಯಾಗಿರುವ ಭಕ್ತಿಯು ವ್ಯಕ್ತಿಯಲ್ಲಿ ಶಕ್ತಿ ಮತ್ತು ಶ್ರದ್ಧೆ ವೃದ್ಧಿಸುವ ಸಾಧನವೆಂದು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಬೆಳಗಟ್ಟದಲ್ಲಿ ಭಾನುವಾರ ನಡೆದ ಶ್ರೀ ಗುರುಕರಿಬಸವೇಶ್ವರಜ್ಜಯ್ಯ ಸ್ವಾಮಿಯ 23ನೇ ಮಹಾರಥೋತ್ಸವದ ನಿಮಿತ್ತ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷರಾದ ಅಮ್ಮ ಮಹದೇವಮ್ಮ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತಕವಿ ಯುಗಧರ್ಮ ರಾಮಣ್ಣ ಅವರು ಮಾತಾಡಿ ಮಹದೇವಮ್ಮ ಅವರು ಮಹಾತಾಯಿ. ಸಾವಿರಾರು ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ನಡೆದಾಡುವ ಮಾತಾಡುವ ದೇವರು. ಬ್ರಹ್ಮಜ್ಞಾನಿ ಮಹದೇವಮ್ಮ ಅವರ ಆಧ್ಯಾತ್ಮಿಕ ಸಾಧನೆ ಅಪೂರ್ವವಾದುದು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಪಾಪೇಶ್ ನಾಯಕ, ಲಿಂಗಂ ಶ್ರೀನಿವಾಸ್, ಪ್ರಾಣೇಶ್, ತಿಮ್ಮಪ್ಪ, ರುದ್ರಮುನಿ, ಅಶ್ವತ್ಥ ನಾರಾಯಣ, ಎರ್ರಿಸ್ವಾಮಿ ಮೊದಲಾದವರು ಭಾಗವಹಿದ್ದರು.