For the best experience, open
https://m.suddione.com
on your mobile browser.
Advertisement

ಅದ್ದೂರಿಯಾಗಿ ಜರುಗಿದ ಬೆಳಗೆರೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

05:36 PM Apr 25, 2024 IST | suddionenews
ಅದ್ದೂರಿಯಾಗಿ ಜರುಗಿದ ಬೆಳಗೆರೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

Advertisement

Advertisement
Advertisement

ಚಳ್ಳಕೆರೆ, ಏಪ್ರಿಲ್. 25 : ತಾಲೂಕಿನ ಬೆಳಗೆರೆ ಹಾಗೂ ನಾರಾಯಣಪುರದ ಮಧ್ಯ ಕೆರೆ  ಏರಿ ಬುಡದಲ್ಲಿ ನೆಲೆಸಿರುವ ಭಕ್ತರನ್ನು ಕಾಪಾಡುತ್ತಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಅದ್ದೂರಿಯಾಗಿ ಜರಗಿತು.

ಸುಮಾರು ಮೂರು ದಿನಗಳಿಂದ ಜಾತ್ರೆಯನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.

ಪುರೋಹಿತ ಯಾದಾಟು ವಂಶಸ್ಥರಾದ ಶ್ರೀ ಮುರಳಿದರ ಶಾಸ್ತ್ರಿ ಅವರು ಪೌರಹಿತ್ಯದಲ್ಲಿ ಜಾತ್ರೆ ನಡದಿದ್ದು  ಬೆಳಗೆರೆ ಹಾಗೂ ನಾರಾಯಣಪುರ ಗ್ರಾಮದಲ್ಲಿ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಪ್ರಧಾನ ದೇಗುಲದಲ್ಲಿ ಹೋಮ ಹವನಾದಿಗಳು ನಡೆದವು. ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಪ್ರಾಣಗ್ರಹಣ ಮಹೋತ್ಸವ ನಡೆಯಿತು. ನಂತರ ಗ್ರಾಮಸ್ಥರು ಇಟ್ಟಿನ ಆರುತಿನ ಬೆಳಗಿದರು.  ನಂತರ ಅಲಂಕೃತ ಗೊಂಡ ಟ್ರ್ಯಾಕ್ಟರ್ ನಲ್ಲಿ ಉತ್ಸವ ಲಕ್ಷ್ಮಿ ರಂಗನಾಥ ಸ್ವಾಮಿ ಮೂರ್ತಿಯನ್ನು ಇಟ್ಟು ಉತ್ಸವ ಕಾರ್ಯಕ್ರಮ ನೆರವೇರಿಸಿದರು. ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಉತ್ಸವದಲ್ಲಿ ಕಲಾ ತಂಡಗಳು ಜಾತ್ರಗೆ  ಮೆರಗು ತಂದವು. ನಂತರ ಸಂಜೆ ಆರು ಗಂಟೆಗೆ ಅಲಂಕೃತ ಗೊಂಡ ರಥದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯನ್ನು ಕೂರಿಸಿ ಪಾದಗಟ್ಟೆಯವರಿಗೂ ಭಕ್ತರು ತೇರನ ಎಳೆದರು.

ತೇರನ್ನು ಎಳೆಯುವಾಗ ಭಕ್ತರು ಬಾಳೆಹಣ್ಣು, ಸೂರ ಮೆಣಸು ಸೂರುಬೆಲ್ಲ. ಹಾಗೂ ರಥದ ಗಾಲಿಗಳಿಗೆ  ತೆಂಗಿನಕಾಯಿ ಹಾಕುವುದರ ಮೂಲಕ ತಮ್ಮ ಸಂಕಲ್ಪ ಈಡೇರಲಿ ಎಂದು ಬೇಡಿಕೊಂಡರು. ನಂತರ ಮೂಲಸ್ಥಾನಕ್ಕೆ ಬ್ರಹ್ಮರಥವನ್ನು ಎಳೆದು ತಂದು ನಿಲ್ಲಿಸಿ ಮಾತುಗಾರಿಕೆ ಹಾಗೂ ಪಾರಿವಾಟ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಜಾತ್ರೆಗೆ ಆಂಧ್ರಪ್ರದೇಶ ತೆಲಂಗಾಣ ತುಮಕೂರು ದಾವಣಗೆರೆ ಬಳ್ಳಾರಿ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದರು.

ಬೆಳಗೆರೆ ರಂಗನಾಥ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದೇವಸ್ಥಾನ ಅರ್ಚಕರು ಹಾಗೂ ಅಣ್ಣತಮ್ಮಂದಿರರು ಹಾಗೂ ಬೆಳಗೆರೆ ನಾರಾಯಣಪುರ ಗ್ರಾಮದ ಮುಖಂಡರು ಗ್ರಾಮಸ್ಥರು ಈ ಜಾತ್ರೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಆಶೀರ್ವಾದ ಪಡೆದರು.

Advertisement
Tags :
Advertisement