For the best experience, open
https://m.suddione.com
on your mobile browser.
Advertisement

ಬಂಗಾರಕ್ಕನಹಳ್ಳಿ: ಡಿ.26 ರಿಂದ 29 ರವರೆಗೆ ಶೃಂಗೇಶ್ವರ ಸ್ವಾಮಿಯ ಕಾರ್ತಿಕ ಮಹೋತ್ಸವ

06:11 PM Dec 21, 2024 IST | suddionenews
ಬಂಗಾರಕ್ಕನಹಳ್ಳಿ  ಡಿ 26 ರಿಂದ 29 ರವರೆಗೆ ಶೃಂಗೇಶ್ವರ ಸ್ವಾಮಿಯ ಕಾರ್ತಿಕ ಮಹೋತ್ಸವ
Advertisement

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 21 : ತಾಲ್ಲೂಕಿನ ತುರುವನೂರು ಹೋಬಳಿ ಬಂಗಾರಕ್ಕನಹಳ್ಳಿ ಗ್ರಾಮದಲ್ಲಿ ಇದೇ ಡಿ.26 ರಿಂದ 29 ರವರೆಗೆ ಶೃಂಗೇಶ್ವರ ಸ್ವಾಮಿ (ನಂದೀಶ್ವರ  ಸ್ವಾಮಿ) ಯ ಕಾರ್ತಿಕ ಮಹೋತ್ಸವ ಮತ್ತು ಗ್ರಾಮದ ಎಲ್ಲಾ ದೇವರುಗಳ ಪೂಜಾ ಕಾರ್ಯಕ್ರಮ ನಡೆಯಲಿದೆ.

Advertisement
Advertisement

ಡಿ.26ರಂದು ಸಂಜೆ 7ಕ್ಕೆ ಸ್ವಾಮೀಜಿಯವರ ಗದ್ದಿಗೆ ದೀಪೋತ್ಸವ, ಡಿ.27ರಂದು ಬೆಳಿಗ್ಗೆ ಗಂಗೆ ಪೂಜೆ, ಸಂಜೆ ಅಭಿಷೇಕ, ಡಿ.28ರಂದು ಗುಡ್ಡದ ಶೃಂಗೇಶ್ವರ ಸ್ವಾಮಿಯ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಮೆರವಣಿಗೆ ಮತ್ತು ಸಂಜೆ ಕಾರ್ತಿಕ ಮಹೋತ್ಸವ  ಹಾಗೂ ಗ್ರಾಮದ ಎಲ್ಲಾ ದೇವರುಗಳ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ ಭಜನೆ ಕಾರ್ಯಕ್ರಮ ನಡೆಯಲಿದೆ. ಡಿ.29ರಂದು ಗುಡ್ಡದ ಶೃಂಗೇಶ್ವರ ಸ್ವಾಮಿಯ ಮಹಾ ಮಂಗಳಾರತಿ ಮತ್ತು ಅನ್ನಸಂತರ್ಪಣೆ (ದಾಸೋಹ) ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಬಂಗಾರಕ್ಕನಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Tags :
Advertisement