ಬಜರಂಗದಳ ಸೇವಾ ಸಪ್ತಾಹ : ತರಳಬಾಳು ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸುದ್ದಿಒನ್, ಚಿತ್ರದುರ್ಗ, ಜೂನ್. 30 : ಬಜರಂಗದಳ ಸೇವಾ ಸಪ್ತಾಹದ ಅಂಗವಾಗಿ ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ನಗರದ ಹೊರವಲಯದ ತಮಟಗಲ್ಲು ರಸ್ತೆಯಲ್ಲಿರುವ ತರಳಬಾಳು ನಗರದ ಕಡ್ಲೆಬಟ್ಟಿ ಬಳಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಂಯೋಜಕರಾದ ಪ್ರಭಂಜನ್ ಗ್ರಾಮಾಂತರ ಕಾರ್ಯದರ್ಶಿ ಡೈರಿ ಶ್ರೀನಿವಾಸ್ ಹಾಗೂ ಜಿಲ್ಲಾ ಕಾರ್ಯದರ್ಶಿ ಕೇಶವ್ ಉದ್ಘಾಟಿಸಿದರು.
ಈ ತಪಾಸಣೆಯ ಪ್ರಮುಖರಾದ ಡಾ. ಯಶಸ್ ಮತ್ತು ತಂಡ ಡಾ. ಶೋಭಾ ಮತ್ತು ಆಯುರ್ವೇದಿಕ್ ಡಾ. ಪ್ರಶಾಂತ್ ಮತ್ತು ತಂಡ ಉಪಸ್ಥಿತಿ ಇದ್ದರು. ಈ ಆರೋಗ್ಯ ತಪಾಸಣೆಯಲ್ಲಿ 100ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ಮಾಡಿ ಔಷಧಿಗಳನ್ನು ಉಚಿತವಾಗಿನೀಡಿದರು.
ಈ ಆರೋಗ್ಯ ತಪಾಸಣೆಯಲ್ಲಿ ಸಾಮಾನ್ಯ ಚಿಕಿತ್ಸೆ, ಹೃದಯ ಸಂಬಂಧಿತ ಚಿಕಿತ್ಸೆ ( ECG ವ್ಯವಸ್ಥೆ), ಚರ್ಮರೋಗ ಚಿಕಿತ್ಸೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮಾಂತರ ಸಹ ಸಂಚಾಲಕ ದರ್ಶನ್, ವಿದ್ಯಾರ್ಥಿ ಪ್ರಮುಖರಾದ ತೇಜಸ್, ದಿನೇಶ, ಕಾರ್ಯಕರ್ತರದ ಮಹೇಶ್, ಶ್ರೀನಿವಾಸ್, ಟ್ರ್ಯಾಕ್ಟರ್ ಶಿವಣ್ಣ ವಿಜಿಯಣ್ಣ, ನಗರ ಅಧ್ಯಕ್ಷರು ಅಶೋಕ್, ಜಿಲ್ಲಾ ಕಾರ್ಯ ಕಾರಣಿ ಸದಸ್ಯರ ವಿಠ್ಠಲ್, ನಗರ ಸೇವಾ ಪ್ರಮುಖವಾದ ರಘು, ಬಸವರಾಜ್, ಉಪಸ್ಥಿತರಿದ್ದರು.