For the best experience, open
https://m.suddione.com
on your mobile browser.
Advertisement

ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಜಾಮೀನು : ಮೃತನ ತಂದೆ ಶಿವನಗೌಡ್ರು ಹೇಳಿದ್ದೇನು..?

04:15 PM Dec 13, 2024 IST | suddionenews
ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಜಾಮೀನು   ಮೃತನ ತಂದೆ ಶಿವನಗೌಡ್ರು ಹೇಳಿದ್ದೇನು
Advertisement

ಚಿತ್ರದುರ್ಗ : ಜಿಲ್ಲೆಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿಗಳ ಪೈಕಿ ಏಳು ಮಂದಿಗೆ ಜಾಮೀನು ಮಂಜೂರಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದು, ಪ್ರಾರಂಭದಲ್ಲಿ ಜಾಮೀನು ನೀಡಿದ್ದರೂ, ತೀರ್ಪಲ್ಲಿ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಗನ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನಾಗಿದೆ ಎಂದು ಮಾದ್ಯಮಗಳ‌ ಮೂಲಕ ತಿಳಿಯಿತು. ನಮಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ, ಅದರ ತೀರ್ಮಾನಕ್ಕೆ ಬದ್ದವಾಗಿದ್ದೇವೆ ಎಂದಿದ್ದಾರೆ.

Advertisement

ಮುಂದೆ ದರ್ಶನ್ ನಿಮ್ಮ ಮನೆಗೆ ಬಂದ್ರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು ಅವರು ನಮ್ಮ ಮನೆಗೆ ಬಂದರೆ ಎಂಬ ವೀಚಾರ ನಮ್ಮಲ್ಲಿ ಚರ್ಚೆ ಇಲ್ಲ.‌ ನಮ್ಮ ಮಗನನ್ನ ಕಳೆದುಕೊಂಡಿದ್ದೀವಿ ದರ್ಶನ್ ಬರುವುದು ಬೇಕಿಲ್ಲ. ಬದಲಿಗೆ ನನ್ನ ಮಗನ ಸಾವಿಗೆ ನ್ಯಾಯ ಬೇಕಿದೆ ಎಂದ ಸ್ವಾಮಿ ತಂದೆ ಶಿವನಗೌಡ್ರು ತಿಳಿಸಿದ್ದಾರೆ.

Advertisement

ರೇಣುಕಾಸ್ವಾಮಿ ಕೊಲೆ ಆರೋಪದಿಂದ ದರ್ಶನ್, ಪವಿತ್ರಾಗೌಡ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಸುಮಾರು ಏಳೆಂಟು ತಿಂಗಳಿನಿಂದ ಜೈಲಿನಲ್ಲಿಯೇ ಇದ್ದರು. ದರ್ಶನ್ ಅವರಿಗೆ ಸಾಕಷ್ಟು ಅನಾರೋಗ್ಯ ಕಾಡಿತ್ತು. ಈ ಕಾರಣದಿಂದ ಜಾಮೀನಿಗೆ ಅರ್ಜಿ ಹಾಕಿ ಕಳೆದ ಕೆಲವು ದಿನಗಳ ಹಿಂದಷ್ಟೇ ಮಧ್ಯಂತರ ಜಾಮೀನು ಪಡೆದಿದ್ದರು‌. ಈಗ ರೆಗ್ಯುಲರ್ ಬೇಲ್ ಸಿಕ್ಕಿದೆ. ಇದೇ ವೇಳೆ ರೇಣುಕಾಸ್ವಾಮಿ ತಂದೆ ಶಿವನಗೌಡ್ರು, ಸರ್ಕಾರ, ಈ ಜಾಮೀನು ಮಂಜುರಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋಗಲಿ ಎಂದಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಮನೆಯಲ್ಲಿ ಆತ್ಮ ಶಾಂತಿ ಹೋಮ ಮಾಡಿಸಿದ್ದರು.

Tags :
Advertisement