Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಿ.ಎನ್.ಚಂದ್ರಪ್ಪ 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಖಚಿತ : ಹೆಚ್.ಆರ್.ಮಹಮ್ಮದ್ ಹೇಳಿಕೆ

06:31 PM Apr 17, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏ. 17 : ದೇಶದ ಭವಿಷ್ಯದ ದೃಷ್ಟಿಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಬಹಳಷ್ಟು ಮಹತ್ವ ಪಡೆದಿದೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿ ಎಚ್.ಆರ್.ಮಹಮ್ಮದ್ ಹೇಳಿದರು.

Advertisement

ಅಜಾದ್ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ ಹಾಗೂ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ದೇಶದಲ್ಲಿ ಈ ಹಿಂದೆ ರಾಜಕೀಯ ಕಾರಣಕ್ಕಾಗಿ ಟೀಕೆ, ಆರೋಪಗಳು ಕೇಳಿಬರುತ್ತಿದ್ದವು. ಚುನಾವಣೆ ಬಳಿಕ ಎಲ್ಲರೂ ಒಂದೇ ಎಂಬ ಮನೋಭಾವ, ಸಹೋದತ್ವದ ಬದುಕು ಇತ್ತು. ಆದರೆ, ಹತ್ತು ವರ್ಷದಲ್ಲಿ ಜನರ ಮನದಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಜಾಲ ವ್ಯಾಪಕವಾಗಿ ನಡೆದಿದೆ. ಜಾತಿ-ಧರ್ಮಗಳ ಮಧ್ಯೆ ಕಂದಕ ಉಂಟು ಮಾಡಲಾಗುತ್ತಿದೆ. ಈ ಹಿಂದೆ ಪ್ರಧಾನಿ ಹುದ್ದೆ ಅಲಂಕರಿಸಿದ ಎಲ್ಲ ನಾಯಕರು  ದೇಶದ ಹಿತಕ್ಕೆ ಶ್ರಮಿಸಿದ್ದರು. ಆದರೆ, ಪ್ರಸ್ತುತ ಸುಳ್ಳು, ಅಧರ್ಮವೇ ವಿಜೃಂಭಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಈ ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದರು.

Advertisement

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು, ಅಧರ್ಮವನ್ನು ಸೋಲಿಸಿ, ಸತ್ಯ, ಸಹೋದರತ್ವಕ್ಕೆ ಗೆಲುವು ತಂದುಕೊಟ್ಟ ಕನ್ನಡಿಗರು ದೇಶಕ್ಕೆ ಮಾದರಿ ಆಗಿದ್ದಾರೆ. ಇದೇ ಫಲಿತಾಂಶ ಲೋಕಸಭಾ ಚುನಾವಣೆಲ್ಲೂ ಮರುಕಳಿಸಬೇಕು ಎಂದು ಹೇಳಿದರು.

ಪ್ರಸ್ತುತ ಸುಳ್ಳು ಹೇಳುವ ಬಿಜೆಪಿ ಹಾಗೂ ಸತ್ಯ ನುಡಿಯುವ ಕಾಂಗ್ರೆಸ್ ಪಕ್ಷದ ಮಧ್ಯೆ ಚುನಾವಣೆ ನಡೆಯುತ್ತಿದ್ದು, ಸುಳ್ಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ಮನೆ ಮನೆ ಭೇಟಿ ಸಂದರ್ಭ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಂತೆ ಜನರು, ಅದರಲ್ಲೂ ಮಹಿಳೆಯರು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ಅದಕ್ಕೆ ಐದು ಗ್ಯಾರಂಟಿ ಯೋಜನೆಗಳೇ ಸ್ಪಷ್ಟ ಉದಾಹರಣೆ ಎಂದು ಜನರೇ ಹೇಳುತ್ತಿದ್ದಾರೆ. ಈ ಮಾತುಗಳು ಜನಪರ ಆಡಳಿತಕ್ಕೆ ಜನ ಸದಾ ಬೆಂಬಲಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಸಂಸದರಾಗಿದ್ದ ಸಂದರ್ಭ ಅನುದಾನವನ್ನು ಎಲ್ಲ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಿದ್ದರು. ಜೊತೆಗೆ ಸಣ್ಣ ಭ್ರಷ್ಟಚಾರಕ್ಕೂ ಅವಕಾಶ ಕೊಟ್ಟಿರಲಿಲ್ಲ. ಆದರೆ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಚಾರವೇ ಮೇಲುಗೈ ಸಾಧಿಸಿದೆ. ಜನರು ನಲವತ್ತು ಪಸೆರ್ಂಟ್ ಕಮಿಷನ್ ದಂಧೆಗೆ ಬೇಸತ್ತಿದ್ದರು. ಗುತ್ತಿಗೆದಾರರು ಆತ್ಮಹತ್ಯೆ ದಾರಿ ಹಿಡಿದಿದ್ದರು. ಇಂತಹ ಭ್ರಷ್ಡ ವ್ಯವಸ್ಥೆ ನಿರ್ಮೂಲನೆಗೆ ಕಾಂಗ್ರೆಸ್ ಹಾಗೂ ಬಿ.ಎನ್.ಚಂದ್ರಪ್ಪ ಅವರ ಗೆಲುವು ಅಗತ್ಯವಾಗಿದೆ. ಈಗಾಗಲೇ ಗುತ್ತಿಗೆದಾರರ ಸಂಘ ಚಂದ್ರಪ್ಪ ಅವರ ಗೆಲುವಿಗೆ ಟೊಂಕಕಟ್ಟಿ ನಿಂತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಚಂದ್ರಪ್ಪ ಅವರ ಗೆಲುವು ನಿಶ್ಚಿತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಎರಡು ಲಕ್ಷ ಮತಗಳಿಗಿಂತಲೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ದಾಖಲಿಸಬೇಕಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಜಮೀರ್ ಖಾನ್, ಮಹಮ್ಮದ್ ರಫಿ, ಅಬ್ದುಲ್ ಖಯೂಂ, ಇರ್ಫಾನ್ ಉಲ್ಲಾ, ಸಾದತ್ ಉಲ್ಲಾ, ಮಹೀಬುಲ್ಕಾ, ಅಬ್ರಾರ್ ಸೇರಿದಂತೆ ಅನೇಕು ಮುಖಂಡರು ಇದ್ದರು.

Advertisement
Tags :
2 lakh votes2 ಲಕ್ಷ ಮತB.N. ChandrappabengaluruchitradurgaH.R. Mohammedsuddionesuddione newswin by a marginಅಂತರದಲ್ಲಿ ಗೆಲುವು ಖಚಿತಚಿತ್ರದುರ್ಗಬಿ.ಎನ್.ಚಂದ್ರಪ್ಪಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹೆಚ್.ಆರ್.ಮಹಮ್ಮದ್
Advertisement
Next Article