ಅತ್ತ ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ, ಇತ್ತ ಚಿತ್ರದುರ್ಗದಲ್ಲಿ ಮಗುವಿಗೆ ಶ್ರೀರಾಮ ಎಂದು ನಾಮಕರಣ
ಸುದ್ದಿಒನ್, ಚಿತ್ರದುರ್ಗ, ಜನವರಿ.22 : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಈ ಸುಂದರ ಗಳಿಗೆಯನ್ನು ಇಡೀ ದೇಶದ ಹಿಂದೂಗಳು ಭಕ್ತಿ ಭಾವದಿಂದ ಆಚರಣೆ ಮಾಡುತ್ತಿದ್ದಾರೆ. ಈ ದಿನಕ್ಕಾಗಿ ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದಾರೆ. ಹೀಗಾಗಿ ಈ ವಿಶೇಷ ದಿನದಂದು ಅದೆಷ್ಟೋ ಗರ್ಭಿಣಿಯರು ಇಂದೇ ಡೆಲಿವರಿ ಮಾಡಿಸಲು ಮನವಿ ಮಾಡಿದ್ದಾರೆ. ಇದರ ಜೊತೆಗೆ ಮಕ್ಕಳಿಗೆ ನಾಮಕರಣವನ್ನು ಇಂದೇ ಮಾಡುತ್ತಿದ್ದಾರೆ. ಅದರಲ್ಲೂ ಮಕ್ಕಳಿಗೆ ಶ್ರೀ ರಾಮ ಎಂಬ ಹೆಸರನ್ನೇ ಇಡುತ್ತಿದ್ದಾರೆ.
ದೇಶದಾದ್ಯಂತ ಸಂಭ್ರಮಾಚರಣೆ ಜೋರಾಗಿದೆ. ವಿಶೇಷ ಪೂಜೆ, ಭಜನೆ, ಮಂತ್ರ ಪಠಣ, ಪ್ರಸಾದ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ.
ಇತ್ತ ಚಿತ್ರದುರ್ಗದಲ್ಲೂ ವಿಶೇಷ ಕಾರ್ಯಕ್ರಮವೊಂದು ನಡೆಯಿತು.
ಅತ್ತ ಶ್ರೀ ರಾಮಮಂದಿರದಲ್ಲಿ ಬಾಲರಾಮನಿಗೆ ಪ್ರಾಣ ಪ್ರತಿಷ್ಟಾಪನೆಯ ಶುಭ ಮುಹೂರ್ತದ ಸಮಯ 12 ಗಂಟೆ 29 ನಿಮಿಷ 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳ ವರೆಗೂ ಇರುವ 84 ಸೆಕೆಂಡುಗಳ ಅಭಿಜಿತ್ ಮುಹೂರ್ತದಲ್ಲಿ ನೆರವೇರಿದ ಇದೇ ಶುಭ ಮುಹೂರ್ತದಲ್ಲಿ ಶ್ರೀಮತಿ ಭಾವನ ಮತ್ತು ಸಾಗರ್ ದಂಪತಿಗಳು ತಮ್ಮ ಮಗುವಿಗೆ ಶ್ರೀ ರಾಮ್ ಎಂದು ನಾಮಕರಣ ಮಾಡಿದರು.
ನಗರದ ಸಾಗರ್ ಅವರಿಗೆ ಭಾವನಾ ಎಂಬುವರೊಂದಿಗೆ ಮದುವೆಯಾಗಿದೆ. ಮದುವೆಯ ನಂತರ ಭಾವನಾ ಅವರು 2023, ಸೆಪ್ಟೆಂಬರ್ 22ರಂದು ಗುಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂದಿಗೆ ಮಗುವಿಗೆ 5 ತಿಂಗಳು ತುಂಬಿದ್ದು, ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಮಗುವಿಗೆ "ಶ್ರೀರಾಮ್" ಎಂದು ನಾಮಕರಣ ಮಾಡಿದ್ದಾರೆ. ತಂದೆ ಸಾಗರ್ ಮೆಡಿಕಲ್ ರೆಪ್ರೆಸೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪತ್ನಿ ಭಾವನಾ ಗೃಹಿಣಿಯಾಗಿದ್ದಾರೆ ಎನ್ನಲಾಗಿದೆ. ಇವರಿಬ್ಬರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಟಾಪನೆ ಮಳಿಗೆಯಲ್ಲಿಯೇ ಮಗುವಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದರು.
ಅತ್ತ ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ, ಇತ್ತ ಚಿತ್ರದುರ್ಗದಲ್ಲಿ ಮಗುವಿಗೆ ಶ್ರೀರಾಮ ಎಂದು ನಾಮಕರಣ pic.twitter.com/GY3Y00ODPT
— suddione-kannada News (@suddione) January 22, 2024
ಇನ್ನು ಈ ಬಗ್ಗೆ ಮಾತನಾಡಿದ ಮಗುವಿನ ತಾಯಿ ಭಾವನ
ಸುದ್ದಿಒನ್ ನೊಂದಿಗೆ ಸಂಭ್ರಮ ಹಂಚಿಕೊಂಡರು.
ಇಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಂದು ಒಳ್ಳೆಯ ದಿನವಾಗಿರುವುದರಿಂದ ಕುಟುಂಬದ ಸದಸ್ಯರು ತಿರ್ಮಾನ ಮಾಡಲಾಯಿತು. ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಜರುಗಿದ ಸಮಯದಲ್ಲಿ ಮಗನಿಗೆ ಶ್ರೀರಾಮ್ ಎಂದು ನಾಮಕರಣ ಮಾಡಲಾಯಿತು. ಮನೆಯಲ್ಲಿ ಸತ್ಯನಾರಾಯಣ ಪೂಜೆ ಸಲ್ಲಿಸಿ ನಾಮಕರಣ ಮಾಡಲಾಯಿತು. ಇದರಿಂದ ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು".