Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುವುದನ್ನು ತಪ್ಪಿಸಿ, ಗಿಡಮರ ಬೆಳಸಿ ಆರೋಗ್ಯ ಕಾಪಾಡಿಕೊಳ್ಳಿ : ಸಿದ್ದರಾಜು

05:53 PM Jul 07, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 07 :  ನಗರದ ಬ್ಯಾಂಕ್ ಕಾಲೋನಿಯ ಶ್ರೀ ಮುರುಘ ರಾಜೇಂದ್ರ ಆಟದ ಮೈದಾನದಲ್ಲಿ ಟಾರ್ಗೆಟ್ ಗ್ರೂಪ್ ಚಿತ್ರದುರ್ಗದ ವತಿಯಿಂದ, 8ವರ್ಷದ ಸಂಭ್ರಮಾಚರಣೆ ನಿಮಿತ್ತ 81ವಿವಿಧ ಜಾತಿಯ ಸಸಿಗಳನ್ನು ಬ್ಯಾಂಕ್ ಕಾಲೋನಿ ನಿವಾಸಿಗಳ ಸಹಯೋಗದಲ್ಲಿ ಜು. 7ರಂದು ನೆಡಲಾಯಿತು.

Advertisement

ಸದರಿ ಕಾರ್ಯಕ್ರಮದಲ್ಲಿ ಟಾರ್ಗೆಟ್ ಗ್ರೂಪ್‍ನ ಮುಖ್ಯಸ್ಥರಾದ ಸಿದ್ದರಾಜು ಮಾತಾಡುತ್ತಾ ಜನರು ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಾರೆ, ಎಲ್ಲಾ ಕಡೆ ಗಿಡಗಳು ಚೆನ್ನಾಗಿ ಬೆಳೆಸಿದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆ ಯಾಗಿ ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುವುದು ತಪ್ಪುತ್ತದೆ ಎಂದರು.

ಬ್ಯಾಂಕ್ ಕಾಲೋನಿ ನಿವಾಸಿ ಪರಿಸರ ಪ್ರೇಮಿ ನಾಗರಾಜ್ ಸಂಗಮ್ ಈ ಹಿಂದೆ ಚಿತ್ರದುರ್ಗ ಜಿಲ್ಲೆ ಯಲ್ಲಿ ಡಿ. ಸಿ. ರವರಾಗಿದ್ದ  ಅಮರನಾರಾಯಣ ರವರು ಇಡೀ ಬ್ಯಾಂಕ್ ಕಾಲೋನಿಯಲ್ಲಿ 500 ಗಿಡಗಳನ್ನು ನಾಟಿ ಮಾಡಿದ್ದೂ ಅವುಗಳು ಈಗ ಹೆಮ್ಮರವಾಗಿವೇ ಎಂದು ಜ್ಞಾಪನ ಮಾಡಿದರು,

ಗಿಡ ಬೆಳೆದಲ್ಲಿ ನಮ್ಮ ಅರೋಗ್ಯ ಕ್ಕೆ ಬೇಕಾದ ಒಳ್ಳೆಯ ಗಾಳಿ ಸಿಗಲಿದೆ, ಎಲ್ಲರೂ ಪರಿಸರ ಬೆಳೆಸಲು ಮುಂದಾಗಿ ಪ್ರತಿ ಮನೆಯ ಮುಂದೆ ಒಂದು ಗಿಡ ತಪ್ಪದೆ ಬೆಳೆಸಲು ಕರೆ ನೀಡಿದರು ಅಲ್ಲದೆ ಟಾರ್ಗೆಟ್ ಗ್ರೂಪ್ ಇಲ್ಲಿಯ ವರೆಗೆ ನಗರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ವಿವಿಧ ಕಡೆ ಹಾಕಿದ್ದು ಅವುಗಳನ್ನು ನಾವು ನೀರು ಹಾಕಿ ಪೋಶಿಸಬೇಕಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ, ನಾಗರಾಜ್ ಸಂಗಮ್, ಕಿರಣ್ ಶಂಕರ್, ರಾಜಶೇಖರ್, ತಿಪ್ಪೇಸ್ವಾಮಿ, ವರ್ಷ, ಅಧಿಕಾರಿ ಮಹನಂದಿ, ಚಂದ್ರಹಾಸ, ರೇಣುಕಮ್ಮ, ಮತ್ತು ನಾಗರಾಜ್ ಹೇಮಂತ್ ಇತರು ಹಾಗೂ ಟಾರ್ಗೆಟ್ ಗ್ರೂಪ್‍ನ ಸದಸ್ಯರು ಭಾಗವಹಿಸಿದ್ದರು.

Advertisement
Tags :
Avoid queuingbengaluruchitradurgadrug storesgrowing plantsmaintain healthSiddharajusuddionesuddione newsಆರೋಗ್ಯ ಕಾಪಾಡಿಕೊಳ್ಳಿಔಷಧಿ ಅಂಗಡಿಗಿಡಮರ ಬೆಳಸಿಚಿತ್ರದುರ್ಗಬೆಂಗಳೂರುಸಿದ್ದರಾಜುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article