For the best experience, open
https://m.suddione.com
on your mobile browser.
Advertisement

ಪ್ರೇಕ್ಷಕರು ರಂಗ ಕಲಾವಿದರನ್ನು ಪ್ರೋತ್ಸಾಹಿಸಬೇಕು : ಆರ್.ಶೇಷಣ್ಣಕುಮಾರ್

06:00 PM Jan 09, 2024 IST | suddionenews
ಪ್ರೇಕ್ಷಕರು ರಂಗ ಕಲಾವಿದರನ್ನು ಪ್ರೋತ್ಸಾಹಿಸಬೇಕು   ಆರ್ ಶೇಷಣ್ಣಕುಮಾರ್
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.09 : ಆಧುನಿಕ ಯುಗದಲ್ಲಿ ರಂಗ ಚಟುವಟಿಕೆ ಕಡಿಮೆಯಾಗುತ್ತಿರುವುದರಿಂದ ಪ್ರೇಕ್ಷಕರು ರಂಗ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಆರ್.ಶೇಷಣ್ಣಕುಮಾರ್ ಮನವಿ ಮಾಡಿದರು.

Advertisement

ಬಹುಮುಖಿ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಾರಂಜಿ ಕಲ್ಚರಲ್ ಟ್ರಸ್ಟ್ ಮದಕರಿಪುರ, ಐತಿಹ್ಯ ರಂಗ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಕರ್ನಾಟಕ ಸಂಭ್ರಮ 50 ರ ಪ್ರಯುಕ್ತ ನಡೆದ ರಂಗೋತ್ಸವವನ್ನು ತಬಲಾ ಬಾರಿಸುವ ಮೂಲಕ ಉದ್ಗಾಟಸಿ ಮಾತನಾಡಿದರು.

ರಂಗ ಚಟುವಟಿಕೆ ನಿರಂತರವಾಗಿ ನಡೆಯುತ್ತಿದ್ದಾಗ ಮಾತ್ರ ರಂಗ ಕಲಾವಿದರ ಬದುಕು ಸುಧಾರಣೆಯಾಗುತ್ತದೆ ಎಂದು ಹೇಳಿದರು.

ರಂಗೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ನಾಟಕ, ಸಂಗೀತಕ್ಕೆ ಪ್ರೋತ್ಸಾಹ ನೀಡುವವರು ಕಡಿಮೆಯಾಗುತ್ತಿದ್ದಾರೆ. ರಂಗಭೂಮಿ ಕಲೆಗೆ ಚಿತ್ರದುರ್ಗ ಹಿಂದಿನಿಂದಲೂ ಪ್ರೋತ್ಸಾಹಿಸಿಕೊಂಡು ಬರುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಕಲಾ ತಂಡಗಳಿವೆ. ಕಲೆಗೆ ಎಂದಿಗೂ ಸಾವಿಲ್ಲ ಎಂದು ಹೇಳಿದರು.
ರಾಜ್ಯ ಪ್ರಶಸ್ತಿ ಪುರಸ್ಕøತ ರಂಗ ಕರ್ಮಿ ಪಿ.ತಿಪ್ಪೇಸ್ವಾಮಿ ಮಾತನಾಡುತ್ತ ಒಂದು ಕಾಲದಲ್ಲಿ ಹಳ್ಳಿ ಜನ ನಾಟಕಗಳನ್ನು ತುಂಬಾ ಆಸಕ್ತಿಯಿಂದ ನೋಡುತ್ತಿದ್ದರು. ನಾಟಕವೆಂದರೆ ಗ್ರಾಮೀಣ ಭಾಗಗಳಲ್ಲಿ ಹಬ್ಬದ ವಾತಾವರಣವಿರುತ್ತಿತ್ತು. ಈಗ ಗ್ರಾಮೀಣ ಮಟ್ಟದಲ್ಲಿ ನಾಟಕಗಳು ನಶಿಸುತ್ತಿವೆ. ನಾಟಕ ವಾದ್ಯ ನುಡಿಸುವವರನ್ನು ಕೇಳುವವರೆ ಇಲ್ಲದಂತಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಜೆ.ಸಿ.ಹಳ್ಳಿ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಓ.ಚಿತ್ತಯ್ಯ ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ಸಮೂಹ ಮಾಧ್ಯಮಗಳ ಹೊಡೆತಕ್ಕೆ ಸಿಲುಕಿ ನಾಟಕಗಳು ನಶಿಸುತ್ತಿವೆ. ಸಾಮಾಜಿಕ, ನೈತಿಕ ಮೌಲ್ಯಗಳನ್ನು ಸಾರುವಲ್ಲಿ ನಾಟಕಗಳ ಪಾತ್ರ ಪ್ರಮುಖ ಎಂದು ಹೇಳಿದರು.

ಪತ್ರಕರ್ತ ಗೌನಳ್ಳಿ ಗೋವಿಂದಪ್ಪ ಮಾತನಾಡಿ ರಂಗಚಟುವಟಿಕೆ ಕೆಲವರಿಗೆ ಮಾತ್ರ ಸೀಮಿತವಾಗಿದೆ. ವಾಟ್ಸಪ್, ಫೇಸ್‍ಬುಕ್, ಸಾಮಾಜಿಕ ಜಾಲತಾಣ, ಮೊಬೈಲ್, ಟಿ.ವಿ.ಹಾವಳಿಯಿಂದ ನಾಟಕಗಳನ್ನು ನೋಡುವವರು ತುಂಬಾ ವಿರಳವಾಗಿದ್ದಾರೆಂದು ವಿಷಾಧಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಮಾತನಾಡುತ್ತ ಉಚಿತವಾಗಿ ನಾಟಕ ಪ್ರದರ್ಶಿಸಿದರೂ ನೋಡಲು ಯಾರೂ ಬರದಂತ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ರಂಗ ಕಲಾವಿದರ ಬದುಕು ಅತಂತ್ರವಾಗಿದೆ. ದೃಶ್ಯ ಮಾಧ್ಯಮ, ಮೊಬೈಲ್‍ಗೆ ಜನ ಮಾರು ಹೋಗಿರುವುದರಿಂದ ಮನೋರಂಜನೆ ಕಡಿಮೆಯಾಗಿದೆ ಎಂದರು.

ರಚನಾ ಹವ್ಯಾಸಿ ಕಲಾ ಸಂಘದ ಎಂ.ಸಿ.ಮಂಜುನಾಥ್, ಟಿ.ಮಧು ಇವರುಗಳು ವೇದಿಕೆಯಲ್ಲಿದ್ದರು.
ತುಮಕೂರಿನ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದವರು ಸಾಂಬಶಿವ ಪ್ರಹಸನ ಮತ್ತು ಹೊಟ್ಟೆಯ ಹಾಡು ನಾಟಕಗಳನ್ನು ಪ್ರದರ್ಶಿಸಿದರು.

Tags :
Advertisement