Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳ ಬೆಂಕಿ ಇಲ್ಲದೆ ಅಡುಗೆ ತಯಾರಿಸುವ ಕಾರ್ಯಕ್ರಮ

09:09 PM Jun 29, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜೂನ್.29 :  ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಬೆಂಕಿ ಇಲ್ಲದೆ ಅಡುಗೆ ತಯಾರಿಸುವ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. 

Advertisement


ಮಕ್ಕಳು ಕೇವಲ ಓದಿಗಷ್ಟೇ ಸೀಮಿತರಾಗದೇ ಸಹಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಹಾಗೂ ಮಕ್ಕಳಲ್ಲಿರುವ  ಪ್ರತಿಭೆಯನ್ನು  ಹೊರತರುವಲ್ಲಿ  ಇಂತಹ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ.  ಪ್ರತಿ ದಿನ ಅಮ್ಮನ ಕೈ ರುಚಿ ತಿಂದು, ಇಂದು ಸ್ವತಃ ತಾವೇ  ತಯಾರಿಸಿ  ಉಪ್ಪು, ಹುಳಿ, ಖಾರ, ಪರೀಕ್ಷಿಸಿ ತಯಾರಿಸುವ ಖಾದ್ಯ  ಮಕ್ಕಳಲ್ಲಿರುವ ಕೌಶಲ್ಯವನ್ನು  ಹೊರತರುವಲ್ಲಿ ಸೂಕ್ತ ವೇದಿಕೆ ಕಲ್ಪಿಸಿದಂತಾಗುತ್ತದೆ. ಆದ್ದರಿಂದ  ನಮ್ಮ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 6 ರಿಂದ 9ನೇ ತರಗತಿಯ  ವಿದ್ಯಾರ್ಥಿಗಳು  ತಾವೇ ತಿಂಡಿ ತಿನಿಸುಗಳನ್ನು ತಯಾರಿಸುವುದರ ಮೂಲಕ ಗಮನ ಸೆಳೆದರು.

ಮಕ್ಕಳು  ತಾವು ತಾಯಾರಿಸುವ ಆಹಾರ ಪದಾರ್ಥಗಳನ್ನು  ಅವುಗಳ ಪೌಷ್ಟಿಕಾಂಶ, ಕಡಿಮೆ ಖರ್ಚು ಮತ್ತು ಅವುಗಳಿಂದ ನಮ್ಮ ಆರೋಗ್ಯಕ್ಕೆ ಆಗುವ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ರುಚಿಕರವಾದ  ತಿನಿಸುಗಳನ್ನು ತಯಾರಿಸಿ, ಪ್ರದರ್ಶಿಸಿ ತಾವು ಮಾಡಿದ ವಿಧಾನವನ್ನು ವಿವರಿಸುವ ಮೂಲಕ ಎಲ್ಲರ ಗಮನ ಸೆಳೆದರು.

Advertisement

ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರೇಖಾ ಪಿ ವಿ, ಚಿನ್ನಾಂಬೆ, ಅರ್ಚನಾ.ಎನ್.ಜಿ, ಅನುರಾಧ.ಎಸ್.ಇ ಭಾಗವಹಿಸಿದ್ದರು .
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ ವಿಜಯ ಕುಮಾರ್ ಸರ್ ಅವರು ಮಕ್ಕಳು ತಯಾರಿಸಿದ ಖಾದ್ಯಗಳನ್ನು ಸವಿದು  ಮಕ್ಕಳನ್ನು ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಸಂಸ್ಥೆಯ ನಿರ್ದೇಶಕರಾದ ಶ್ರೀ ಪೃಥ್ವೀಶ್ ಎಸ್.ಎಂ, ಶಾಲಾ ಮುಖ್ಯೋಪಾಧ್ಯಾಯರಾದ ತಿಪ್ಪೆಸ್ವಾಮಿ ಎನ್ ಜಿ, ಐಸಿಎಸ್‍ಸಿ ಪ್ರಾಂಶುಪಾಲರಾದ ಬಸವರಾಜಯ್ಯ.ಪಿ ಹಾಗೂ ಸಂಸ್ಥೆಯ ಬೋಧಕ / ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

Advertisement
Tags :
attractedbengaluruchitradurgaCooking without fireProgramsuddionesuddione newsVidya vikas vidya samstheಕಾರ್ಯಕ್ರಮಚಿತ್ರದುರ್ಗಬೆಂಕಿ ಇಲ್ಲದೆ ಅಡುಗೆಬೆಂಗಳೂರುವಿದ್ಯಾ ವಿಕಾಸ ವಿದ್ಯಾ ಸಂಸ್ಥೆವಿದ್ಯಾರ್ಥಿಗಳುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article